ಮಾಜಿ ಪತಿ ಸೆರೆಮನೆಯಿಂದ ಬಿಡಗಡೆಯಾಗುತ್ತಿರುವ ವಿಷಯ ಕೇಳಿ ಭಯಭೀತಳಾಗಿದ್ದೇನೆ ಎನ್ನುತ್ತಾರೆ ಟಿವಿ ನಿರೂಪಕಿ ರೂತ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 13, 2022 | 7:26 AM

‘ನಮಗೆ ಬದುಕಿನ ಹೊಸ ನಾರ್ಮಲ್ ಇನ್ನು ಮೇಲೆ ಶುರುವಾಗುತ್ತದೆ. ನಿರಂತರವಾಗಿ ಬಾಗಿಲನ್ನು ಮುಚ್ಚಿಯೇ ಇಡುವ ಮತ್ತು ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭಯದೊಂದಿಗೆ ಬದುಕುವ ಅಧ್ಯಾಯ ಆರಂಭಗೊಳ್ಳುತ್ತದೆ, ಎಂದು ರೂತ್ ಹೇಳಿದ್ದಾರೆ.

ಮಾಜಿ ಪತಿ ಸೆರೆಮನೆಯಿಂದ ಬಿಡಗಡೆಯಾಗುತ್ತಿರುವ ವಿಷಯ ಕೇಳಿ ಭಯಭೀತಳಾಗಿದ್ದೇನೆ ಎನ್ನುತ್ತಾರೆ ಟಿವಿ ನಿರೂಪಕಿ ರೂತ್
ಟಿವಿ ನಿರೂಪಕಿ ರೂತ್ ಡಡ್ಸ್​ವರ್ತ್​
Follow us on

ಲಂಡನ್: ತನ್ನ ಮಾಜಿ ಪತಿಯನ್ನು ಜೈಲಿಂದ ಬಿಡುಗಡೆ ಮಾಡಲಿರುವ ವಿಷಯ ಗೊತ್ತಾದಾಗಿನಿಂದ ಆತಂಕಿತಳಾಗಿದ್ದೇನೆ ಮತ್ತು ಭಯದಲ್ಲಿ ಜೀವಿಸುತ್ತಿದ್ದೇನೆ ಎಂದು ಐಟಿವಿ ನಿರೂಪಕಿ ರೂತ್ ಡಡ್ಸ್ ವರ್ತ್ ಹೇಳಿದ್ದಾರೆ. ಹಿಂಸಾ ಪ್ರವೃತ್ತಿ, ಹಿಡಿತ ಸಾಧಿಸುವ ಮನೋಭಾವ ರೂತ್ ಅವರನ್ನು ಹಿಂಬಾಲಿಸುತ್ತಿದ್ದ ಆರೋಪಗಳ ಹಿನ್ನೆಲೆಯಲ್ಲಿ ರೂತ್ ಮಾಜಿ ಪತಿ ಜೋನಾಥನ್ ವಿಗ್ನಾಲ್ ದೋಷಿಯೆಂದು ಸಾಬೀತಾದ ಬಳಿಕ ಅವನನ್ನು ಸೆರೆಮನೆಗೆ ಕಳಿಸಲಾಗಿತ್ತು.

ಮಾರ್ಚ್ 2021 ರಲ್ಲಿ ಅವನಿಗೆ 3-ವರ್ಷ ಜೈಲುವಾಸದ ಶಿಕ್ಷೆ ವಿಧಿಸಲಾಗಿತ್ತು ಮತ್ತು ರೂತ್ ಅವರನ್ನು ಯಾವತ್ತೂ ಸಂಪರ್ಕಿಸಬಾರದು ಮತ್ತು ಭೇಟಿಯಾಗಬಾರದೆಂಬ ಷರತ್ತು ಅವನ ಮೇಲೆ ಹೇರಲಾಗಿತ್ತು.

ಇದೆಲ್ಲ ನಡೆದು ಒಂದು ವರ್ಷವಾದರೂ ಅವನಿಂದ ಅನುಭವಿಸಿದ ಹಿಂಸೆ, ಪಟ್ಟ ಯಾತನೆ ಈಗಲೂ ತನ್ನನ್ನು ಬೆಂಬಿಡದೆ ಕಾಡುತ್ತಿದೆ ಎಂದು ಹೇಳಿದ್ದ ರೂತ್ ಅವನು ಜೈಲಿಂದ ಹೊರಬಂದ ಬಳಿಕ ಭವಿಷ್ಯದ ಬದುಕು ಹೇಗೆ ಎಂಬ ಚಿಂತೆ ಕಾಡುತ್ತಿದೆ ಅಂತ ಹೇಳಿದ್ದಾರೆ.

ಜೈಲಿಗೆ ಹಾಕಿದ ಅಪರಾಧಿಗಳನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬ ಅಂಶವನ್ನು ಅವರಿಂದ ಟಾರ್ಗೆಟ್ ಆದ ಸಂತ್ರಸ್ತರಿಗೆ ತಿಳಿಸುವುದಿಲ್ಲವಾದರೂ ಅವನನ್ನು ಬಿಡುಗಡೆ ಮಾಡಲಾಗಿದೆ ರೂತ್ ಭಾವಿಸಿದ ದಿನ ವಿಡಿಯೋ ಸಂದೇಶವೊಂದರಲ್ಲಿ ಕಾಣಿಸಿಕೊಂಡಿದ್ದರು.

ಹಿಂದೆ ರೆಕಾರ್ಡ್ ಆಗಿರುವ ವಿಡಿಯೋವೊಂದರಲ್ಲಿ ಜೊನಾಥಾನನನ್ನು ಅರೆಸ್ಟ್ ಮಾಡುವ ಸಮಯದಲ್ಲಿನ ತಮ್ಮ ಪೋಟೋವೊಂದನ್ನು ಹಾಕಿದ್ದರು. ತಾನಾಗ 65 ಕೆಜಿ ತೂಗುತ್ತಿದ್ದೆ ಮತ್ತು ಕೂದಲು ಉದುರುಲಾರಂಭಿಸಿತ್ತು ಅಂತ ಅವರು ಸಂದೇಶದಲ್ಲಿ ಹೇಳಿದ್ದರು.

ಮನೆಗೆ ಬಂದರೆ ಅವನು ನಿನ್ನನ್ನು ಕೊಲ್ಲುವ ಬೆದರಿಕೆ ಹಾಕಿದ್ದಾನೆ, ಸೋ ನೀನು ಮನೆ ಕಡೆ ಬರೋದೇ ಬೇಡ ಅಂತ ನನ್ನ ಮಕ್ಕಳು ತಾಕೀತು ಮಾಡಿದ್ದಾರೆ ಅಂತ ರೂತ್ ಹೇಳಿದ್ದಾರೆ.

ಐಟಿವಿಯಲ್ಲಿ ಹವಾಮಾನ ವರದಿ ವಾಚಿಸುವ ಸ್ಟಾರ್ ನಿರೂಪಕಿ ರೂತ್ ಮಂಗಳವಾರದಂದು ಹೇಳಿಕೆಯೊಂದನ್ನು ನೀಡಿ, ‘ಇಂದು ನನ್ನ ಮಾಜಿ ಪತಿ ಜೈಲಿನಿಂದ ಹೊರಬರುತ್ತಾನೆ ಅಂತ ನಾವು ಭಾವಿಸುತ್ತೇವೆ,’ ಎಂದು ಹೇಳಿದ್ದರು.

‘ನಿಯಮದ ಪ್ರಕಾರ ಸಂತ್ರಸ್ತರಿಗೆ ಅಪರಾಧಿ ಜೈಲಿನಿಂದ ಹೊರಬರುವ ಸಂಗತಿ ತಿಳಸಬಾರದು, ಯಾಕೆ ಅಂತ ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ನನ್ನ ವಿಷಯದಲ್ಲಿ ಅದು ಯಾವುದೇ ಬದಲಾವಣೆಯನ್ನು ಉಂಟುಮಾಡದು. ಮೊದಲು ಸಹ ಭಯದಲ್ಲಿದ್ದೆ, ಈಗಲೂ ಭಯದಲ್ಲಿದ್ದೇನೆ,’ ಎಂದು ರೂತ್ ಹೇಳಿದ್ದಾರೆ.

‘ನಮಗೆ ಬದುಕಿನ ಹೊಸ ನಾರ್ಮಲ್ ಇನ್ನು ಮೇಲೆ ಶುರುವಾಗುತ್ತದೆ. ನಿರಂತರವಾಗಿ ಬಾಗಿಲನ್ನು ಮುಚ್ಚಿಯೇ ಇಡುವ ಮತ್ತು ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭಯದೊಂದಿಗೆ ಬದುಕುವ ಅಧ್ಯಾಯ ಆರಂಭಗೊಳ್ಳುತ್ತದೆ, ಎಂದು ರೂತ್ ಹೇಳಿದ್ದಾರೆ.

‘ಆತಂಕ ನನ್ನನ್ನು ಆವರಿಸಿಕೊಂಡಿದೆ ಮತ್ತು ಚಿಂತಿತಳೂ ಆಗಿದ್ದೇನೆ. ಯಾಕೆಂದರೆ ನಾಳೆ ನನಗೆ ಮತ್ತು ನನ್ನ ಕುಟುಂಬಕ್ಕೆ ಏನು ಕಾದಿದೆಯೋ ಅಂತ ನನಗೆ ಗೊತ್ತಿಲ್ಲ, ನನ್ನ ಸ್ಥಳದಲ್ಲಿ ಬೇರೆ ಯಾರೇ ಆಗಿದ್ದರೂ ಭಯಭೀತರಾಗುತ್ತಿದ್ದರು, ಮತ್ತು ನನ್ನಂತೆಯೇ ಯೋಚಿಸುತ್ತಿದ್ದರು, ಎಂದು ರೂತ್ ಹೇಳಿದ್ದಾರೆ.

ಎರಡು ಮಕ್ಕಳ ತಾಯಿಯಾಗಿರುವ ರೂತ್, ಅವನಿಗೆ ಶಿಕ್ಷೆಯಾಗಬೇಕು, ಅವನನ್ನು ಜೈಲಿಗೆ ಹಾಕಬೇಕು-ಮೊದಲಾದ ಸಂಗತಿಗಳ ಬಗ್ಗೆ ನಾನು ಯೋಚಿಸಿರಲಿಲ್ಲ. ನರಕಯಾತನೆಯ ಅವನ ಸಾಂಗತ್ಯದಿಂದ ಹೊರಬರಬೇಕು, ಅದೂ ಜೀವದೊಂದಿಗೆ ಆಚೆ ಬರಬೇಕು ಅಂತ ಮಾತ್ರ ಯೋಚಿಸುತ್ತಿದ್ದೆ. ಆ ಯಾತ್ರೆ ಯಾತನಾಮಯವಾಗಿತ್ತು, ಮತ್ತು ಪ್ರತಿದಿನ ಹೊಸಬಗೆಯ ನರಕಸದೃಶವಾಗುತಿತ್ತು,’ ಎಂದು ರೂತ್ ಹೇಳಿದ್ದಾರೆ.