ಭಾರತ ಸೇರಿ 7 ದೇಶಗಳ ಪ್ರಯಾಣಿಕರಿಗೆ ವೀಸಾ ಮುಕ್ತ ಪ್ರವೇಶಕ್ಕೆ ಶ್ರೀಲಂಕಾ(Srilanka) ಕ್ಯಾಬಿನೆಟ್ ಅನುಮೋದನೆ ನೀಡಿದೆ. ಪ್ರಾಯೋಗಿಕ ಯೋಜನೆಯ ಭಾಗವಾಗಿ ತಕ್ಷಣವೇ ಜಾರಿಗೆ ಬರುವಂತೆ ಚೀನಾ, ರಷ್ಯಾ, ಭಾರತ, ಥೈಲ್ಯಾಂಡ್, ಮಲೇಷ್ಯಾ, ಜಪಾನ್ ಮತ್ತು ಇಂಡೋನೇಷ್ಯಾ ಸೇರಿ ಏಳು ದೇಶಗಳ ಪ್ರಯಾಣಿಕರಿಗೆ ಉಚಿತ ವೀಸಾ ನೀಡುವ ಪ್ರಸ್ತಾಪವನ್ನು ಶ್ರೀಲಂಕಾ ಕ್ಯಾಬಿನೆಟ್ ಅನುಮೋದಿಸಿದೆ.
ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಮಾಹಿತಿ ನೀಡಿದ್ದು, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್‌ಗೆ ಉಚಿತ ವೀಸಾಗಳನ್ನು ಮಾರ್ಚ್ 31 ರವರೆಗೆ ಪ್ರಾಯೋಗಿಕ ಯೋಜನೆಯಾಗಿ ತಕ್ಷಣವೇ ಜಾರಿಗೆ ತರಲು ಕ್ಯಾಬಿನೆಟ್ ಅನುಮೋದಿಸಿದೆ ಎಂದು ಹೇಳಿದ್ದಾರೆ.
ಪ್ರವಾಸೋದ್ಯಮ ಸಚಿವಾಲಯವು ಹಿಂದಿನ ಕ್ಯಾಬಿನೆಟ್ ಸಭೆಯಲ್ಲಿ ಉಚಿತ ವೀಸಾ ಪ್ರಸ್ತಾಪವನ್ನು ಪ್ರಸ್ತಾಪಿಸಿತ್ತು. ಉಚಿತ ವೀಸಾಗಳನ್ನು ನೀಡುವುದರಿಂದ ಮುಂಬರುವ ವರ್ಷಗಳಲ್ಲಿ ಪ್ರವಾಸಿಗರ ಆಗಮನವನ್ನು ಐದು ಮಿಲಿಯನ್‌ಗೆ ಹೆಚ್ಚಿಸುವ ನಿರೀಕ್ಷೆಯಿದೆ.
ಮತ್ತಷ್ಟು ಓದಿ: ಬ್ರಿಟನ್ನ ವಿವಿಧ ವೀಸಾ ದರಗಳಲ್ಲಿ ಹೆಚ್ಚಳ; ಇಂಗ್ಲೆಂಡ್ ಪ್ರಯಾಣ ಇನ್ನು ದುಬಾರಿ
ಭಾರತವು ಶ್ರೀಲಂಕಾಕ್ಕೆ ಅತಿದೊಡ್ಡ ಮೂಲ ಮಾರುಕಟ್ಟೆಯಾಗಿದೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ಮಾರುಕಟ್ಟೆ ಮತ್ತು ಸಂವಹನ ಕಾರ್ಯತಂತ್ರದ ಪ್ರಮುಖ ಕೇಂದ್ರವಾಗಿದೆ.
ಚೀನಾ ಪ್ರವಾಸಿಗರು ಭೇಟಿ ನೀಡಲು ಚೀನಾ ಅನುಮೋದಿಸಿದ 20 ದೇಶಗಳಲ್ಲಿ ಶ್ರೀಲಂಕಾ ಕೂಡ ಒಂದಾಗಿರುವುದರಿಂದ ಶ್ರೀಲಂಕಾಕ್ಕೆ ಚೀನಾ ಪ್ರವಾಸಿಗರ ಆಗಮನವೂ ಹೆಚ್ಚಲಿದೆ ಎನ್ನಲಾಗಿದೆ. ಶ್ರೀಲಂಕಾ ಸರ್ಕಾರವು ದೇಶದ ಹೆಚ್ಚಿನ ಪ್ರವಾಸಿ ತಾಣಗಳಿಗೆ ಇ-ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ