Spirit Airlines: ವಿಮಾನದ ಫ್ಲೋರ್ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಮಹಿಳೆ
ಕಳೆದ ಕೆಲವು ತಿಂಗಳುಗಳಿಂದ ವಿಮಾನದಲ್ಲಿ ಅಸಭ್ಯ ವರ್ತನೆ ಪ್ರಕರಣಗಳು ಸಾಮಾನ್ಯವಾಗಿವೆ. ಪ್ರಯಾಣಿಕರೊಬ್ಬರು ಮತ್ತೊಂದು ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ್ದು, ವಿಮಾನದಲ್ಲಿ ಮಹಿಳೆಗೆ ಚೇಳು ಕಚ್ಚಿದ್ದ ಘಟನೆ ನಡೆದಿತ್ತು.
ಕಳೆದ ಕೆಲವು ತಿಂಗಳುಗಳಿಂದ ವಿಮಾನದಲ್ಲಿ ಅಸಭ್ಯ ವರ್ತನೆ ಪ್ರಕರಣಗಳು ಸಾಮಾನ್ಯವಾಗಿವೆ. ಪ್ರಯಾಣಿಕರೊಬ್ಬರು ಮತ್ತೊಂದು ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ್ದು, ವಿಮಾನದಲ್ಲಿ ಮಹಿಳೆಗೆ ಚೇಳು ಕಚ್ಚಿದ್ದ ಘಟನೆ ನಡೆದಿತ್ತು. ಇದೀಗ ಮಹಿಳೆಯೊಬ್ಬರು ವಿಮಾನದ ಫ್ಲೋರ್ನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ವಿಮಾನ ಸಿಬ್ಬಂದಿ ಕೆಲವು ಗಂಟೆಗಳ ಕಾಲ ವಾಶ್ರೂಂಗೆ ಹೋಗುವುದನ್ನು ತಡೆದಿದ್ದರು, ಗಂಟೆ ಗಟ್ಟಲೆ ಕಾದು ತಡೆದುಕೊಳ್ಳಲಾಗದೆ ಈ ಹೆಜ್ಜೆ ಇಡಬೇಕಾಯಿತು ಎಂದು ಮಹಿಳಾ ಪ್ರಯಾಣಿಕರು ತಿಳಿಸಿದ್ದಾರೆ.
ವ್ಯೂ ಫ್ರಂ ದಿ ವಿಂಗ್ ವರದಿಯ ಪ್ರಕಾರ, ಯುಎಸ್ ಮೂಲದ ಸ್ಪಿರಿಟ್ ಏರ್ಲೈನ್ಸ್ ನಿರ್ವಹಿಸುವ ವಿಮಾನದಲ್ಲಿ ಈ ಘಟನೆ ನಡೆದಿದೆ.
ಮತ್ತಷ್ಟು ಓದಿ: Air India: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ
ಇಂತಹ ಘಟನೆಗಳು ನಡೆದಿರುವುದು ಮೊದಲಲ್ಲ, 2018ರಲ್ಲಿ ವಿಮಾನದಲ್ಲಿ ಇಂಧನ ತುಂಬುತ್ತಿರುವಾಗ ಶೌಚಾಲಯವನ್ನು ಬಳಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಪ್ರಯಾಣಿಕರೊಬ್ಬರು ವಿಮಾನ್ ಫ್ಲೋರ್ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದರು.
?? ÉCART CIVILISATIONNEL : 20/07/2023 Une Afro-américaine à bord d’un vol @SpiritAirlines urine sur le sol parce qu’elle ne veut pas attendre qu’ils ouvrent les toilettes après le décollage. Les hôtesses de l’air, quant à elles, lui disent qu’elle devrait boire de l’eau “parce… pic.twitter.com/EQbPGy0NFK
— Valeurs Occidentales (@ValOccidentales) July 21, 2023
ಇದು ಅಸಹ್ಯಕರವಾದದ್ದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ, ಹಾಗೆಯೇ ನನ್ನ ಬೆಕ್ಕು ಕೂಡ ಇವರಿಗಿಂತ ಸ್ವಚ್ಛವಾಗಿದೆ, ಸ್ವಚ್ಛಗೊಳಿಸುವವರೆಗೆ ತಾಳ್ಮೆಯಿಂದ ಕಾಯುತ್ತದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಇದುವರೆಗೂ ಸ್ಪಿರಿಟ್ ಏರ್ಲೈನ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ