Shigeru Ishiba: ಜಪಾನ್​ನ ನೂತನ ಪ್ರಧಾನಿಯಾಗಿ ಶಿಗೆರು ಇಶಿಬಾ ಆಯ್ಕೆ

|

Updated on: Sep 27, 2024 | 2:02 PM

ಮಾಜಿ ರಕ್ಷಣಾ ಸಚಿವ ಶಿಗೆರು ಇಶಿಬಾ ಅವರು ಜಪಾನ್‌ನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಫ್ಯೂಮಿಯೊ ಕಿಶಿಡಾ ಅವರ ಉತ್ತರಾಧಿಕಾರಿಯಾಗಲು ಒಂಬತ್ತು ಅಭ್ಯರ್ಥಿಗಳ ನಡುವೆ ನಡೆದ ಪೈಪೋಟಿಯಲ್ಲಿ ಶಿಗೆರು ಗೆಲುವು ಸಾಧಿಸಿದ್ದಾರೆ. ಅಕ್ಟೋಬರ್ 1 ರಂದು ಇಶಿಬಾ ಜಪಾನ್‌ನ 102 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ, ಅದೇ ದಿನ ಫ್ಯೂಮಿಯೊ ಕಿಶಿಡಾ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.

Shigeru Ishiba: ಜಪಾನ್​ನ ನೂತನ ಪ್ರಧಾನಿಯಾಗಿ ಶಿಗೆರು ಇಶಿಬಾ ಆಯ್ಕೆ
ಶಿಗೆರು
Follow us on

ಮಾಜಿ ರಕ್ಷಣಾ ಸಚಿವ ಶಿಗೆರು ಇಶಿಬಾ ಅವರು ಜಪಾನ್‌ನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಫ್ಯೂಮಿಯೊ ಕಿಶಿಡಾ ಅವರ ಉತ್ತರಾಧಿಕಾರಿಯಾಗಲು ಒಂಬತ್ತು ಅಭ್ಯರ್ಥಿಗಳ ನಡುವೆ ನಡೆದ ಪೈಪೋಟಿಯಲ್ಲಿ ಶಿಗೆರು ಗೆಲುವು ಸಾಧಿಸಿದ್ದಾರೆ.
ಅಕ್ಟೋಬರ್ 1 ರಂದು ಇಶಿಬಾ ಜಪಾನ್‌ನ 102 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ, ಅದೇ ದಿನ ಫ್ಯೂಮಿಯೊ ಕಿಶಿಡಾ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.

ಜಪಾನ್‌ನ ಮೊದಲ ಮಹಿಳಾ ನಾಯಕಿಯಾಗಲು ಸ್ಪರ್ಧಿಸುತ್ತಿದ್ದ ಆರ್ಥಿಕ ಭದ್ರತಾ ಸಚಿವೆ ಸಾನೆ ತಕೈಚಿ ಅವರನ್ನು ಸೋಲಿಸಿದರು. ಇಶಿಬಾ ಒಟ್ಟು 215 ಮತಗಳನ್ನು ಪಡೆದರೆ, ತಕೈಚಿ 194 ಮತಗಳನ್ನು ಗಳಿಸಬಹುದು. ಆದರೆ, ಶಿಂಜಿರೊ ಕೊಯಿಜುಮಿ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ನಾನು ಜನರನ್ನು ನಂಬುತ್ತೇನೆ, ಧೈರ್ಯ ಮತ್ತು ಪ್ರಾಮಾಣಿಕತೆಯಿಂದ ಸತ್ಯವನ್ನು ಮಾತನಾಡುತ್ತೇನೆ, ಮತ್ತು ಈ ದೇಶವನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಇಶಿಬಾ ಹೇಳಿದ್ದರು.

ಪ್ರಸ್ತುತ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಸಂಸತ್ತಿನ ಅನುಮೋದನೆಯ ನಂತರ, ಹೊಸ ನಾಯಕ ಹೊಸ ಸಚಿವ ಸಂಪುಟವನ್ನು ರಚಿಸುತ್ತಾರೆ. ಕೆಳಮನೆಯ ಪ್ರಸ್ತುತ ಅಧಿಕಾರಾವಧಿಯು ಅಕ್ಟೋಬರ್ 2025 ರವರೆಗೆ ಇರುತ್ತದೆ.

ಮತ್ತಷ್ಟು ಓದಿ: ಸಿಟಿ ಹುಡ್ಗೀರು ಹಳ್ಳಿ ಹುಡುಗ್ರನ್ನ ಮದುವೆಯಾದ್ರೆ ಸರ್ಕಾರ ಕೊಡುತ್ತೆ 3ಲಕ್ಷ ಹಣ

ಜಪಾನ್‌ನ ಸಾಂವಿಧಾನಿಕ ಡೆಮಾಕ್ರಟಿಕ್ ಪಕ್ಷವು ಪ್ರಮುಖ ವಿರೋಧ ಪಕ್ಷವಾಗಿದೆ. ಈ ವರ್ಷ ಸ್ಥಳೀಯ ಚುನಾವಣೆಗಳಲ್ಲಿ ಕೆಲವು ಗೆಲುವು ಸಾಧಿಸಿದೆ.

ಜಪಾನ್ ಸಂಸತ್ತಿನ ಕೆಳಮನೆಯಲ್ಲಿ ಮಹಿಳೆಯರ ಸಂಖ್ಯೆ ಕೇವಲ 10.3 ಪ್ರತಿಶತ. ಜಿನೀವಾ ಮೂಲದ ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ, ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ಜಪಾನ್ 190 ದೇಶಗಳಲ್ಲಿ 163 ನೇ ಸ್ಥಾನದಲ್ಲಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ