ಸೊಮಾಲಿಯಾದಲ್ಲಿ ಅಲ್-ಶಬಾಬ್ ಉಗ್ರ ಸಂಘಟನೆಯಿಂದ ಗುಂಡಿನ ದಾಳಿ: 9 ನಾಗರಿಕರ ಸಾವು

ಭಾನುವಾರ ತಡರಾತ್ರಿ ಸ್ಫೋಟಕಗಳನ್ನು ತುಂಬಿದ ಕಾರು ಹೋಟೆಲ್ ತವಕಲ್ ಗೇಟ್‌ಗೆ ನುಗ್ಗಿ ದಾಳಿ ಆರಂಭಿಸಿದೆ. ನಂತರ ಭದ್ರತಾ ಪಡೆಗಳು ಬಂದೂಕುಧಾರಿಗಳ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದರು.

ಸೊಮಾಲಿಯಾದಲ್ಲಿ ಅಲ್-ಶಬಾಬ್ ಉಗ್ರ ಸಂಘಟನೆಯಿಂದ ಗುಂಡಿನ ದಾಳಿ: 9 ನಾಗರಿಕರ ಸಾವು
ಪ್ರಾತಿನಿಧಿಕ ಚಿತ್ರ
Updated By: ಆಯೇಷಾ ಬಾನು

Updated on: Oct 24, 2022 | 7:16 AM

ಸೊಮಾಲಿಯಾ: ಸೊಮಾಲಿಯಾದಲ್ಲಿ(Somalia)  ಉಗ್ರರ ಅಟ್ಟಹಾಸ ಮುಂದುವರೆದಿದೆ. ಅಲ್-ಶಬಾಬ್ ಉಗ್ರ ಸಂಘಟನೆ(al-Shabab Armed Group) ಸೊಮಾಲಿಯಾದ ಬಂದರು ನಗರ ಕಿಸ್ಮಾಯೊದ ಹೋಟೆಲ್‌ ಮೇಲೆ ಭಾನುವಾರ ದಾಳಿ ನಡೆಸಿದ್ದು ಘಟನೆಯಲ್ಲಿ ಒಂಬತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಭಾನುವಾರ ತಡರಾತ್ರಿ ಸ್ಫೋಟಕಗಳನ್ನು ತುಂಬಿದ ಕಾರು ಹೋಟೆಲ್ ತವಕಲ್ ಗೇಟ್‌ಗೆ ನುಗ್ಗಿ ದಾಳಿ ಆರಂಭಿಸಿದೆ. ನಂತರ ಭದ್ರತಾ ಪಡೆಗಳು ಬಂದೂಕುಧಾರಿಗಳ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದರು. ದಾಳಿಯ ಹೊಣೆಯನ್ನು ಅಲ್-ಶಬಾಬ್ ಉಗ್ರ ಸಂಘಟನೆ ಹೊತ್ತುಕೊಂಡಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಭದ್ರತಾ ಅಧಿಕಾರಿಗಳು ದಾಳಿಕೋರರಲ್ಲಿ ಮೂವರನ್ನು ಗುಂಡಿಕ್ಕಿ ಕೊಂದಿದ್ದು ನಾಲ್ಕನೆಯ ದಾಳಿಕೋರ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ ಎಂದು ಸೊಮಾಲಿಯಾದ ಜುಬ್ಬಾಲ್ಯಾಂಡ್‌ನ ಭದ್ರತಾ ಸಚಿವ ಯೂಸುಫ್ ಹುಸೇನ್ ಧುಮಾಲ್ ತಿಳಿಸಿದ್ದಾರೆ. ಸ್ಫೋಟದಲ್ಲಿ, ವಿದ್ಯಾರ್ಥಿಗಳು ಮತ್ತು ನಾಗರಿಕರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 47 ಜನರಿಗೆ ಗಾಯಗಳಾಗಿವೆ. ಗಾಯಗೊಂಡಿರುವವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸ್ಫೋಟ ಸಂಭವಿಸಿದ ಹೋಟೆಲ್ ಶಾಲೆಯ ಸಮೀಪದಲ್ಲಿದೆ, ಆದ್ದರಿಂದ ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ ಸೇರಿದ ಅಯೋಧ್ಯೆಯ ದೀಪೋತ್ಸವ, ಸರಯು ನದಿಗೆ ಮೋದಿ ಆರತಿ ಫೋಟೋಸ್​ ಇಲ್ಲಿವೆ

ಈ ದಾಳಿ ಸರ್ಕಾರವನ್ನು ಗುರಿ ಇಟ್ಟು ಕೊಂಡು ಮಾಡಿದಲ್ಲ ಎಂದು ಪೊಲೀಸ್ ಅಧಿಕಾರಿ ಅಬ್ದುಲ್ಲಾಹಿ ಇಸ್ಮಾಯಿಲ್ ಹೇಳಿದ್ದಾರೆ. ದಾಳಿ ನಡೆದ ಹೋಟೆಲ್​​ಗೆ ಕೇವಲ ಸಾಮಾನ್ಯ ಜನ, ನಾಗರಿಕರು ಬರುತ್ತಾರೆ. ದಾಳಿ ನಡೆದದ್ದು ಈ ಹೋಟೆಲ್‌ನಿಂದ ಕೆಲಸ ಮಾಡುವ ಜುಬ್ಬಲ್ಯಾಂಡ್ ಪ್ರದೇಶದ ನಿರ್ವಾಹಕರನ್ನು ಹೊಡೆಯಲು ಗುಂಪು ಉದ್ದೇಶಿಸಿದೆ ಎಂದು ಅಲ್-ಶಬಾಬ್ ಉಗ್ರ ಸಂಘಟನೆ ಮಿಲಿಟರಿ ಕಾರ್ಯಾಚರಣೆಯ ವಕ್ತಾರ ಅಬ್ಡಿಯಾಸಿಸ್ ಅಬು ಮುಸಾಬ್ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಅಲ್-ಶಬಾಬ್ ಉಗ್ರ ಸಂಘಟನೆ ಭಯೋತ್ಪಾದಕರು ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಹಯಾತ್ ಹೋಟೆಲ್‌ಗೆ ನುಗ್ಗಿ ಸುಮಾರು 30 ಗಂಟೆಗಳ ದಾಳಿ ನಡೆಸಿ, ಅನೇಕರನ್ನು ಬಲಿ ಪಡೆದಿದ್ದರು ಎಂದು ಕೆಲ ಮಾಧ್ಯಮಗಳು ಉಲ್ಲೇಖಿಸಿವೆ.

Published On - 7:14 am, Mon, 24 October 22