ಕೆನಡಾ: ಹೊತ್ತಿ ಉರಿಯುತ್ತಿದ್ದ ಕಾರಲ್ಲಿ ಪ್ರಜ್ಞಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಐವರು ಆಪತ್ಬಾಂಧವರ ಸಮಯಪ್ರಜ್ಞೆ ಮತ್ತು ಸಾಹಸ ಪ್ರಾಣವುಳಿಸಿತು!
ಅಪಾಯವನ್ನರಿತ ಆ ಐವರು ತಮ್ಮ ಪ್ರಯತ್ನವನ್ನು ತೀವ್ರಗೊಳಿಸುತ್ತಾರೆ. ತಮ್ಮ ಕಾಲು ಮತ್ತು ಮೊಣಕೈಗಳಿಂದ ಗುದ್ದಿ ಡೋರ್ ಮುರಿಯಲು ಯತ್ನಿಸುತ್ತಾರೆ. ಕೊನೆಗೆ ಅವರು ಸುತ್ತಿಗೆಯೊಂದರಿಂದ ಚಾಲಕನ ಭಾಗದ ಗಾಜನ್ನು ಒಡೆದು ಚಾಲಕನನ್ನು ಹೊರಗೆಳೆಯುತ್ತಾರೆ.
ಒಂಟಾರಿಯೋ (ಕೆನಡಾ): ಹೊತ್ತಿ ಉರಿಯುತ್ತಿದ್ದ ಕಾರೊಂದರಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ಐದು ವ್ಯಕ್ತಿಗಳು ಹೊರಗೆಳೆದು ಅವನ ಪ್ರಾಣವುಳಿಸಿದ ಘಟನೆ ಕೆನಡಾದ ಒಂಟಾರಿಯೋನಲ್ಲಿ (Ontario) ನಡೆದಿದೆ. ಟೊರೊಂಟೊ ಮೂಲದ 36-ವರ್ಷ ವಯಸ್ಸಿನ ಚಾಲಕ ಸೋಮವಾರ ಬೆಳಗ್ಗೆ ಹೆದ್ದಾರಿಯಲ್ಲಿ ವಾಹನ ಓಡಿಸುವಾಗ ಮೆಡಿಕಲ್ ಎಪಿಸೋಡ್ (ಒಂದು ಬಗೆಯ ವ್ಯಾಧಿ) (medical episode) ಒಳಗಾಗಿದ್ದನೆಂದು ಒಂಟಾರಿಯೋ ಪ್ರಾವಿನ್ಸಿಯಲ್ ಪೊಲೀಸರು (Ontario Provincial Police) (ಒಪಿಪಿ) ಹೇಳಿದ್ದಾರೆ. ಅವನನ್ನು ರಕ್ಷಿಸುವ ಸಾಹಸಮಯ ದೃಶ್ಯವನ್ನು ಒಪಿಪಿ ಸೋಷಿಯಲ್ ಮೀಡಿಯಾ ಚ್ಯಾನೆಲ್ಗಳಲ್ಲಿ ಪೋಸ್ಟ್ ಮಾಡಿದೆ.
ವಿಡಿಯೋ ಅರಂಭಗೊಂಡಾಗ ಹೆದ್ದಾರಿಯಲ್ಲಿ ಚಲಿಸುತ್ತಿರುವ ಒಂದು ಬಿಳಿ ಬಣ್ಣದ ಸೆಡಾನ್ ಕಾರಿನ ಮುಂಭಾಗದಿಂದ ಹೊಗೆ ಆಚೆ ಬರುತ್ತಿರುವುದು ಕಾಣುತ್ತದೆ. ಕೆಲವು ಸೆಕೆಂಡುಗಳ ಬಳಿಕ ಕಾರು ಯಾವುದೋ ವಸ್ತುವಿಗೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿರುವುದು ಕಾಣಿಸುತ್ತದೆ.
A 36 year old man from Toronto who experienced a medical episode is alive because of the heroic efforts of five men who risked their lives as the vehicle began to burn with the driver still inside. They got the drivers door open to save the driver. You are my #HERO. July 4, '22 pic.twitter.com/bwE43tMhn1
— OPP Highway Safety Division (@OPP_HSD) July 7, 2022
ಕ್ಲಿಪ್ ನ ಮುಂದಿನ ಭಾಗದಲ್ಲಿ ಚಾಲಕನಿಗೆ ಪರಿಚಯವೇ ಇರದ ಐವರು ಅನಾಹುತಕಾರಿ ಘಟನೆ ಸಂಭವಿಸುವ ಮೊದಲು ಅವನನ್ನು ಕಾರಿನಿಂದ ಹೊರಗೆಳೆಯಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿರುವುದು ಕಾಣುತ್ತದೆ. ಏತನ್ಮಧ್ಯೆ, ಕಾರೊಳಗಿಂದ ಬೆಂಕಿ ಜ್ವಾಲೆ ಹೊರ ಚಾಚುವುದು ಸಹ ಕಾಣುತ್ತದೆ.
ಅಪಾಯವನ್ನರಿತ ಆ ಐವರು ತಮ್ಮ ಪ್ರಯತ್ನವನ್ನು ತೀವ್ರಗೊಳಿಸುತ್ತಾರೆ. ತಮ್ಮ ಕಾಲು ಮತ್ತು ಮೊಣಕೈಗಳಿಂದ ಗುದ್ದಿ ಡೋರ್ ಮುರಿಯಲು ಯತ್ನಿಸುತ್ತಾರೆ. ಕೊನೆಗೆ ಅವರು ಸುತ್ತಿಗೆಯೊಂದರಿಂದ ಚಾಲಕನ ಭಾಗದ ಗಾಜನ್ನು ಒಡೆದು ಚಾಲಕನನ್ನು ಹೊರಗೆಳೆಯುತ್ತಾರೆ. ಕಸದ ಲಾರಿಯನ್ನು ಓಡಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನಿಂದ ಅವರಿಗೆ ಸುತ್ತಿಗೆ ಸಿಗುತ್ತದೆ.
ಕಾರಲ್ಲಿ ಪ್ರಜ್ಞೆ ಕಳೆದುಕೊಂಡಿರುವ ಚಾಲಕನಿಗೆ ‘ಅವರು ಹೊರಗೆ ಬರುವ ಪ್ರಯತ್ನ ಮಾಡು ಮಾರಾಯಾ,’ ಅಂತ ಜೋರಾಗಿ ಹೇಳುವುದು ವಿಡಿಯೋನಲ್ಲಿ ಕೇಳಿಸುತ್ತದೆ. ಅವನಿಗೆ ಪ್ರಜ್ಞೆ ಮರಳುವಂತಾಗುವ ಎಲ್ಲ ಪ್ರಯತ್ನಗಳನ್ನು ಅವರು ಮಾಡುತ್ತಾರೆ. ಬೆಂಕಿ ಇಡೀ ಕಾರನ್ನು ಅವರಿಸಿಕೊಂಡಾಗ ದಾರಿಹೋಕನೊಬ್ಬ, ‘ದೂರ ಸರೀರಯ್ಯ, ಕಾರು ಸ್ಫೋಟಗೊಳ್ಳಲಿದೆ’ ಅಂತ ಅರಚುವುದು ಸಹ ಕೇಳಿಸುತ್ತದೆ. ಆ ಐವರು ರಕ್ಷಕರಲ್ಲಿ ಒಬ್ಬನ ಹೆಂಡತಿಯು ಭಯ ಮತ್ತು ಆತಂಕದಿಂದ ಚೀರುತ್ತಾ ಅಳುತ್ತಿದ್ದಾಳೆ.
ಅದರೆ, ಅಂತಿಮವಾಗಿ ಐವರು ರಕ್ಷಕರು ಕಾರು ಸ್ಫೋಟಗೊಳ್ಳುವ ಕೆಲವೇ ಕ್ಷಣಗ ಮೊದಲು ಚಾಲಕನನ್ನು ಹೊರಗೆಳೆಯುವಲ್ಲಿ ಯಶ ಕಾಣುತ್ತಾರೆ. ಅವನನ್ನು ಉಳಿಸಿದ ಐವರಲ್ಲಿ ಒಬ್ಬರ ಹೆಸರು ಬೆನ್ ಸೈಕ್ಸ್ ಆಗಿದ್ದು ತಮ್ಮ ಪತ್ನಿ ಮಿಸ್ಸಿಸ್ಸುಗಾ ಜೊತೆ ಕಾರಲ್ಲಿ ಕಚೇರಿಗೆ ಹೊರಟಿದ್ದರು ಎಂದು ಸಿಬಿಸಿ ನ್ಯೂಸ್ ವರದಿ ಮಾಡಿದೆ.
‘ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಅನ್ನೋದು ನಮಗೆ ಗೊತ್ತಿತ್ತು. ಅವನನ್ನು ಹೊರಗೆಳೆಯುವ ಪ್ರಯತ್ನದಲ್ಲಿದ್ದ ನಮಗೆ ಈ ಅಂಶ ಆತಂಕಕ್ಕೀಡು ಮಾಡುತಿತ್ತು. ಅವನನ್ನು ಹೊರಗೆಳೆಯಲು ನಮ್ಮಲ್ಲಿ ಸಮಯವೇ ಇರಲಿಲ್ಲ. ಯಾಕೆಂದರೆ ಕಾರು ಒಂದೆರಡು ಕ್ಷಣಗಳಲ್ಲಿ ಸ್ಫೋಟಗೊಳ್ಳುವುದರಲ್ಲಿತ್ತು,’ ಎಂದು ಲೌರ್ ಹೆಸರಿನ ಮತ್ತೊಬ್ಬ ರಕ್ಷಕ ಪತ್ರಿಕೆಗೆ ತಿಳಿಸಿದ್ದಾರೆ.
‘ಕೇವಲ 30 ಸೆಕೆಂಡುಗಳ ಅವಧಿಯಲ್ಲಿ ಇದೆಲ್ಲ ನಡೆದುಹೋಯಿತು. ಅವನನ್ನು ಹೊರಗೆಳೆದ ಕೂಡಲೇ ಕಾರು ಸ್ಫೋಟಗೊಂಡಿತು,’ ಎಂದು ಲೌರಾ ಹೇಳಿದ್ದಾರೆ.
ಈ ಐವರು ಪ್ರದರ್ಶಿಸಿದ ಧೈರ್ಯ ಸಾಹಸಗಳಿಗೆ ಧನ್ಯವಾದಗಳನ್ನು ಹೇಳಿರುವ ಪೊಲೀಸ್ ಅವರನ್ನು ‘ಹೀರೋಗಳೆಂದು’ ಉಲ್ಲೇಖಿಸಿದೆ.
ಇದನ್ನೂ ಓದಿ: Eknath Shinde: ಪ್ರಜ್ಞೆ ತಪ್ಪಿದ ಮಹಿಳಾ ಕಾನ್ಸ್ಟೆಬಲ್ಗೆ ಸಹಾಯ ಮಾಡಿದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ; ವಿಡಿಯೋ ವೈರಲ್