Sri Lanka Crisis: ಶ್ರೀಲಂಕಾ ಅಧ್ಯಕ್ಷರ ಮನೆಗೆ ಪ್ರತಿಭಟನಾಕಾರರ ಮುತ್ತಿಗೆ; ಅಧಿಕೃತ ನಿವಾಸದಿಂದ ಗೋತಬಯ ರಾಜಪಕ್ಸ ಪರಾರಿ

| Updated By: ಸುಷ್ಮಾ ಚಕ್ರೆ

Updated on: Jul 09, 2022 | 1:43 PM

ಶ್ರೀಲಂಕಾದ ಅಧ್ಯಕ್ಷ ಗೋಟಾಬಯ ರಾಜಪಕ್ಸ ಇಂದು (ಶನಿವಾರ) ಶ್ರೀಲಂಕಾದ ರಾಜಧಾನಿಯಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ

Sri Lanka Crisis: ಶ್ರೀಲಂಕಾ ಅಧ್ಯಕ್ಷರ ಮನೆಗೆ ಪ್ರತಿಭಟನಾಕಾರರ ಮುತ್ತಿಗೆ; ಅಧಿಕೃತ ನಿವಾಸದಿಂದ ಗೋತಬಯ ರಾಜಪಕ್ಸ ಪರಾರಿ
ಗೋತಬಯ ರಾಜಪಕ್ಸ
Follow us on

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದರ ನಡುವೆ ಪ್ರತಿಭಟನಾಕಾರರು ಮನೆಯನ್ನು ಸುತ್ತುವರೆದ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ (Gotabaya Rajapaksa) ಪರಾರಿಯಾಗಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸ ಇಂದು (ಶನಿವಾರ) ಶ್ರೀಲಂಕಾದ ರಾಜಧಾನಿಯಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪರಾರಿ ಆಗಿದ್ದಾರೆ ಎಂದು ಉನ್ನತ ರಕ್ಷಣಾ ಮೂಲ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ AFP ವರದಿ ಮಾಡಿದೆ.

ಶ್ರೀಲಂಕಾದ ದೂರದರ್ಶನದ ವಿಡಿಯೋಗಳಲ್ಲಿ ಗೋತಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಅವರ ನಿವಾಸದ ಕಾಂಪೌಂಡ್‌ನೊಳಗೆ ನುಗ್ಗುವುದನ್ನು ನೋಡಬಹುದು. ಆದರೆ, ಸರ್ಕಾರಿ ನಿವಾಸದಿಂದ ರಾಜಪಕ್ಸ ಅವರನ್ನು ಸುರಕ್ಷತೆಯ ದೃಷ್ಟಿಯಿಂದ ಬೇರೆ ಕಡೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೋಪಗೊಂಡ ಪ್ರತಿಭಟನಾಕಾರರು ಅಧ್ಯಕ್ಷರ ಭವನವನ್ನು ಅತಿಕ್ರಮಿಸದಂತೆ ತಡೆಯಲು ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ: Sri Lanka Crisis: ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಭಾರತಕ್ಕೆ ಧನ್ಯವಾದ ತಿಳಿಸಿದ ಶ್ರೀಲಂಕಾ ಪ್ರಧಾನಿ

ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ಪದಚ್ಯುತಿಗೆ ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಹೀಗಾಗಿ, ಶ್ರೀಲಂಕಾದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂದು ಮಧ್ಯಾಹ್ನ 3.30ರಿಂದ ನಿಷೇಧಾಜ್ಞೆ ಜಾರಿಯಾಗಿದ್ದು, ಜನರು ಮನೆಯೊಳಗೇ ಇರಲು ಆದೇಶಿಸಲಾಗಿದೆ.

 

ಸಾವಿರಾರು ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ದಾಟಿ ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಪೊಲೀಸರು ಆ ಪ್ರದೇಶದಿಂದ ಹಿಂದೆ ಸರಿಯುತ್ತಿರುವುದು ಕಂಡುಬಂದಿದೆ. ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ಶಬ್ದಗಳು ಕೇಳಿಬಂದಿವೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ನಿರಂತರವಾಗಿ ಅಶ್ರುವಾಯುವನ್ನು ಹಾರಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Sri Lanka Crisis: ಶ್ರೀಲಂಕಾದಲ್ಲಿ ಪೆಟ್ರೋಲ್​ಗಾಗಿ 5 ದಿನ ಸಾಲಲ್ಲಿ ಕಾಯುತ್ತಾ ನಿಂತ ವ್ಯಕ್ತಿ ಸಾವು!

ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ನಿವಾಸಕ್ಕೆ ಶನಿವಾರ ಪ್ರತಿಭಟನಾಕಾರರು ನುಗ್ಗಿದ ನಂತರ ಪರಾರಿಯಾಗಿದ್ದಾರೆ. ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಭಟನಾಕಾರರು ಅವರ ನಿವಾಸವನ್ನು ಸುತ್ತುವರೆದಿದ್ದಾರೆ. ನಂತರ ಗೋತಬಯ ರಾಜಪಕ್ಸ ತಮ್ಮ ನಿವಾಸದಿಂದ ಪರಾರಿಯಾಗಿದ್ದಾರೆ. ಶ್ರೀಲಂಕಾದ ಧ್ವಜಗಳನ್ನು ಹೊತ್ತ ಸಾವಿರಾರು ಪ್ರತಿಭಟನಾಕಾರರು ತೀವ್ರವಾದ ಇಂಧನ ಕೊರತೆಯನ್ನು ವಿರೋಧಿಸಿ ರಸ್ತೆಗಳಲ್ಲಿ ಗಲಾಟೆಯೆಬ್ಬಿಸಿದ್ದಾರೆ. ಸೈಕಲ್​ಗಳ ಮೇಲೆ ಅನೇಕ ಜನರು ರಾಜಧಾನಿ ಕೊಲಂಬೊದಲ್ಲಿನ ಪ್ರತಿಭಟನಾ ಸ್ಥಳಗಳಿಗೆ ತೆರಳಿದ್ದಾರೆ.

ಶ್ರೀಲಂಕಾ ಪೊಲೀಸರು ರಾತ್ರಿಯ ಕರ್ಫ್ಯೂ ಅನ್ನು ತೆಗೆದುಹಾಕಿದ ಬೆನ್ನಲ್ಲೇ ಈ ಪ್ರತಿಭಟನೆ ಕಾವೇರಿದೆ. ಪ್ರತಿಭಟನಕಾರರು ಆರ್ಥಿಕ ಸಂಕಷ್ಟಗಳಿಗೆ ರಾಜಪಕ್ಸ ಅವರನ್ನು ದೂಷಿಸಿದ್ದಾರೆ. ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕಳೆದ ತಿಂಗಳು ದೇಶದ ಆರ್ಥಿಕತೆ ಕುಸಿದಿದೆ ಎಂದು ಹೇಳಿದ್ದರು.

Published On - 1:22 pm, Sat, 9 July 22