ಸ್ಪುಟ್ನಿಕ್​ ವಿ ಲಸಿಕೆ ತೆಗೆದುಕೊಂಡವರು ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ, ಸಾವಿಗೀಡಾಗಿಲ್ಲ: ಆರ್​ಡಿಐಎಫ್ ಅಧ್ಯಯನ

| Updated By: Skanda

Updated on: Jul 12, 2021 | 12:10 PM

ಮೊದಲ ಮತ್ತು ಎರಡನೇ ಹಂತದ ವೈದ್ಯಕೀಯ ಪರೀಕ್ಷೆಯಲ್ಲೂ ಸ್ಪುಟ್ನಿಕ್ ವಿ ಉತ್ತಮ ಫಲಿತಾಂಶವನ್ನು ನೀಡಿದ್ದು, ಮೂರನೇ ಹಂತದ ಪರೀಕ್ಷೆ ವೇಳೆಗೂ ಸ್ಪುಟ್ನಿಕ್​ ವಿ ಪಡೆದವರಲ್ಲಿ ಯಾವುದೇ ಸಾವು ಸಂಭವಿಸದೇ ಇರುವುದು ಹಾಗೂ ಯಾರೂ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗದೇ ಇರುವುದು ಗೊತ್ತಾಗಿದೆ.

ಸ್ಪುಟ್ನಿಕ್​ ವಿ ಲಸಿಕೆ ತೆಗೆದುಕೊಂಡವರು ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ, ಸಾವಿಗೀಡಾಗಿಲ್ಲ: ಆರ್​ಡಿಐಎಫ್ ಅಧ್ಯಯನ
ಸ್ಪುಟ್ನಿಕ್​ ವಿ ಲಸಿಕೆ
Follow us on

ದೆಹಲಿ: ರಷ್ಯಾ ಮೂಲದ ಕೊರೊನಾ ಲಸಿಕೆ ಸ್ಪುಟ್ನಿಕ್​ ವಿ ಸಾಮರ್ಥ್ಯದ ಬಗ್ಗೆ ಅದರ ಹೂಡಿಕೆದಾರ ಸಂಸ್ಥೆ ದಿ ರಷ್ಯನ್ ಡೈರೆಕ್ಟ್​ ಇನ್​ವೆಸ್ಟ್​ಮೆಂಟ್ ಫಂಡ್ (ಆರ್​ಡಿಐಎಫ್) ಅತ್ಯಂತ ಆಶಾದಾಯಕ ಮಾತುಗಳನ್ನಾಡಿದೆ. ಸ್ಯಾನ್​ ಮೆರಿನೋ ಪ್ರದೇಶದಲ್ಲಿ ಮಾರ್ಚ್​ 4ರಿಂದ ಜೂನ್ 8ರ ತನಕ ನಡೆಸಲಾದ ಅಧ್ಯಯನದಲ್ಲಿ ಸ್ಪುಟ್ನಿಕ್​ ಲಸಿಕೆ ತೆಗೆದುಕೊಂಡವರಲ್ಲಿ ಯಾರೂ ಆಸ್ಪತ್ರೆಗೆ ದಾಖಲಾಗದೇ ಕೊರೊನಾ ವಿರುದ್ಧ ಸಶಕ್ತರಾಗಿ ಹೋರಾಡಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ವರದಿಯನ್ನು ಲ್ಯಾನ್ಸೆಟ್ ವತಿಯಿಂದ ಪ್ರಕಟಿಸಲಾಗಿದ್ದು, 60 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ.

ಸ್ಯಾನ್​ ಮೆರಿನೋದಲ್ಲಿ ನಡೆಸಲಾದ ಈ ಅಧ್ಯಯನದಲ್ಲಿ ಮಾರ್ಚ್ 4ರಿಂದ ಜೂನ್ 8ರ ತನಕ ಒಂದು ಅಥವಾ ಎರಡು ಡೋಸ್ ಸ್ಪುಟ್ನಿಕ್ ವಿ ಲಸಿಕೆ ಪಡೆದವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ಪ್ರಕಾರ ಬೇರೆ ಲಸಿಕೆಗಳಿಗೆ ಹೋಲಿಸಿದರೆ 60 ವರ್ಷ ಮೇಲ್ಪಟ್ಟವರಲ್ಲಿ ಸ್ಪುಟ್ನಿಕ್​ ವಿ ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದ್ದು, ಎರಡು ಡೋಸ್​ಗಳನ್ನು ಪಡೆದವರಿಗೆ ಉತ್ತಮ ರಕ್ಷಣೆ ನೀಡುವ ಸಾಮರ್ಥ್ಯ ಹೊಂದಿದೆ ಎನ್ನುವುದು ತಿಳಿದುಬಂದಿದೆ.

ಮೊದಲ ಮತ್ತು ಎರಡನೇ ಹಂತದ ವೈದ್ಯಕೀಯ ಪರೀಕ್ಷೆಯಲ್ಲೂ ಸ್ಪುಟ್ನಿಕ್ ವಿ ಉತ್ತಮ ಫಲಿತಾಂಶವನ್ನು ನೀಡಿದ್ದು, ಮೂರನೇ ಹಂತದ ಪರೀಕ್ಷೆ ವೇಳೆಗೂ ಸ್ಪುಟ್ನಿಕ್​ ವಿ ಪಡೆದವರಲ್ಲಿ ಯಾವುದೇ ಸಾವು ಸಂಭವಿಸದೇ ಇರುವುದು ಹಾಗೂ ಯಾರೂ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗದೇ ಇರುವುದು ಗೊತ್ತಾಗಿದೆ.

ಈ ಹಿಂದೆ ಲ್ಯಾನ್ಸೆಟ್​ ಪ್ರಕಟಿಸಿದ ವರದಿ ಪ್ರಕಾರ ಸ್ಪುಟ್ನಿಕ್​ ವಿ ಲಸಿಕೆ ಶೇ.91.6ರಷ್ಟು ಪರಿಣಾಮಕಾರಿಯಾಗಿದ್ದು, ಡೆಲ್ಟಾ ವೈರಾಣುವಿನಿಂದಲೂ ರಕ್ಷಣೆ ಕೊಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿತ್ತು. ಅದೇ ವಿಚಾರದ ಬಗ್ಗೆ ವರದಿ ನೀಡಿದ್ದ ಆರ್​ಡಿಐಎಫ್ ಸ್ಪುಟ್ನಿಕ್​ ವಿ ಲಸಿಕೆ ಶೇ.97.6ರಷ್ಟು ಪರಿಣಾಮಕಾರಿ ಎಂದು ತಿಳಿಸಿತ್ತು. ಸದ್ಯ ಬೇರೆಲ್ಲಾ ಲಸಿಕೆಗಳಿಗೆ ಹೋಲಿಸಿದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಕಾರ್ಯಕ್ಷಮತೆಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:
Sputnik V: ಕೋವಿಶೀಲ್ಡ್​, ಕೋವಾಕ್ಸಿನ್​ ನಂತರ ಮತ್ತೊಂದು ಕೊರೊನಾ ಲಸಿಕೆ, ಸ್ಪುಟ್ನಿಕ್​ ವಿ ಬೆಂಗಳೂರಿ​ನಲ್ಲಿ ಲಭ್ಯ

ಸ್ಪುಟ್ನಿಕ್​ ಲೈಟ್​ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗಕ್ಕೆ ಅನುಮತಿ ನಿರಾಕರಿಸಿದ ಡಿಸಿಜಿಐ; ಸಿಂಗಲ್​ ಡೋಸ್​ ವ್ಯಾಕ್ಸಿನ್​ ಬಳಕೆ ಸದ್ಯಕ್ಕಿಲ್ಲ