Beating Child ಹೆತ್ತವರು ಮಕ್ಕಳಿಗೆ ಹೊಡೆಯುವಂತಿಲ್ಲ.. ಹೊಸ ಆದೇಶ ಜಾರಿಗೊಳಿಸಿದೆ ಈ ದೇಶ!

ನಮ್ಮನೆ ಮಕ್ಕಳಿಗೆ ನಾವು ಹೊಡೆಯಬಾರದಾ? ನಾವು ನಮ್ಮ ತಂದೆ ತಾಯಿ ಕೈಯಲ್ಲಿ ಎಷ್ಟು ಏಟು ತಿಂದಿದ್ವಿ ಗೊತ್ತಾ? ಅನ್ನುವ ಮಾತಿನ ಜೊತೆಗೆ ಮಕ್ಕಳಿಗೆ ಹೊಡೀಬಾರದು ಎಂದೇ ಹೇಳುವ ಹಲವರು ನಿಮಗೆ ಸಿಕ್ಕಿರಬಹುದು. ಶಾಲೆಯಲ್ಲಿ ಶಿಕ್ಷಕರು ಏಟು ಕೊಟ್ಟಿದ್ದಕ್ಕೆ ಹೆತ್ತವರು ದೂರು ನೀಡಿರುವ ಘಟನೆಗಳನ್ನೂ ನೀವು ಗಮನಿಸಿರಬಹುದು. ಶಿಕ್ಷಕರಂತೂ ಮಕ್ಕಳಿಗೆ ಹೊಡೆಯೋದು ಬಿಡಿ, ಬೈಯ್ಯೋಕೂ ಭಯ ಆಗುತ್ತಪ್ಪಾ ಎಂದು ಉದ್ಘರಿಸುತ್ತಲೇ ಇರುತ್ತಾರೆ. ಮಕ್ಕಳಿಗೆ ಏಟು ಕೊಡಬೇಕೋ ಬೇಡವೋ ಎಂಬ ಬಗ್ಗೆ ನಾವು ಚರ್ಚಿಸುತ್ತಾ ಇರುವಂತೆ ಇಲ್ಲೊಂದು ದೇಶ ಮಕ್ಕಳಿಗೆ […]

Beating Child ಹೆತ್ತವರು ಮಕ್ಕಳಿಗೆ ಹೊಡೆಯುವಂತಿಲ್ಲ.. ಹೊಸ ಆದೇಶ ಜಾರಿಗೊಳಿಸಿದೆ ಈ ದೇಶ!
Follow us
ಸಾಧು ಶ್ರೀನಾಥ್​
|

Updated on: Nov 21, 2020 | 11:53 AM

ನಮ್ಮನೆ ಮಕ್ಕಳಿಗೆ ನಾವು ಹೊಡೆಯಬಾರದಾ? ನಾವು ನಮ್ಮ ತಂದೆ ತಾಯಿ ಕೈಯಲ್ಲಿ ಎಷ್ಟು ಏಟು ತಿಂದಿದ್ವಿ ಗೊತ್ತಾ? ಅನ್ನುವ ಮಾತಿನ ಜೊತೆಗೆ ಮಕ್ಕಳಿಗೆ ಹೊಡೀಬಾರದು ಎಂದೇ ಹೇಳುವ ಹಲವರು ನಿಮಗೆ ಸಿಕ್ಕಿರಬಹುದು. ಶಾಲೆಯಲ್ಲಿ ಶಿಕ್ಷಕರು ಏಟು ಕೊಟ್ಟಿದ್ದಕ್ಕೆ ಹೆತ್ತವರು ದೂರು ನೀಡಿರುವ ಘಟನೆಗಳನ್ನೂ ನೀವು ಗಮನಿಸಿರಬಹುದು. ಶಿಕ್ಷಕರಂತೂ ಮಕ್ಕಳಿಗೆ ಹೊಡೆಯೋದು ಬಿಡಿ, ಬೈಯ್ಯೋಕೂ ಭಯ ಆಗುತ್ತಪ್ಪಾ ಎಂದು ಉದ್ಘರಿಸುತ್ತಲೇ ಇರುತ್ತಾರೆ.

ಮಕ್ಕಳಿಗೆ ಏಟು ಕೊಡಬೇಕೋ ಬೇಡವೋ ಎಂಬ ಬಗ್ಗೆ ನಾವು ಚರ್ಚಿಸುತ್ತಾ ಇರುವಂತೆ ಇಲ್ಲೊಂದು ದೇಶ ಮಕ್ಕಳಿಗೆ ಹೊಡೆಯಬಾರದು ಎಂಬ ಕಾನೂನು ಹೊರಡಿಸಿದೆ. ಇತರೆ ಜನರು ಬಿಡಿ, ಖುದ್ದು ಹೆತ್ತವರು ಮಕ್ಕಳ ಮೇಲೆ ಕೈ ಮಾಡುವುದನ್ನೂ ಈ ದೇಶದ ಕಾನೂನು ಒಪ್ಪುವುದಿಲ್ಲ!

ಈ ಕಾನೂನನ್ನು UK ದಲ್ಲಿ ಜಾರಿಗೊಳಿಸಿದ ಮೊದಲ ದೇಶವಿದು! ಯುನೈಟೆಡ್ ಕಿಂಗ್ಡಮ್ನ ಸ್ಕಾಟ್ಲ್ಯಾಂಡ್, ಹೆತ್ತವರು ಮಕ್ಕಳ ಮೇಲೆ ಕೈ ಮಾಡುವುದನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದ್ದು, ಈ ನಿಯಮ ಜಾರಿಗೊಳಿಸಿದ UK ನ ಮೊದಲ ದೇಶ ಅನಿಸಿಕೊಂಡಿರುವ ಸ್ಕಾಟ್ಲ್ಯಾಂಡ್, ವಿಶ್ವದಲ್ಲಿ ಈ ನಿಯಮ ತಂದ 58ನೇ ದೇಶವಾಗಿದೆ. ಮೊತ್ತ ಮೊದಲು 1979ರಲ್ಲಿ ಸ್ವೀಡನ್ ಮಕ್ಕಳಿಗೆ ದೈಹಿಕ ದಂಡನೆ ನೀಡುವುದನ್ನು ನಿಷೇಧಿಸಿತ್ತು.

ಇನ್ನುಮುಂದೆ ಯಾವುದೇ ವಿಧದ ದೈಹಿಕ ದಂಡನೆಯನ್ನು ಮಕ್ಕಳು ಅನುಭವಿಸಬಾರದು. ತನ್ಮೂಲಕ ಮಕ್ಕಳ ಹಕ್ಕುಗಳು ಸಂಪೂರ್ಣವಾಗಿ ಗೌರವಿಸಲ್ಪಡಬೇಕು ಎಂದು ಸ್ಕಾಟ್ಲ್ಯಾಂಡ್ ಮಕ್ಕಳ ಮೇಲಿನ ಕ್ರೌರ್ಯ ತಡೆಯ ರಾಷ್ಟ್ರೀಯ ಮಂಡಳಿ ವಕ್ತಾರ ಜೊಆನ್ ಬ್ಯಾರೆಟ್ ಹೇಳಿದ್ದಾರೆ.

ಇದನ್ನು ಎಲ್ಲರೂ ಒಂದೇಟಿಗೇ ಒಪ್ಪಿಬಿಟ್ಟರು ಅಂದುಕೊಳ್ಳಬೇಡಿ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವರ್ಗವೂ ಸ್ಕಾಟ್ಲ್ಯಾಂಡ್ನಲ್ಲಿದೆ. ಹೆತ್ತವರು ಮಕ್ಕಳಿಗೆ ಶಿಸ್ತು ಕಲಿಸಬೇಕು. ಶಿಸ್ತು ಕಲಿಕೆ ಯಾವತ್ತೂ ಹಿತವಾಗಿ ಇರುವುದಿಲ್ಲ ಎಂದು ಹಲವರು ನಿಯಮವನ್ನು ಆಕ್ಷೇಪಿಸಿದ್ದಾರೆ. ಯುಕೆನ ವೇಲ್ಸ್ ದೇಶವೂ ಈ ನಿಯಮ ಜಾರಿಗೆ ತರಲು ತಯಾರಿಯಲ್ಲಿದ್ದು, 2022ರಲ್ಲಿ ಜಾರಿಗೊಳಿಸುವ ನಿರೀಕ್ಷೆಯಲ್ಲಿದೆ.

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?