AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿ ಮಾಂಸ ಸೇವನೆ ನಿಷೇಧಕ್ಕೆ ಒಪ್ಪಿಗೆ ಸೂಚಿಸಿದ ದಕ್ಷಿಣ ಕೊರಿಯಾ ಸಂಸತ್​​

South Korean parliament: ದಕ್ಷಿಣ ಕೊರಿಯಾದಲ್ಲಿ ಇನ್ನು ಮುಂದೆ ನಾಯಿ ಮಾಂಸ ಸೇವನೆ ಮಾಡುವಂತಿಲ್ಲ ಎಂಬ ಕಾನೂನನ್ನು ಜಾರಿಗೆ ತಂದಿದೆ. ಸಂಸತ್ತು ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ಈ ಮಸೂದೆಯನ್ನು ಜಾರಿಗೆ ತರಲು ಸದನದ ಮುಂದಿಟ್ಟರು, ಸರ್ವಾನುಮತದ ಮತದ ಮೂಲಕ ನಾಯಿ ಮಾಂಸ ಸೇವನೆಯನ್ನು ತೆಗೆದುಹಾಕುವ ಮಸೂದೆಯನ್ನು ಅಂಗೀಕರಿಸಿತು.

ನಾಯಿ ಮಾಂಸ ಸೇವನೆ ನಿಷೇಧಕ್ಕೆ ಒಪ್ಪಿಗೆ ಸೂಚಿಸಿದ ದಕ್ಷಿಣ ಕೊರಿಯಾ ಸಂಸತ್​​
ಅಕ್ಷಯ್​ ಪಲ್ಲಮಜಲು​​
|

Updated on: Jan 09, 2024 | 3:46 PM

Share

ದಕ್ಷಿಣ ಕೊರಿಯಾದ (South Korea) ಸರ್ಕಾರ ಮಹತ್ವದ ಒಂದು ಹೆಜ್ಜೆಯನ್ನು ಇಟ್ಟಿದೆ. ದಕ್ಷಿಣ ಕೊರಿಯಾದಲ್ಲಿ ಇನ್ನು ಮುಂದೆ ನಾಯಿ ಮಾಂಸ ಸೇವನೆ ಮಾಡುವಂತಿಲ್ಲ ಎಂಬ ಕಾನೂನನ್ನು ಜಾರಿಗೆ ತಂದಿದೆ. ಸಂಸತ್ತು ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ಈ ಮಸೂದೆಯನ್ನು ಜಾರಿಗೆ ತರಲು ಸದನದ ಮುಂದಿಟ್ಟರು, ಸರ್ವಾನುಮತದ ಮತದ ಮೂಲಕ ನಾಯಿ ಮಾಂಸ ಸೇವನೆಯನ್ನು ತೆಗೆದುಹಾಕುವ ಮಸೂದೆಯನ್ನು ಅಂಗೀಕರಿಸಿತು. ಇನ್ನು ಈ ಮಸೂದೆ ಪರ 208 ಮತಗಳನ್ನು ಚಲಾವಣೆ ಮಾಡಲಾಗಿದೆ. ಈ ಮಸೂದೆಯಿಂದ ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸದ ತಳಿ, ಮಾಂಸವನ್ನು ತಿನ್ನುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈ ಮಸೂದೆಗೆ ಸಂಸದರು ಒಪ್ಪಿಗೆಯನ್ನು ಸೂಚಿಸಿದ್ದು, ದೇಶದಲ್ಲಿ ಇದು ಮಹತ್ವದ ಬದಲಾವಣೆ ತರಲಿದೆ ಎಂದು ಹೇಳಲಾಗಿದೆ.

ಇನ್ನು ಈ ಮಸೂದೆಯನ್ನು ಕಾನೂನು ರೂಪಕ್ಕೆ ತರಲಾಗುವುದು ಹಾಗೂ ಆಹಾರದ ಉದ್ದೇಶಕ್ಕಾಗಿ ನಾಯಿಯನ್ನು ಕಡಿಯುವುದು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 30 ಮಿಲಿಯನ್ ವಾನ್ ($23,000) ವರೆಗೆ ದಂಡ ವಿಧಿಸುತ್ತದೆ. ನಾಯಿಯನ್ನು ಸಂತಾನಾಭಿವೃದ್ಧಿ ಮಾಡುವುದು ಅಥವಾ ಆಹಾರಕ್ಕಾಗಿ ವಿತರಿಸುವುದು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20 ಮಿಲಿಯನ್ ವರೆಗೆ ದಂಡ ವಿಧಿಸಲಾಗುತ್ತದೆ.

ಮೂರು ವರ್ಷಗಳ ಕಾಲ ಈ ಮಸೂದೆಗೆ ನೀತಿ-ನಿಯಮಗಳನ್ನು ರೂಪಿಸಿ, ಇದನ್ನು 2027ಕ್ಕೆ ಕಾನೂನು ರೂಪಕ್ಕೆ ತರಲಾಗುವುದು ಎಂದು ಹೇಳಿದ್ದಾರೆ. ನಾಯಿ ಮಾಂಸ ಉದ್ಯಮದಲ್ಲಿರುವವರಿಗೆ ತಮ್ಮ ವ್ಯಾಪಾರವನ್ನು ಬದಲಾಯಿಸಲು ಸಹಾಯ ಮಾಡಲು ಪ್ರಮುಖ ಸಬ್ಸಿಡಿಗಳನ್ನು ನೀಡುತ್ತದೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಚುನಾವಣೆ ಪ್ರಚಾರ ಸಮಯದಲ್ಲಿ ನಾಯಿ ಮಾಂಸ ಸೇವನೆಯನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿದರು. ಅದರಂತೆ ಇದೀಗ ಅದನ್ನು ನಿಷೇಧ ಮಾಡಲಾಗಿದೆ. ಇನ್ನು ನಾಯಿ ಮಾಂಸ ಸೇವನೆ ನಿಷೇಧಕ್ಕೆ ಮೊದಲು ಧ್ವನಿ ಎತ್ತಿದ್ದು ಕಿಮ್ ಕಿಯೋನ್ ಹೀ ಎಂಬ ಮಹಿಳೆ. ನಾಯಿ ಮಾಂಸವನ್ನು ಸೇವಿಸುವ ಹಲವಾರು ರಾಷ್ಟ್ರಗಳಲ್ಲಿ ದಕ್ಷಿಣ ಕೊರಿಯಾ ಒಂದಾಗಿದೆ.

ಇದನ್ನೂ ಓದಿ: ಮಕ್ಕಳನ್ನು ಹೆರಲು ದಕ್ಷಿಣ ಕೊರಿಯಾ ಮಹಿಳೆಯರ ನಿರಾಕರಣೆ: ಕುಸಿಯುತ್ತಿದೆ ಜನಸಂಖ್ಯೆ, ಸರ್ಕಾರ ಕಂಗಾಲು

ನಾಯಿ ಮಾಂಸ ಸೇವನೆಯನ್ನು ಅದೆಷ್ಟೋ ದೇಶಗಳು ಇದನ್ನು ವಿರೋಧಿಸಿದೆ. ಇನ್ನು ಈ ಮಾಂಸ ಸೇವನೆ ಮಾಡಲು ಅದನ್ನು ಬ್ಲಡ್ಜಿಯನಿಂಗ್, ನೇಣು ಮತ್ತು ವಿದ್ಯುದಾಘಾತದ ಮೂಲಕ ಕೊಲ್ಲುವುದನ್ನು ವಿರೋಧಿಸಿತ್ತು. ದಕ್ಷಿಣ ಕೊರಿಯಾ ಸಾರ್ವಜನಿಕರು ನಾಯಿಗಳನ್ನು ಸಾಕು ಪ್ರಾಣಿಗಳಂತೆ ಮನೆಯಲ್ಲಿ ಸಾಕಲಾಗುತ್ತಿದೆ. ಜತೆಗೆ ನಾಯಿ ಮಾಸದಿಂದ ಸಾರ್ವಜನಿಕರು ದೂರ ಸರಿಯುತ್ತಿದ್ದಾರೆ ಎಂದು ಹೇಳಲಾಗಿದೆ.

ಕಳೆದ ಹಲವು ವರ್ಷಗಳಿಂದ ನಾಯಿ ಮಾಂಸ ಸೇವನೆ ತುಂಬಾ ಕುಸಿತವಾಗಿದೆ. ಈ ಹಿಂದೆ ಇದನ್ನು ನಿಷೇಧಿಸಬೇಕು ಎಂದು ಸರ್ಕಾರ ಯೋಜನೆ ಹಾಕಿತ್ತು. ಆದರೆ ಅನೇಕ ವಿರೋಧದಿಂದ ಇದನ್ನು ನಿಷೇಧ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ದಕ್ಷಿಣ ಕೊರಿಯಾದ ಸರ್ಕಾರದ ಅಂಕಿಅಂಶಗಳ ಪ್ರಕಾರ 1,600 ರೆಸ್ಟೋರೆಂಟ್‌ಗಳು ನಾಯಿ ಮಾಂಸವನ್ನು ನೀಡುತ್ತಿವೆ ಮತ್ತು 1,150 ನಾಯಿ ಸಾಕಣೆ ಕೇಂದ್ರಗಳು ದೇಶದಲ್ಲಿ ಉದ್ಯಮವನ್ನು ಪೂರೈಸುತ್ತಿವೆ ಎಂದು ಹೇಳಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ