ಉಕ್ರೇನ್​​ಗೆ ಜಗತ್ತಿನ ಡೆಡ್ಲಿ ಸ್ನೈಪರ್​ ವಾಲಿ ಬಲ; ದಿನಕ್ಕೆ 40 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದ್ದಾರಂತೆ ಈ ಯೋಧ !

| Updated By: Lakshmi Hegde

Updated on: Mar 12, 2022 | 3:58 PM

40 ವರ್ಷದ ಈ ವಾಲಿ ಜಗತ್ತಿನ ಅತ್ಯುತ್ತಮ ಸ್ನೈಪರ್​ಗಳಲ್ಲಿ (ಗುರಿಕಾರ- ಮರೆಯಲ್ಲಿ ನಿಂತು ಗುಂಡು ಹೊಡೆದರೂ ಗುರಿ ತಪ್ಪದವ) ಒಬ್ಬರು ಎನ್ನಲಾಗಿದೆ. ವಾಲಿ ಕಂಪ್ಯೂಟರ್​ ವಿಜ್ಞಾನಿಯೂ ಹೌದು.

ಉಕ್ರೇನ್​​ಗೆ ಜಗತ್ತಿನ ಡೆಡ್ಲಿ ಸ್ನೈಪರ್​ ವಾಲಿ ಬಲ; ದಿನಕ್ಕೆ 40 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದ್ದಾರಂತೆ ಈ ಯೋಧ !
ವಾಲಿ
Follow us on

ಯುದ್ಧ ನಡೆಯುತ್ತಿರುವ ಉಕ್ರೇನ್​ನಲ್ಲಿ (Russia Attack On Ukraine) ಅಲ್ಲಿನ ಸೇನೆಯೊಂದಿಗೆ ಸೇರಿ ದೇಶದ ನಾಗರಿಕರೂ ಕೂಡ ರಷ್ಯಾ ವಿರುದ್ಧ ಹೋರಾಡುತ್ತಿದ್ದಾರೆ. ಜೀವನದಲ್ಲೆಂದೂ ಬಂದೂಕು, ರೈಫಲ್​ ಮುಟ್ಟಿರದವರೂ ಕೂಡ ಸ್ವಲ್ಪ ಸಮಯದಲ್ಲೇ ತರಬೇತಿ ಪಡೆದು ರಷ್ಯಾ ಸೈನಿಕರನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದೆಡೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ನೀಡಿದ್ದ ಕರೆಗೆ ವಿದೇಶಗಳ 20 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಸ್ಪಂದಿಸಿ, ಉಕ್ರೇನ್​ ನೆಲದಲ್ಲಿ ನಿಂತು ರಷ್ಯಾ ವಿರುದ್ಧ ಸೆಣೆಸುತ್ತಿದ್ದಾರೆ. ಈ ಸ್ವಯಂ ಸೇವಕರಲ್ಲಿ ಯುಎಸ್​, ಯುಕೆ ಸೇರಿ ಹಲವು ದೇಶಗಳ ಜನರಿದ್ದಾರೆ. ಅಷ್ಟೇ ಅಲ್ಲ ಭಾರತದವರೂ ಕೆಲವರು ಇರುವುದಾಗಿ ವರದಿಯಾಗಿದೆ.

ಈ ಮಧ್ಯೆ ಕೆನಡಾ ಸೇನೆಯಲ್ಲಿದ್ದು, ಡೆಡ್ಲಿ ಸ್ನೈಪರ್​ ಎಂದೇ ಖ್ಯಾತರಾಗಿರುವ ಯೋಧನೊಬ್ಬ ಉಕ್ರೇನ್​ಗೆ ಕಾಲಿಟ್ಟಿದ್ದು, ಅವರೀಗ ಭರ್ಜರಿ ಸುದ್ದಿಯಲ್ಲಿದ್ದಾರೆ. ಎರಡು ದಿನಗಳ ಹಿಂದೆಯೇ ಉಕ್ರೇನ್​ ತಲುಪಿರುವ ಇವರು ರಾಯಲ್​ ಕೆನಡಿಯನ್​ 22ನೇ ರೆಜಿಮೆಂಟ್​​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು. ಇಟ್ಟ ಗುರಿ ತಪ್ಪದ ಯೋಧ ಎಂದೇ ಖ್ಯಾತರಾಗಿದ್ದಾರೆ. ಇನ್ನೊಂದೆಂದರೆ ಈ ವ್ಯಕ್ತಿಯ ಹೆಸರು ಇನ್ನೂ ಗೊತ್ತಾಗಿಲ್ಲ. ಆದರೆ ಸಾಮಾನ್ಯವಾಗಿ ವಾಲಿ ಎಂದೇ ಪ್ರಸಿದ್ಧರಾಗಿದ್ದಾರೆ. ಈ ಹೆಸರನ್ನು ಇವರಿಗೆ ಅಫ್ಘಾನಿಸ್ತಾನ ಕೊಟ್ಟಿದೆ ಎಂದೂ ಹೇಳಲಾಗಿದೆ.

ಯಾರು ಈ ವಾಲಿ?:
40 ವರ್ಷದ ಈ ವಾಲಿ ಜಗತ್ತಿನ ಅತ್ಯುತ್ತಮ ಸ್ನೈಪರ್​ಗಳಲ್ಲಿ (ಗುರಿಕಾರ- ಮರೆಯಲ್ಲಿ ನಿಂತು ಗುಂಡು ಹೊಡೆದರೂ ಗುರಿ ತಪ್ಪದವ) ಒಬ್ಬರು ಎನ್ನಲಾಗಿದೆ. ವಾಲಿ ಕಂಪ್ಯೂಟರ್​ ವಿಜ್ಞಾನಿಯೂ ಹೌದು. ಇವರಿಗೆ ವಿವಾಹವಾಗಿದ್ದು, ಮನೆಯಲ್ಲಿ ಒಂದುವರ್ಷದ ಮಗುವಿದೆ ಎಂದೂ ಹೇಳಲಾಗಿದೆ. ಕುಟುಂಬವನ್ನೆಲ್ಲ ಬಿಟ್ಟು ಉಕ್ರೇನ್​ಗೆ ಬಂದಿರುವ ಇವರು ರಷ್ಯಾ ವಿರುದ್ಧ ಹೋರಾಟ ಮಾಡಲು ಉತ್ಸಾಹದಿಂದ ಇದ್ದೇನೆ, ಉಕ್ರೇನಿಯನ್ನಿರಿಗೆ ಸಹಾಯ ಮಾಡಲು ಬಂದಿದ್ದೇನೆ ಎಂದು ಉಕ್ರೇನ್​ನ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈಗಾಗಲೇ ರಷ್ಯಾದ ಆರು ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂಬುದಾಗಿಯೂ ವರದಿಯಾಗಿದೆ.

ಡೆಡ್ಲಿ ಸ್ನೈಪರ್​: 
ಒಂದು ದಿನದಲ್ಲಿ 40 ಜನರನ್ನು ಕೊಲ್ಲುವ ಸಾಮರ್ಥ್ಯ ಇರುವ ವಾಲಿ, ಅತ್ಯಂತ ಡೆಡ್ಲಿ ಗುರಿಕಾರರೆನಿಸಿದ್ದಾರೆ. ಇವರು 2009ರಿಂದ 2011ರವರೆಗೆ ಅಫ್ಘಾನಿಸ್ತಾನದ ಕಂದಹಾರ್​​ ಹೋರಾಟದಲ್ಲೂ ಪಾಲ್ಗೊಂಡಿದ್ದಾರೆ. ಇದೇ ವೇಳೆ ಅವರಿಗೆ ವಾಲಿ ಎಂಬ ಹೆಸರು ಬಂದಿದೆ. ಇದೊಂದು ಅರೇಬಿಕ್​ ಶಬ್ದವಾಗಿದ್ದು, ಹೀಗೆಂದರೆ ರಕ್ಷಕ ಎಂಬ ಅರ್ಥ ಕೊಡುತ್ತದೆ. ಉತ್ತಮ ಸ್ನೈಪರ್ ಅಥವಾ ಗುರಿಕಾರ ಎಂದು ಕರೆಸಿಕೊಳ್ಳಬೇಕೆಂದರೆ ಆತ ದಿನಕ್ಕೆ 5-6 ಮಂದಿಯನ್ನು ಕೊಲ್ಲುವಂತಿರಬೇಕು. ಶ್ರೇಷ್ಠ ಸ್ನೈಪರ್​ ಎಂಬ ಪಟ್ಟ ಬೇಕಾದರೆ ದಿನಕ್ಕೆ 7-10 ಮಂದಿಯನ್ನಾದರೂ ಸಾಯಿಸಬೇಕು. ಆದರೆ ಈ ವಾಲಿ ದಿನಕ್ಕೆ 40 ಜನರನ್ನು ಕೊಲ್ಲುವ ಶಕ್ತಿ ಹೊಂದಿದ್ದು, ಡೆಡ್ಲಿ ಸ್ನೈಪರ್​ ಎಂದೇ ಖ್ಯಾತರಾಗಿದ್ದಾರೆ ಎಂದು ಮಾಧ್ಯಮಗಳು, ಕೆಲವು ಡಾಕ್ಯುಮೆಂಟರಿಗಳಲ್ಲಿ ಉಲ್ಲೇಖಿಸಲಾಗಿದೆ.

 

ಇದನ್ನೂ ಓದಿ: Video: ಗೆದ್ದು 2ನೇ ಬಾರಿಗೆ ಸಿಎಂ ಆದ ಯೋಗಿ ಆದಿತ್ಯನಾಥ್​​ಗೆ ತಿಲಕವಿಟ್ಟು, ಶುಭಾಶಯ ಕೋರಿದ ಮುಲಾಯಂ ಸಿಂಗ್​ ಯಾದವ್​ ಸೊಸೆ, ಮೊಮ್ಮಗಳು