ಚುನಾವಣೆ ಘೋಷಣೆಯಾಗದಿದ್ದರೆ ಪಾಕಿಸ್ತಾನದಲ್ಲಿ ಆಂತರಿಕ ಯುದ್ಧವುಂಟಾಗಲಿದೆ: ಇಮ್ರಾನ್ ಖಾನ್
ತಾವು ಪ್ರಧಾನ ಮಂತ್ರಿಯಾಗಿ ಸಂಪೂರ್ಣ ಅಧಿಕಾರವನ್ನು ಅನುಭವಿಸಲಿಲ್ಲ, ದೇಶದ ನಿಜವಾದ ಅಧಿಕಾರ ಕೇಂದ್ರಗಳು ಬೇರೆಡೆ ಇದೆ. ಅದು ಎಲ್ಲಿದೆ ಎಂದು ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ ಪಾಕ್ ಮಾಜಿ ಪ್ರಧಾನಿ.
ಚುನಾವಣೆ ಘೋಷಣೆಯಾಗದಿದ್ದರೆ ದೇಶದಲ್ಲಿ ಆಂತರಿಕ ಯುದ್ಧವುಂಟಾಗಲಿದೆ ಎಂದು ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಎಚ್ಚರಿಕೆ ನೀಡಿದ್ದಾರೆ. “ಕಾನೂನು ಮತ್ತು ಸಾಂವಿಧಾನಿಕ ವಿಧಾನಗಳ ಮೂಲಕ ಚುನಾವಣೆಗೆ ಹೋಗಲು ಅವರು ನಮಗೆ ಅವಕಾಶ ನೀಡುತ್ತಾರೆಯೇ ಎಂದು ನಾವು ನೋಡುತ್ತೇವೆ. ಇಲ್ಲದಿದ್ದರೆ ಈ ದೇಶದಲ್ಲಿ ಆಂತರಿಕ ಯುದ್ಧ ನಡೆಯಲಿದೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಮುಖ್ಯಸ್ಥರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂದು ಡಾನ್ ನ್ಯೂಸ್ ಹೇಳಿದೆ. ನ್ಯಾಷನಲ್ ಅಸೆಂಬ್ಲಿಗೆ ಹಿಂದಿರುಗುವ “ಪ್ರಶ್ನೆಯೇ ಇಲ್ಲ” ಎಂದು ಹೇಳಿದ ಇಮ್ರಾನ್ ಖಾನ್, ಹಾಗೆ ಮಾಡಿದರೆ ನಮ್ಮ ಸರ್ಕಾರವನ್ನು ತೆಗೆದುಹಾಕಿದ “ಪಿತೂರಿಯನ್ನು ಒಪ್ಪಿಕೊಳ್ಳುವುದು” ಎಂದರ್ಥ ಎಂದಿದ್ದಾರೆ. ಪ್ರತಿಭಟನಾಕಾರರಿಗೆ ರಕ್ಷಣೆ ನೀಡುವಂತೆ ತಮ್ಮ ಪಕ್ಷದ ಮನವಿಯನ್ನು ಸುಪ್ರೀಂಕೋರ್ಟ್ ನಿರ್ಧರಿಸಲು ಕಾಯುತ್ತಿದ್ದೇನೆ. ಆ ನಂತರ ಅವರು ಮುಂದಿನ ಮಾರ್ಚ್ ನಡೆಸುವುದಕ್ಕಾಗಿ ದಿನಾಂಕವನ್ನು ನೀಡುವುದಾಗಿ ಹೇಳಿದರು ಎಂದು ಡಾನ್ ನ್ಯೂ ವರದಿ ಮಾಡಿದೆ.
ತಾವು ಪ್ರಧಾನ ಮಂತ್ರಿಯಾಗಿ ಸಂಪೂರ್ಣ ಅಧಿಕಾರವನ್ನು ಅನುಭವಿಸಲಿಲ್ಲ, ದೇಶದ ನಿಜವಾದ ಅಧಿಕಾರ ಕೇಂದ್ರಗಳು ಬೇರೆಡೆ ಇದೆ. ಅದು ಎಲ್ಲಿದೆ ಎಂದು ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ ಪಾಕ್ ಮಾಜಿ ಪ್ರಧಾನಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಅದು ದುರ್ಬಲವಾಗಿತ್ತು ಹಾಗಾಗಿ ಮಿತ್ರಪಕ್ಷಗಳನ್ನು ಸೇರಿಸಬೇಕಾಯಿತು. ಅದೇ ಪರಿಸ್ಥಿತಿ ಮತ್ತೊಮ್ಮೆ ಬಂದರೆ ಮರು ಚುನಾವಣೆಗೆ ಹೋಗಿ ಬಹುಮತ ಬಯಸುತ್ತೇನೆ ಇಲ್ಲವೇ ಯಾವುದನ್ನೂ ಮಾಡುವುದಿಲ್ಲ ಎಂದಿದ್ದಾರೆ.
ನಮ್ಮ ಕೈಗಳನ್ನು ಕಟ್ಟಲಾಗಿತ್ತು. ನಮಗೆ ಎಲ್ಲೆಡೆಯಿಂದ ಬ್ಲ್ಯಾಕ್ ಮೇಲ್ ಮಾಡಲಾಗಿದೆ. ಅಧಿಕಾರ ನಮ್ಮ ಬಳಿ ಇರಲಿಲ್ಲ. ಪಾಕಿಸ್ತಾನದಲ್ಲಿ ಅಧಿಕಾರ ಎಲ್ಲಿದೆ ಎಂದು ಎಲ್ಲರಿಗೂ ತಿಳಿದಿದೆ, ಆದ್ದರಿಂದ ನಾವು ಅವರ ಮೇಲೆ ಅವಲಂಬಿತರಾಗಿದ್ದೇವೆ ಎಂದು ಯಾರನ್ನೂ ಉಲ್ಲೇಖಿಸದೆಯೇ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದಾರೆ.
ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:40 pm, Thu, 2 June 22