ರಾಣಿ ಎಲಿಜಬೆತ್ II ಪ್ಲಾಟಿನಂ ಜುಬಿಲಿ ಸಂಭ್ರಮಾಚರಣೆಯಲ್ಲಿ ಪ್ರದರ್ಶನಗೊಳ್ಳಲಿದೆ ಮರುಬಳಕೆಯ ಪ್ಲಾಸ್ಟಿಕ್​​ನಿಂದ ಮಾಡಿದ ವಿಶೇಷ ಸೀರೆ

. "ರಾಣಿಯ ಪ್ಲಾಟಿನಂ ಜುಬಿಲಿ ಸ್ಪರ್ಧೆಗೆ ಕಾಲಾತೀತ ಉಡುಪಾಗಿರುವ ಸೀರೆಯನ್ನು ಮರು-ಕಲ್ಪನೆ ಮಾಡುವುದು ಗೌರವ ಮತ್ತು ಸಂತೋಷದ ಸಂಗತಿ ಎಂದು ನಟ್ಕಟ್ ಸಹ-ಕಲಾತ್ಮಕ ನಿರ್ದೇಶಕ ಸಿಮ್ಮಿ ಗುಪ್ತಾ ಹೇಳಿದರು.

ರಾಣಿ ಎಲಿಜಬೆತ್ II ಪ್ಲಾಟಿನಂ ಜುಬಿಲಿ ಸಂಭ್ರಮಾಚರಣೆಯಲ್ಲಿ ಪ್ರದರ್ಶನಗೊಳ್ಳಲಿದೆ ಮರುಬಳಕೆಯ ಪ್ಲಾಸ್ಟಿಕ್​​ನಿಂದ ಮಾಡಿದ ವಿಶೇಷ ಸೀರೆ
ರಾಣಿ ಎಲಿಜಬೆತ್ IIImage Credit source: AP/PTI
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 02, 2022 | 8:00 AM

ಲಂಡನ್: ಬ್ರಿಟಿಷ್ ಸಿಂಹಾಸನದಲ್ಲಿ (British throne) ರಾಣಿ ಎಲಿಜಬೆತ್ IIರ (Elizabeth II) 70 ವರ್ಷಗಳ ಮೆಗಾ ಪ್ಲಾಟಿನಂ ಜುಬಿಲಿ ಆಚರಣೆಗಳಿಗಾಗಿ (Platinum Jubilee celebrations) ಬ್ರಿಟನ್​​ನ ಎಲ್ಲಾ ಭಾಗಗಳಲ್ಲಿ 200,000 ಕ್ಕೂ ಹೆಚ್ಚು ಸ್ಥಳೀಯ ಕಾರ್ಯಕ್ರಮಗಳು ಮತ್ತು ಸ್ಟ್ರೀಟ್ ಪಾರ್ಟಿಗಳನ್ನು ನಿರೀಕ್ಷಿಸಲಾಗಿದೆ. ಗುರುವಾರ ಮತ್ತು ಭಾನುವಾರದ ನಡುವಿನ ವಿಸ್ತೃತ ಬ್ಯಾಂಕ್ ಹಾಲಿಡೇ ವಾರಾಂತ್ಯದ ಅವಧಿಯಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ನಾಲ್ಕು ಮೀಟರ್ ಎತ್ತರದ ಬೊಂಬೆಗಳ ಮೇಲೆ ಸುಸ್ಥಿರ ಮರುಬಳಕೆಯ ಪ್ಲಾಸ್ಟಿಕ್‌ನಿಂದ ಮಾಡಲಾದ  ಸೀರೆಯನ್ನು ಸಹ ಪ್ರದರ್ಶಿಸಲಾಗುತ್ತದೆ. ಭಾನುವಾರದಂದು ನಡೆದ ಪ್ಲಾಟಿನಂ ಜುಬಿಲಿ ಪೆಜೆಂಟ್ ಫಿನಾಲೆಯಲ್ಲಿ ಬಾಲಿವುಡ್ ಥೀಮ್ ವಿಶೇಷ ವೆಡ್ಡಿಂಗ್ ಪಾರ್ಟಿ ಸೀರೆ ಇರಲಿದೆ ಎಂದು ಯುಕೆಯ ದಕ್ಷಿಣ ಏಷ್ಯಾದ ಪ್ರದರ್ಶನ ಕಂಪನಿ ನಟ್ಕಟ್ ಹೇಳಿದೆ. “ರಾಣಿಯ ಪ್ಲಾಟಿನಂ ಜುಬಿಲಿ ಸ್ಪರ್ಧೆಗೆ ಕಾಲಾತೀತ ಉಡುಪಾಗಿರುವ ಸೀರೆಯನ್ನು ಮರು-ಕಲ್ಪನೆ ಮಾಡುವುದು ಗೌರವ ಮತ್ತು ಸಂತೋಷದ ಸಂಗತಿ ಎಂದು ನಟ್ಕಟ್ ಸಹ-ಕಲಾತ್ಮಕ ನಿರ್ದೇಶಕ ಸಿಮ್ಮಿ ಗುಪ್ತಾ ಹೇಳಿದರು. ಈ ಸೀರೆಯನ್ನು ಖ್ಯಾತ ಐರಿಶ್ ಫ್ಯಾಶನ್ ಡಿಸೈನರ್ ಪಾಲ್ ಕಾಸ್ಟೆಲ್ಲೋ ವಿನ್ಯಾಸಗೊಳಿಸಿದ್ದು ಆರ್ಟ್ಸ್ ಯೂನಿವರ್ಸಿಟಿ ಬೋರ್ನ್‌ಮೌತ್ ವಿದ್ಯಾರ್ಥಿಗಳು ಗುಂಪು ಯೋಜನೆ ಮೂಲಕ ಮಾಡಲಾಗಿದೆ. ಪ್ಲಾಟಿನಂ ಜುಬಿಲಿ ಸ್ಪರ್ಧೆಯು ಲಂಡನ್‌ನಲ್ಲಿರುವ ದಿ ಮಾಲ್ ಮೂಲಕ ಸಾಗಿ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಕೊನೆಗೊಳ್ಳುತ್ತದೆ. 96 ವರ್ಷ ಹರೆಯದ ರಾಣಿಗೆ ಖ್ಯಾತ ಗಾಯಕ ಎಡ್ ಶಿರನ್ ಸೇರಿದಂತೆ ಸುಮಾರು 150 ಪ್ರಮುಖ ಪ್ರದರ್ಶಕರು ಗೌರವ ಸಲ್ಲಿಸಲಿದ್ದಾರೆ.

ಡಬಲ್ ಡೆಕ್ಕರ್ ಬಸ್‌ನ ಗಾತ್ರದ ದೈತ್ಯ ಡ್ರ್ಯಾಗನ್ ಬೊಂಬೆ, ಕಾರ್ಗಿಸ್, ಅಕ್ರೋಬ್ಯಾಟ್‌ಗಳು, ಡ್ಯಾನ್ಸರ್‌ಗಳು ಮತ್ತು ಸರ್ಕಸ್ ಮೊದಲಾದ ಪ್ರಕಾರಗಳು ಎಡಿನ್‌ಬರ್ಗ್‌ನ ಪ್ರಿನ್ಸೆಸ್ ಸ್ಟ್ರೀಟ್ ಗಾರ್ಡನ್ಸ್ ಮತ್ತು ಕಾರ್ಡಿಫ್‌ನ ಬ್ಯೂಟ್ ಪಾರ್ಕ್‌ನಲ್ಲಿರಿಸಿದ ದೊಡ್ಡ ಟೆಲಿವಿಷನ್ ಪರದೆಗಳಲ್ಲಿ ಪ್ರಸಾರವಾಗಲಿವೆ.

“ನಾಲ್ಕು ದಿನಗಳ ಆಚರಣೆಗಳು ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಪಾಲ್ಗೊಳ್ಳುವುದರೊಂದಿಗೆ, ಈ ವಾರಾಂತ್ಯವು ಯುಕೆ ಮತ್ತು ಕಾಮನ್‌ವೆಲ್ತ್‌ನ ಜನರಿಗೆ ಅವರ ಸೇವೆ ಮತ್ತು ಸಮರ್ಪಣೆಗೆ ಸೂಕ್ತವಾದ ಗೌರವ ಮತ್ತು ಆಚರಣೆಯಾಗಿದೆ” ಎಂದು ಯುಕೆ ಸಂಸ್ಕೃತಿ ಕಾರ್ಯದರ್ಶಿ ನಾಡಿನ್ ಡೋರಿಸ್ ಹೇಳಿದ್ದಾರೆ.

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು