AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ರಷ್ಯಾದ ಸಂಸತ್ತು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ಸಮ್ಮತಿ ಸೂಚಿಸಿದೆ!

ಉಕ್ರೇನ್‌ನ ಮೇಲೆ ಆಕ್ರಮಣ ನಡೆಸಲು ಅದರ ಗಡಿಯ ಬಳಿ ರಷ್ಯಾ 1,50,000 ಸೈನಿಕರನ್ನು ನಿಯೋಜಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಆರೋಪಿಸಿದ ವಾರಗಳ ನಂತರ ಮಾಸ್ಕೋ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ತಲೆದೋರಿದ್ದ ಉದ್ವಿಗ್ನತೆ ಉಲ್ಬಣಗೊಂಡಿದೆ.

ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ರಷ್ಯಾದ ಸಂಸತ್ತು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ಸಮ್ಮತಿ ಸೂಚಿಸಿದೆ!
ವ್ಲಾದಿಮಿರ್ ಪುಟಿನ್
TV9 Web
| Edited By: |

Updated on: Feb 23, 2022 | 12:52 AM

Share

ರಷ್ಯಾ ಸಂಸತ್ತಿನ ಮೇಲ್ಮನೆಯು (upper house) ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಮತ್ತು ಎರಡು ದೇಶಗಳ ನಡುವಿನ ಗಡಿಭಾಗದಲ್ಲಿ ಸೇನೆಯನ್ನು ಜಮಾವಣೆ ಮಾಡಲು ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರಿಗೆ ಸಮ್ಮತಿ ನೀಡಿದೆ. ಇದಕ್ಕೆ ಮೊದಲು ಪುಟಿನ್ ಅವರು ರಷ್ಯಾದಿಂದ ಹೊರಗೆ ಸೇನಾ ಕಾರ್ಯಾಚರಣೆ ನಡೆಸಲು ಸಂಸತ್ತಿನ ಅನುಮತಿ ಕೋರಿದ್ದರು. ಉಕ್ರೇನ್ ಮೇಲೆ ದಾಳಿ ನಡೆಸಲು ತುದಿಗಾಲಲ್ಲಿ ನಿಂತಿದ್ದ ಪುಟಿನ್ ಅವರಿಗೆ ಸಂಸತ್ತಿನ ಅನುಮತಿ ಸಿಕ್ಕಿರುವುದರಿಂದ ಅಅವರ ನೆರೆರಾಷ್ಟ್ರದ ಮೇಲೆ ಯಾವುದೇ ಕ್ಷಣ ದಾಳಿ ನಡೆಸುವ ಆತಂಕ ಸೃಷ್ಟಿಯಾಗಿದೆ. ಮಂಗಳವಾರ ನಡೆದ ಸಾಯಂಕಾಲದ ಅಧಿವೇಶನದಲ್ಲಿ ಮಾತಾಡಿದ ರಷ್ಯಾದ ಉಪ ರಕ್ಷಣಾ ಸಚಿವರು (deputy defense minister) ದಾಳಿ ನಡೆಸುವುದು ಬಿಟ್ಟು ಬೇರೆ ಆಯ್ಕೆ ತಮ್ಮ ಮುಂದೆ ಇಲ್ಲ ಎಂದು ಹೇಳಿದರು. ಸದರಿ ಅಧಿವೇಶನವು ಚೇಂಬರ್ ವೆಬ್ ಸೈಟ್ ನಲ್ಲಿ ನೇರ ಪ್ರಸಾರಗೊಂಡಿತು.

ಸ್ವಯಂ-ಘೋಷಿತ ಗಣರಾಜ್ಯ ಎನಿಸಿಕೊಂಡಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಜೊತೆ ಸ್ನೇಹ ಒಪ್ಪಂದಗಳಿಗೆ ರಷ್ಯಾದ ಸಂಸತ್ತು ಅನುಮೋದನೆ ನೀಡಿದೆ. ಈ ಕ್ರಮವು ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ನಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸಲು, ಸೇನೆಗಳನ್ನು ನಿಯೋಜಿಸಲು ಮತ್ತು ಆರ್ಥಿಕ ಸಮಗ್ರತೆಯನ್ನು ಬಲಪಡಿಸುವ ಸಲುವಾಗಿ ಒಂದು ಜಂಟಿ ನಿಲುವು ತೆಗೆದುಕೊಳ್ಳಲು ನೆರವಾಗುತ್ತದೆ ಎಂದು ಮಾಸ್ಕೋ ಹೇಳಿದೆ.

ಉಕ್ರೇನ್ ಗಡಿಭಾಗದಲ್ಲಿ ರಷ್ಯನ್ ಸೇನೆ ಭಾರಿ ಪ್ರಮಾಣದಲ್ಲಿ ಜಮಾವಣೆಗೊಂಡು ಯುದ್ಧಧ ಭೀತಿ ಸೃಷ್ಟಿಯಾಗಿರುವ ಸಮಯದಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಸೇನೆ ಜಮಾವಣೆ ಮಾಡಿರುವುದನ್ನು ಮಾಸ್ಕೋ ನಿರಾಕರಿಸುತ್ತಲೇ ಬಂದಿದೆ.

ಉಕ್ರೇನ್ ಗಡಿಭಾಗದ ಪ್ರಾಂತ್ಯದಲ್ಲಿ ಶಾಂತಿಪಾಲನೆಯ ಉದ್ದೇಶದಿಂದ ಸೇನೆಯನ್ನು ಕಳಿಸಲಾಗಿದೆ ಎಂಬ ರಷ್ಯಾದ ವಾದವನ್ನು ಯುಎಸ್ ‘ನಾನ್ಸೆನ್ಸ್’ ಎಂದು ಬಣ್ಣಿಸಿದೆ. ‘ರಷ್ಯಾ ತೆಗೆದುಕೊಂಡಿರುವ ಕ್ರಮಗಳ ಪರಿಣಾಮಗಳು ಉಕ್ರೇನ್‌, ಯುರೋಪ್‌ ಮತ್ತು ಪ್ರಪಂಚದಾದ್ಯಂತ ಭೀಕರವಾಗಿರಲಿವೆ,’ ಎಂದು ವಿಶ್ವಸಂಸ್ಥೆಯ ಯುಎಸ್ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್ ಕೌನ್ಸಿಲ್‌ನ 15 ಸದಸ್ಯರ ತುರ್ತು ಸಭೆಯಲ್ಲಿ ಹೇಳಿದರು.

ಉಕ್ರೇನ್‌ನ ಮೇಲೆ ಆಕ್ರಮಣ ನಡೆಸಲು ಅದರ ಗಡಿಯ ಬಳಿ ರಷ್ಯಾ 1,50,000 ಸೈನಿಕರನ್ನು ನಿಯೋಜಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಆರೋಪಿಸಿದ ವಾರಗಳ ನಂತರ ಮಾಸ್ಕೋ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ತಲೆದೋರಿದ್ದ ಉದ್ವಿಗ್ನತೆ ಉಲ್ಬಣಗೊಂಡಿದೆ.

ಉಕ್ರೇನ್ ಮೇಲೆ ಆಕ್ರಮಣ ಮಾಡಲು ಯತ್ನಿಸುತ್ತಿರುವ ಎಂಬ ಅರೋಪವನ್ನು ರಷ್ಯಾ ನಿರಾಕರಿಸಿದೆ ಮತ್ತು ಪಶ್ಚಿಮ ರಾಷ್ಟ್ರಗಳ ವಾದವನ್ನು ಉನ್ಮಾದದ ಅತಿರೇಕ ಅಂತ ಬಣ್ಣಿಸಿದೆ.

ಮಾಸ್ಕೋದ ಇತ್ತೀಚಿನ ಕ್ರಮವನ್ನು ದುರದೃಷ್ಟಕರ ಎಂದು ಹೇಳಿರುವ ಯುಕೆ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್, ‘ಮಂಗಳವಾರ ಬೆಳಿಗ್ಗೆಯೇ ಉಕ್ರೇನ್

ಮೇಲೆ ರಷ್ಯಾದ ಆಕ್ರಮಣವ ಪ್ರಾರಂಭವಾಗಿದೆ,’ ಎಂದಿದ್ದಾರೆ. ಎರಡು ಬೇರ್ಪಟ್ಟ ಪ್ರದೇಶಗಳಿಗೆ ಮಾನ್ಯತೆ ನೀಡುವ ರಷ್ಯಾದ ಕ್ರಮವು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಮಾಸ್ಕೋ ವಿರುದ್ಧ ನಿರ್ಬಂಧಗಳನ್ನು ಹೇರಲು ಪ್ರೇರೇಪಿಸಿದೆ. ರಷ್ಯಾದ ಮೂವರು ಆಗರ್ಭ ಶ್ರೀಮಂತರು ಮತ್ತು ಐದು ಬ್ಯಾಂಕುಗಳನ್ನು ಯುನೈಟೆಡ್ ಕಿಂಗ್ಡಮ್ ಗುರಿಯಾಗಿಸಿಕೊಂಡಿದೆ.

ಪ್ರತ್ಯೇಕಗೊಂಡ ಪ್ರಾಂತ್ಯಗಳಲ್ಲಿ ಸೇನೆಯ ಜಮಾವಣೆ ಮತ್ತು ಸರಿದಾಟವನ್ನು ಯುನೈಟೆಡ್ ಕಿಂಗ್ಡಮ್ ನಂತೆಯೇ ರಷ್ಯಾದ ಅತಿಕ್ರಮಣ ಎಂದು ಭಾವಿಸಿರುವ ವ್ಹೌಟ್ ಹೌಸ್, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಗಣರಾಜ್ಯದ ಡಾನ್ಬಾಸ್ ಪ್ರಾಂತ್ಯದಲ್ಲಿ ಹೊಸದಾಗಿ ಹೂಡಿಕೆ, ವ್ಯಾಪಾರ, ಅಮೇರಿಕದ ಜನರಿಂದ ಬಂಡವಾಳ ಹೂಡುವುದು ಮೊದಲಾದವುಗಳ ಮೇಲೆ ನಿರ್ಬಂಧ ಹೇರಿದೆ.

ಜರ್ಮನಿಯ ಚಾನ್ಸಲರ್ ಒಲಾಫ್ ಶೋಲ್ಜ್ ಸಹ ರಷ್ಯಾದ ಕ್ರಮವನ್ನು ಖಂಡಿಸಿದ್ದು ರಷ್ಯಾದಿಂದ ಜರ್ಮಿನಿಗೆ ನೇರವಾಗಿ ಅನಿಲ ಪೂರೈಸಲು ರಷ್ಯಾದ ನಾರ್ಡ್ ಸ್ಟ್ರಿಮ್ 2 ಗ್ಯಾಸ ಪೈಪ್ ಲೈನ್ ಯೋಜನೆಯನ್ನು ಸ್ಥಗಿತಗೊಳಿಸಿವುದಾಗಿ ಹೇಳಿದ್ದಾರೆ. ರಷ್ಯಾದಿಂದ ನೈಸರ್ಗಿಕ ಅನಿಲವನ್ನು ಅತಿಹೆಚ್ಚು ಪ್ರಮಾಣದಲ್ಲಿ ಖರೀದಿಸುವ ಜರ್ಮನಿಯು, ನಿರ್ಮಾಣ ಹಂತ ಪೂರ್ತಿಗೊಂಡಿದ್ದರೂ ಇನ್ನೂ ಪೂರೈಕೆ ಕೆಲಸ ಆರಂಭಿಸಬೇಕಿರುವ ಪೈಪ್ ಪೈನ್ ಯೋಜನೆ ಸ್ಥಗಿತಗೊಳಿಸುವುದಾಗಿ ಹೇಳಿದ್ದು ರಷ್ಯಾಗೆ ಯುರೋಪಿಯನ್ ಯೂನಿಯನ್ ನಿಂದ ಬೀಳಬಹುದಾದ ಅತಿದೊಡ್ಡ ಪೆಟ್ಟು ಅಗಿದೆ.

ಉಕ್ರೇನ್ ಎಂದಿಗೂ ನ್ಯಾಟೋ ಸದಸ್ಯನಾಗುವುದು ಬೇಡ ಮತ್ತು ಪೂರ್ವ ಯುರೋಪಿನಲ್ಲಿ ನ್ಯಾಟೋ ತನ್ನ ಸೈನ್ಯವನ್ನು ಹಿಂದಕ್ಕೆ ಪಡೆಯಬೇಕು ಎಂದು ರಷ್ಯಾ ಒತ್ತಾಯಿಸುತ್ತಿದೆಯಾದರೂ, ನ್ಯಾಟೋ ಎರಡು ಬೇಡಿಕೆಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ.

ಇದನ್ನೂ ಓದಿ:   ಸಂಯಮದಿಂದ ಸಮಸ್ಯೆ ಪರಿಹರಿಸಿಕೊಳ್ಳಿ; ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧಿವೇಶನದಲ್ಲಿ ಉಕ್ರೇನ್​-ರಷ್ಯಾಕ್ಕೆ ಭಾರತದ ಸಲಹೆ