ಇಸ್ಲಮಾಬಾದ್: ಪಾಕಿಸ್ತಾನದ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕದ್ದು, ಅದರ ಬದಲು ಸ್ಟಫ್ಡ್ ಗೊಂಬೆಯನ್ನು ಇಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಅಕ್ಟೋಬರ್ 31ರಂದು ಈ ಘಟನೆ ಸಂಭವಿಸಿದೆ. ರಾವಲ್ಪಿಂಡಿ ನಗರದ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಆರೋಪಿಗಳು ಮಗುವಿದ್ದ ಬೇಬಿ ಕ್ಯಾರಿಯರ್ ಜಾಗದಲ್ಲಿ ಗೊಂಬೆಯನ್ನು ಇರಿಸಿ ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ಅಕ್ಟೋಬರ್ 31ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಹೋಲಿ ಫ್ಯಾಮಿಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ARY ನ್ಯೂಸ್ ವರದಿ ಮಾಡಿದೆ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಆಸ್ಪತ್ರೆಯ ಸುತ್ತ ಜಮಾಯಿಸಿದ ಜನರ ವಿಡಿಯೋ ಪಾಕಿಸ್ತಾನದಲ್ಲಿ ವೈರಲ್ ಆಗಿದೆ. ನವಜಾತ ಶಿಶುವಿನ ಅಪಹರಣಕ್ಕೆ ಕಾರಣವಾದ ನಿರ್ಲಕ್ಷ್ಯಕ್ಕಾಗಿ ಜನರು ಆಸ್ಪತ್ರೆ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಶೀಘ್ರ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ہولی فیملی ہسپتال سے نوزائیدہ بچے کے اغوا کی اطلاع پر CPO محمد احسن یونس کا نوٹس، SDPO نیوٹاؤن بینش فاطمہ اور SHO موقعہ پر موجود، تحقیقات جاری ہیں۔ واقعہ کا مقدمہ درج کیاجارہاہے، بچےکی بحفاظت بازیابی یقینی بناتے ہوئے ملوث ملزم/ملزمان کوگرفتارکرکےقانون کےکٹہرے میں کھڑاکیا جائے گا۔ pic.twitter.com/woMfxYc3se
— Rawalpindi Police (@RwpPolice) October 31, 2021
ಹೋಲಿ ಫ್ಯಾಮಿಲಿ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಅಪಹರಿಸಲಾಗಿದೆ ಎಂದು ರಾವಲ್ಪಿಂಡಿ ಪೊಲೀಸರು ಉರ್ದು ಭಾಷೆಯಲ್ಲಿ ಬರೆದಿರುವ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಘಟನೆಯ ಮಾಹಿತಿ ಮೇರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗುವುದು ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಪಾಕಿಸ್ತಾನದಲ್ಲಿ ನಡೆದ ಘಟನೆಯಲ್ಲಿ ಬುರ್ಖಾ ಧಾರಿ ಮಹಿಳೆಯೊಬ್ಬರು ಫೈಸಲಾಬಾದ್‌ನ ಅಲೈಡ್ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಅಪಹರಿಸಿದ್ದರು. ಫೈಸಲಾಬಾದ್‌ನ ನಿಸಾರ್ ಕಾಲೋನಿಯ ನಿವಾಸಿ ನೊಶೀನ್ ಎಂಬುವವರು ಅಲೈಡ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬುರ್ಖಾ ಧರಿಸಿದ ಮಹಿಳೆಯೊಬ್ಬರು ಆಗ ತಾನೇ ಹೆರಿಗೆಯಾಗಿದ್ದ ಮಹಿಳೆಯಿದ್ದ ಕೊಠಡಿಗೆ ಹೋಗಿ ಮಗುವಾಗಿದ್ದಕ್ಕೆ ಅಭಿನಂದಿಸಿದ್ದಾಳೆ. ಬಳಿಕ ಲಸಿಕೆ ಹಾಕಿಸಲು ಹೆಣ್ಣು ಮಗುವನ್ನು ಕೊಡುವಂತೆ ಆ ಮಗುವಿನ ತಾಯಿಗೆ ಹೇಳಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾಳೆ. ನಂತರ ಆ ಜಾಗದಲ್ಲಿ ಗೊಂಬೆಯನ್ನು ಇರಿಸಲಾಗಿದೆ.
ಇದನ್ನೂ ಓದಿ: Shocking Video: ಪಟಾಕಿಯಿದ್ದ ಸ್ಕೂಟರ್ ಸ್ಫೋಟಗೊಂಡು ಅಪ್ಪ-ಮಗನ ದೇಹ ಛಿದ್ರ; ಶಾಕಿಂಗ್ ವಿಡಿಯೋ ವೈರಲ್
Shocking Video: ಪಟಾಕಿಗೆ ಬೆಂಕಿ ಹೊತ್ತಿಸಿ ಪೆಟ್ರೋಲ್ ಬಂಕ್ ಮೇಲೆ ಎಸೆದ ಯುವಕರು; ಆಮೇಲೇನಾಯ್ತು?