ಮುದ್ರಣ ಕಾಗದದ ಕೊರತೆ: ಲಕ್ಷಾಂತರ ಶಾಲಾ ವಿದ್ಯಾರ್ಥಿಗಳ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ

| Updated By: ರಶ್ಮಿ ಕಲ್ಲಕಟ್ಟ

Updated on: Mar 19, 2022 | 3:43 PM

"ಅಗತ್ಯವಾದ ಕಾಗದ ಮತ್ತು ಶಾಯಿಯನ್ನು ಆಮದು ಮಾಡಿಕೊಳ್ಳಲು ಪ್ರಿಂಟರ್‌ಗಳಿಗೆ ವಿದೇಶಿ ವಿನಿಮಯವನ್ನು ಪಡೆಯಲು ಸಾಧ್ಯವಾಗದ ಕಾರಣ ಶಾಲಾ ಮುಖ್ಯಸ್ಥರು ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ" ಎಂದು ಪಶ್ಚಿಮ ಪ್ರಾಂತ್ಯದ ಶಿಕ್ಷಣ ಇಲಾಖೆ ತಿಳಿಸಿದೆ.

ಮುದ್ರಣ ಕಾಗದದ ಕೊರತೆ: ಲಕ್ಷಾಂತರ ಶಾಲಾ ವಿದ್ಯಾರ್ಥಿಗಳ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ
ಪ್ರಾತಿನಿಧಿಕ ಚಿತ್ರ
Follow us on

ಕೊಲಂಬೊ: ಶ್ರೀಲಂಕಾದಲ್ಲಿ(Sri Lanka) ಮುದ್ರಣ ಕಾಗದದ ಕೊರತೆಯಿಂದಾಗಿ ಅಲ್ಲಿನ ಸರ್ಕಾರ ಲಕ್ಷಾಂತರ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  1948 ರ ಸ್ವಾತಂತ್ರ್ಯದ ನಂತರ ಶ್ರೀಲಂಕಾ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು (financial crisis) ಎದುರಿಸುತ್ತಿರುವ ಕಾರಣ ಸೋಮವಾರದಿಂದ ಒಂದು ವಾರದ ಅವಧಿಯ ಪರೀಕ್ಷೆಗಳನ್ನು ತೀವ್ರ ಕಾಗದದ ಕೊರತೆಯಿಂದಾಗಿ ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ. “ಅಗತ್ಯವಾದ ಕಾಗದ ಮತ್ತು ಶಾಯಿಯನ್ನು ಆಮದು ಮಾಡಿಕೊಳ್ಳಲು ಪ್ರಿಂಟರ್‌ಗಳಿಗೆ ವಿದೇಶಿ ವಿನಿಮಯವನ್ನು ಪಡೆಯಲು ಸಾಧ್ಯವಾಗದ ಕಾರಣ ಶಾಲಾ ಮುಖ್ಯಸ್ಥರು ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ” ಎಂದು ಪಶ್ಚಿಮ ಪ್ರಾಂತ್ಯದ ಶಿಕ್ಷಣ ಇಲಾಖೆ ತಿಳಿಸಿದೆ. ಈ ಕ್ರಮವು ದೇಶದ 45 ಲಕ್ಷ ವಿದ್ಯಾರ್ಥಿಗಳಲ್ಲಿ ಮೂರನೇ ಎರಡರಷ್ಟು ಪರೀಕ್ಷೆಗಳನ್ನು ರದ್ದು ಮಾಡುವಂತಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವರ್ಷಾಂತ್ಯದಲ್ಲಿ ವಿದ್ಯಾರ್ಥಿಗಳು ಮುಂದಿನ ದರ್ಜೆಗೆ ಬಡ್ತಿ ಪಡೆಯುತ್ತಾರೆಯೇ ಎಂಬುದನ್ನು ನಿರ್ಧರಿಸಲು ಅವಧಿಯ ಪರೀಕ್ಷೆಗಳು ನಿರಂತರ ಮೌಲ್ಯಮಾಪನ ಪ್ರಕ್ರಿಯೆಯ ಭಾಗವಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಆಹಾರ, ಇಂಧನ ಮತ್ತು ಔಷಧಿ ಕೊರತೆಯೂ ತಲೆದೋರಿದೆ.  22 ದಶಲಕ್ಷದಷ್ಟು ಹಣದ ಕೊರತೆಯಿರುವ ದಕ್ಷಿಣ ಏಷ್ಯಾದ ರಾಷ್ಟ್ರವು ಈ ವಾರ ತನ್ನ ಹದಗೆಡುತ್ತಿರುವ ವಿದೇಶಿ ಸಾಲದ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಬಾಹ್ಯ ಮೀಸಲುಗಳನ್ನು ಹೆಚ್ಚಿಸಲು ಐಎಂಎಫ್ ಬೇಲ್‌ಔಟ್‌ಗೆ ಪ್ರಯತ್ನಿಸುವುದಾಗಿ ಘೋಷಿಸಿತು.

ಬೇಲ್ಔಟ್ ಕುರಿತು ಚರ್ಚಿಸಲು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಬುಧವಾರದ ಮನವಿಯನ್ನು ಪರಿಗಣಿಸುವುದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಶುಕ್ರವಾರ ದೃಢಪಡಿಸಿದೆ.  ಕೊಲಂಬೊದ ಸುಮಾರು $6.9 ಶತಕೋಟಿ ಸಾಲವನ್ನು ಈ ವರ್ಷ ಪೂರೈಸಬೇಕಾಗಿದೆ. ಆದರೆ ಅದರ ವಿದೇಶಿ ಕರೆನ್ಸಿ ಮೀಸಲು ಫೆಬ್ರವರಿ ಅಂತ್ಯದಲ್ಲಿ ಸುಮಾರು $2.3 ಶತಕೋಟಿ ಇತ್ತು.

ದೇಶಾದ್ಯಂತ ದಿನಸಿ ಮತ್ತು ತೈಲಕ್ಕಾಗಿ ಉದ್ದನೆಯ ಸರತಿ ಸಾಲುಗಳನ್ನು ಕಾಣಬಹುದಾಗಿದೆ. ಸರ್ಕಾರವು ಸರದಿ ಪ್ರಕಾರ ವಿದ್ಯುತ್ ಕಡಿತ ಮಾಡುತ್ತಿದ್ದು, ಹಾಲಿನ ಪುಡಿ, ಸಕ್ಕರೆ, ಉದ್ದು ಮತ್ತು ಅಕ್ಕಿಗಾಗಿ ಪಡಿತರ ವ್ಯವಸ್ಥೆ ಸ್ಥಾಪಿಸಿದೆ. ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ತನ್ನ ಪ್ರಮುಖ ಸಾಲದಾತರಲ್ಲಿ ಒಬ್ಬರಾದ ಚೀನಾವನ್ನು ಸಾಲ ಪಾವತಿಗಳನ್ನು ಮುಂದೂಡಲು ಸಹಾಯ ಮಾಡುವಂತೆ ಕೇಳಿದೆ. ಆದರೆ ಬೀಜಿಂಗ್‌ನಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ ಎಂದು ಎಎಫ್​​ಪಿ ವರದಿ ಮಾಡಿದೆ.

ಇದನ್ನೂ ಓದಿ:

ಇಂದಿನಿಂದ 2 ದಿನಗಳ ಕಾಲ ಭಾರತ-ಜಪಾನ್ 14ನೇ ವಾರ್ಷಿಕ ಶೃಂಗಸಭೆ; ಜಪಾನ್ ಪ್ರಧಾನಿಯಿಂದ 5 ಟ್ರಿಲಿಯನ್ ಯೆನ್​​ ಹೂಡಿಕೆ ನಿರೀಕ್ಷೆ

Published On - 3:43 pm, Sat, 19 March 22