AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kailia Posey GIFನಲ್ಲಿ ನಗುತ್ತಿರುವ ಬಾಲಕಿ ಎಂದೇ ಜನಪ್ರಿಯರಾಗಿದ್ದ ಕೈಲಿಯಾ ಪೋಸಿ ಆತ್ಮಹತ್ಯೆ

ಟಿಎಂಜೆಡ್​ನಂತಹ ಹಲವಾರು ಪ್ರಕಟಣೆಗಳು ಬುಧವಾರ ಕೆನಡಾದ ಗಡಿಯಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿರುವ ವಾಷಿಂಗ್ಟನ್ ರಾಜ್ಯದ ಬಿರ್ಚ್ ಬೇ ಸ್ಟೇಟ್ ಪಾರ್ಕ್‌ನಲ್ಲಿ ಪೋಸಿಯ ಮೃತದೇಹವು ಕಂಡುಬಂದಿದೆ ಎಂದು ವರದಿ ಮಾಡಿದೆ

Kailia Posey GIFನಲ್ಲಿ ನಗುತ್ತಿರುವ ಬಾಲಕಿ ಎಂದೇ ಜನಪ್ರಿಯರಾಗಿದ್ದ ಕೈಲಿಯಾ ಪೋಸಿ ಆತ್ಮಹತ್ಯೆ
ಕೈಲಿಯಾ ಪೋಸಿ
TV9 Web
| Edited By: |

Updated on:May 04, 2022 | 7:33 PM

Share

ಇಂಟರ್ನೆಟ್‌ನಲ್ಲಿ ಜನಪ್ರಿಯರಾಗಿದ್ದ ಕೈಲಿಯಾ ಪೋಸಿ (Kailia Posey) ವಾಷಿಂಗ್ಟನ್‌ನಲ್ಲಿ ನಿಧನರಾಗಿದ್ದಾರೆ ಎಂದು ಆಕೆಯ ಕುಟುಂಬ ಹೇಳಿದೆ. ಆಕೆಗೆ 16 ವರ್ಷ ಆಗಿತ್ತು. 5 ನೇ ವಯಸ್ಸಿನಲ್ಲಿ ಟಿಎಲ್​​ಸಿಯ ” Toddlers & Tiaras” ನಲ್ಲಿ ಕಾಣಿಸಿಕೊಂಡ ನಂತರ ಪೋಸಿ ಪ್ರಸಿದ್ಧರಾದರು. ಅವಳ ನಗುತ್ತಿರುವ ಮುಖದ GIF  ಪ್ರಪಂಚದಾದ್ಯಂತ ಜನರ ಇಷ್ಟ GIF ಆಗಿತ್ತು. ಆಕೆಯ ತಾಯಿ ಮಾರ್ಸಿ ಪೋಸಿ ಗ್ಯಾಟರ್‌ಮ್ಯಾನ್ ಫೇಸ್‌ಬುಕ್‌ನಲ್ಲಿ ಕೈಲಿಯಾ ನಿಧನದ ಸುದ್ದಿಯನ್ನು ಪ್ರಕಟಿಸಿದ್ದಾರೆ. “ನನ್ನ ಬಳಿ ಯಾವುದೇ ಪದಗಳಿಲ್ಲ. ಸುಂದರವಾದ ಹೆಣ್ಣು ಮಗು ಕಣ್ಮರೆಯಾಯಿತು. ಕೈಲಿಯಾಳನ್ನು ಕಳೆದುಕೊಂಡು ನಾವು ದುಃಖಿಸುತ್ತಿರುವಾಗ ದಯವಿಟ್ಟು ನಮಗೆ ಗೌಪ್ಯತೆಯನ್ನು ನೀಡಿ. ಸದಾ ನನ್ನ ಮಗು” ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ. ಟಿಎಂಜೆಡ್​ನಂತಹ ಹಲವಾರು ಪ್ರಕಟಣೆಗಳು ಬುಧವಾರ ಕೆನಡಾದ ಗಡಿಯಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿರುವ ವಾಷಿಂಗ್ಟನ್ ರಾಜ್ಯದ ಬಿರ್ಚ್ ಬೇ ಸ್ಟೇಟ್ ಪಾರ್ಕ್‌ನಲ್ಲಿ ಪೋಸಿಯ ಮೃತದೇಹವು ಕಂಡುಬಂದಿದೆ ಎಂದು ವರದಿ ಮಾಡಿದೆ. ಟಿಎಂಜೆಡ್ ತನ್ನ ವರದಿಯಲ್ಲಿ ಪೋಸಿ ಆತ್ಮಹತ್ಯೆ ಮಾಡಿದ್ದಾಳೆ ಎಂದು ಹೇಳಿದೆ. “ಅವಳು ಉಜ್ವಲ ಭವಿಷ್ಯವನ್ನು ಹೊಂದಿರುವ ನಿಪುಣ ಹುಡುಗಿಯಾಗಿದ್ದರೂ, ದುರದೃಷ್ಟವಶಾತ್ ಒಂದು ಪ್ರಚೋದಕ ಕ್ಷಣದಲ್ಲಿ, ಅವಳು ತನ್ನ ಬದುಕನ್ನು ಕೊನೆಗೊಳಿಸುವ ದುಡುಕಿನ ನಿರ್ಧಾರವನ್ನು ಮಾಡಿದಳು” ಎಂದು ಅವರ ಕುಟುಂಬ ಹೇಳಿದೆ ಎಂದು ಟಿಎಂಜೆಡ್ ವರದಿ ಉಲ್ಲೇಖಿಸಿದೆ.

ಟೋಡ್ಲರ್ಸ್ ಆಂಡ್ ಟಿಯಾರಸ್ ಮಕ್ಕಳ ಸೌಂದರ್ಯ ಸ್ಪರ್ಧೆಗಳ ಪ್ರಪಂಚದ ತೆರೆಯ ಹಿಂದಿನ ನೋಟವನ್ನು ನೀಡಿದ್ದು ಪೋಸಿ ಎರಡು ಬಾರಿ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ
Image
ಮಾರಿಯುಪೋಲ್ ಥಿಯೇಟರ್ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ 600 ಮಂದಿ ಸಾವು: ತನಿಖಾ ವರದಿ
View this post on Instagram

A post shared by kailia (@kailiaposey)

2012 ರ ಸಂಚಿಕೆಗಳಲ್ಲಿ ಒಂದರಲ್ಲಿ ಕೈಲಿಯಾಳ  ನಗುವ ಮುಖವನ್ನು ತೋರಿಸಲಾಗಿತ್ತು.  ಆಗ ಆಕೆಗೆ ಐದು ವರ್ಷ.  ಈ ನಗು ಮುಖ ಮೀಮ್ ಆಗಿ  ವೈರಲ್ ಆಗಿದ್ದು, ಅವಳನ್ನು ಜಾಗತಿಕವಾಗಿ ಗುರುತಿಸುವಂತೆ ಮಾಡಿದೆ.

ಪೋಸಿ ಇತ್ತೀಚೆಗೆ ಮಿಸ್ ಟೀನ್ ವಾಷಿಂಗ್ಟನ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಅವರ Instagram ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಸ್ಪರ್ಧೆಯ ವೆಬ್‌ಸೈಟ್  ಪೋಸಿ ಲಿಂಡೆನ್ ಹೈಸ್ಕೂಲ್‌ಗೆ ಹಾಜರಾಗಿದ್ದರು ಮತ್ತು ಕಮರ್ಷಿಯಲ್  ಪೈಲಟ್ ಆಗಲು ಕಾಲೇಜಿನಲ್ಲಿ ವಾಯುಯಾನವನ್ನು ಅಧ್ಯಯನ ಮಾಡಲು ಬಯಸಿದ್ದರು ಎಂದು ಹೇಳಿದರು.

ಅತ್ಯುತ್ತಮ ಶ್ರೇಣಿಗಳನ್ನು ಹೊಂದಿದ್ದಕ್ಕಾಗಿ ಅವಳು ತನ್ನ ಶಾಲೆಯ ಡೀನ್‌ಗಳ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದ್ದು. ಪೋಸಿ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಈಗ ಸ್ನೇಹಿತರು ಮತ್ತು ಅಭಿಮಾನಿಗಳ ಕಣ್ಣೀರ ಸಂದೇಶದಿಂದ ತುಂಬಿದೆ.

ವಿದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Wed, 4 May 22