Shocking News: ಬ್ರೆಜಿಲ್‌ನಲ್ಲಿ ಕಪ್ಪು ವರ್ಣೀಯನಿಗೆ ಥಳಿಸಿ, ಚಿತ್ರಹಿಂಸೆ ನೀಡಿ ಕೊಂದ ಪೊಲೀಸರು; ಭುಗಿಲೆದ್ದ ಆಕ್ರೋಶ
ಆ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಆತ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್ ಪೊಲೀಸರು ಜನರ ಅಕ್ರೋಶಕ್ಕೆ ಗುರಿಯಾಗಿದ್ದಾರೆ
ಬ್ರೆಜಿಲ್: ಮಾನಸಿಕ ಅಸ್ವಸ್ಥನಾಗಿದ್ದ ಕಪ್ಪು ವರ್ಣದ ವ್ಯಕ್ತಿಯನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ, ಆ ಕಾರಿನೊಳಗೆ ಗ್ಯಾಸ್ ಗ್ರೆನೇಡ್ ಬಿಡುಗಡೆ ಮಾಡಿದ್ದ ಬ್ರೆಜಿಲ್ ಪೊಲೀಸರ (Brazil Police) ಕೃತ್ಯದಿಂದ ಆ ಕಪ್ಪು ವರ್ಣೀಯ ವ್ಯಕ್ತಿ ಸಾವನ್ನಪ್ಪಿದ್ದ. ಈ ಘಟನೆಗೆ ಬ್ರೆಜಿಲಿಯನ್ನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 38 ವರ್ಷದ ಜೆನಿವಾಲ್ಡೊ ಡಿ ಜೀಸಸ್ ಸ್ಯಾಂಟೋಸ್ ಎಂಬುವವರನ್ನು ಬುಧವಾರ ಉಂಬಾಬಾ ನಗರದಲ್ಲಿ ಫೆಡರಲ್ ಹೆದ್ದಾರಿ ಪೊಲೀಸರು ತಡೆದಿದ್ದರು. ಈ ಘಟನೆಯ ವೀಡಿಯೋದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಹೆಲ್ಮೆಟ್ ಧರಿಸಿ ಕಾರಿನ ಡಿಕ್ಕಿಯಲ್ಲಿ ಆತನನ್ನು ಹಾಕಿ ಥಳಿಸುತ್ತಿರುವುದನ್ನು ನೋಡಬಹುದು. ನಂತರ ಕಾರಿನ ಡಿಕ್ಕಿಯನ್ನು ಮುಚ್ಚಲಾಗಿದ್ದು, ಕಾರಿನ ಡಿಕ್ಕಿಯಿಂದ ಹೊಗೆ ಬರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು.
ಆ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಆತ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್ ಪೊಲೀಸರು ಜನರ ಅಕ್ರೋಶಕ್ಕೆ ಗುರಿಯಾಗಿದ್ದಾರೆ. ಮೃತಪಟ್ಟ ಸ್ಯಾಂಟೋಸ್ ಅವರ ಕುಟುಂಬದ ಪ್ರಕಾರ, ಸ್ಯಾಂಟೋಸ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು. ಅದಕ್ಕಾಗಿ ಅವರು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಘಟನೆಗೆ ಸಾಕ್ಷಿಯಾದ ಸ್ಯಾಂಟೋಸ್ ಅವರ ಸೋದರಳಿಯ ಅಲಿಸನ್ ಡಿ ಜೀಸಸ್ ಈ ಕುರಿತು ಮಾಹಿತಿ ನೀಡಿದ್ದು, ಅಶ್ರುವಾಯು ಗ್ರೆನೇಡ್ ಅನ್ನು ಬಿಡುಗಡೆ ಮಾಡುವ ಮೊದಲು ಅವರು ಅಸ್ವಸ್ಥರಾಗಿದ್ದಾರೆ, ಹಾಗೆಲ್ಲ ಮಾಡಬೇಡಿ ಎಂದು ನಾವು ಪೊಲೀಸರಿಗೆ ಎಚ್ಚರಿಕೆ ನೀಡಿದ್ದೆವು. ಆದರೂ ಆತನಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Shocking Video: ಬಾತ್ರೂಂನೊಳಗೆ ನುಗ್ಗಿ ಟಾಯ್ಲೆಟ್ ಪೇಪರ್ ಸುತ್ತಿಕೊಂಡ ಕಾಳಿಂಗ ಸರ್ಪ; ಶಾಕಿಂಗ್ ವಿಡಿಯೋ ಇಲ್ಲಿದೆ
ಈ ಭಯಾನಕ ಸಾವು ಬ್ರೆಜಿಲ್‌ನಲ್ಲಿ ಆಘಾತವನ್ನು ಉಂಟುಮಾಡಿದೆ. ಬ್ರೆಜಿಲ್‌ನಲ್ಲಿ ಮಾರಣಾಂತಿಕ ಪೊಲೀಸ್ ಹಿಂಸಾಚಾರವು ಸಾಮಾನ್ಯವಾಗಿದೆ. ದೇಶದ ಕಪ್ಪು ವರ್ಣದ ಜನಸಂಖ್ಯೆಯ ಮೇಲೆ ಇದು ಬಹಳ ಪರಿಣಾಮ ಬೀರುತ್ತಿದೆ. ಬ್ರೆಜಿಲಿಯನ್ ಫೋರಂ ಆಫ್ ಪಬ್ಲಿಕ್ ಸೆಕ್ಯುರಿಟಿ ಪ್ರಕಾರ, ಪೊಲೀಸರು 2020ರಲ್ಲಿ ಬ್ರೆಜಿಲ್‌ನಲ್ಲಿ 6,416 ಜನರನ್ನು ಕೊಂದಿದ್ದಾರೆ. ಈ ರೀತಿ ಸಾವಿಗೀಡಾದವರಲ್ಲಿ ಶೇ.80ರಷ್ಟು ಕರಿಯರಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:53 pm, Fri, 27 May 22