ಶ್ರೀಲಂಕಾ (Sri Lanka) ಪ್ರಧಾನಿ ರನಿಲ್ ವಿಕ್ರಮಸಿಂಘೆ (Ranil Wickremesinghe) ಸೋಮವಾರ ದ್ವೀಪ ರಾಷ್ಟ್ರದ ಆರ್ಥಿಕತೆಯು ಅನಿಶ್ಚಿತ ಸ್ಥಿತಿಯಲ್ಲಿದೆ. ನಗದು ಕೊರತೆ ಅನುಭವಿಸುತ್ತಿರುವ ರಾಷ್ಟ್ರದಲ್ಲಿ ಪೆಟ್ರೋಲ್ (petrol) ಖಾಲಿಯಾಗಿದೆ ಎಂದು ಹೇಳಿದ್ದಾರೆ. “ನಮ್ಮಲ್ಲಿ ಪೆಟ್ರೋಲ್ ಖಾಲಿಯಾಗಿದೆ.ಸದ್ಯಕ್ಕೆ ನಮ್ಮಲ್ಲಿ ಒಂದೇ ದಿನಕ್ಕೆ ಪೆಟ್ರೋಲ್ ಸ್ಟಾಕ್‌ಗಳಿವೆ” ಎಂದು ವಿಕ್ರಮಸಿಂಘೆ ಹೇಳಿದ್ದಾರೆ. ಅದೇ ವೇಳೆ ಮುಂಬರುವ ತಿಂಗಳುಗಳಲ್ಲಿ ಈಗಾಗಲೇ ದಿವಾಳಿಯಾಗಿರುವ ದೇಶವು ಹೆಚ್ಚಿನ ಸಂಕಷ್ಟಗಳನ್ನು ಎದುರಿಸಬಹುದು ಎಂದು ಅವರು ಹೇಳಿದರು. ಆರ್ಥಿಕ ಪರಿಸ್ಥಿತಿಯ ಬಗ್ಗೆ ನಿರಂತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ನಂತರ ಕಳೆದ ವಾರ ಪ್ರಧಾನಿಯಾದ ವಿಕ್ರಮಸಿಂಘೆ, ನಡೆಯುತ್ತಿರುವ ಬಿಕ್ಕಟ್ಟಿಗೆ ಪರಿಹಾರಗಳನ್ನು ಕಂಡುಹಿಡಿಯಲು ಎಲ್ಲಾ ರಾಜಕೀಯ ಪಕ್ಷಗಳ ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸಲು ಪ್ರಸ್ತಾಪಿಸಿದರು. ಶ್ರೀಲಂಕಾ ವಿಮಾನಯಾನ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದ್ದಾರೆ. “ಪ್ರಸ್ತುತ ಶ್ರೀಲಂಕಾದ ಆರ್ಥಿಕತೆಯು ಅತ್ಯಂತ ಅನಿಶ್ಚಿತವಾಗಿದೆ. ಹಿಂದಿನ ಸರ್ಕಾರದ ಬಜೆಟ್ ಎಸ್‌ಎಲ್‌ಆರ್ 2.3 ಟ್ರಿಲಿಯನ್ ಆದಾಯವನ್ನು ನಿರೀಕ್ಷಿಸಿದ್ದರೂ, ಎಸ್‌ಎಲ್‌ಆರ್ 1.6 ಟ್ರಿಲಿಯನ್ ಈ ವರ್ಷದ ಆದಾಯದ ವಾಸ್ತವಿಕ ಮುನ್ನೂಹೆಯಾಗಿದೆ ಎಂದು ಕೊಲಂಬೊದಲ್ಲಿ ಮಾತನಾಡಿದ ಪ್ರಧಾನಿ ಹೇಳಿದ್ದಾರೆ.
ಈಬಗ್ಗೆ ಸರಣಿ ಟ್ವೀಟ್ ಮಾಡಿರುವ ವಿಕ್ರಮ ಸಿಂಘೆ, ಮುಂದಿನ ಒಂದೆರಡು ತಿಂಗಳುಗಳು ನಮ್ಮ ಜೀವನದಲ್ಲಿ ಅತ್ಯಂತ ಕಷ್ಟಕರವಾಗಿರುತ್ತದೆ. ಸತ್ಯವನ್ನು ಮರೆಮಾಚುವ ಮತ್ತು ಸಾರ್ವಜನಿಕರಿಗೆ ಸುಳ್ಳು ಹೇಳುವ ಬಯಕೆ ನನಗಿಲ್ಲ. ಈ ಸಂಗತಿಗಳು ಅಹಿತಕರ ಮತ್ತು ಭಯಾನಕವಾಗಿದ್ದರೂ, ಇದು ನಿಜವಾದ ಪರಿಸ್ಥಿತಿ ಎಂದಿದ್ದಾರೆ.
1. The next couple of months will be the most difficult ones of our lives. I have no desire to hide the truth and to lie to the public. Although these facts are unpleasant and terrifying, this is the true situation. #SriLankaEconomicCrisis
— Ranil Wickremesinghe (@RW_UNP) May 16, 2022
14 ಅಗತ್ಯ ಔಷಧಿಗಳ ಕೊರತೆಯಿದೆ ಮತ್ತು ಅಲ್ಪಾವಧಿಯಲ್ಲಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ ಪ್ರಧಾನಿ, “ನಾವು ಸಂಬಳವನ್ನು ಪಾವತಿಸಲು ಮತ್ತು ಅಗತ್ಯಗಳಿಗೆ ಹಣದ ಮುದ್ರಣವನ್ನು ಮುಂದುವರಿಸಬೇಕಾಗಿದೆ. ಭಾರತೀಯ ಕ್ರೆಡಿಟ್ ಲೈನ್ ಅನ್ನು ಬಳಸಿಕೊಂಡು ಇನ್ನೂ ಎರಡು ಪೆಟ್ರೋಲ್ ಮತ್ತು ಡೀಸೆಲ್ ಸಾಗಣೆಗಳು ಬಾಕಿಯಿದೆ ಎಂದು ಅವರು ಹೇಳಿದರು.
12. I will fulfill my duty towards our nation. That is my promise to you.
Full Speech here: https://t.co/lUOQsdyuCS
— Ranil Wickremesinghe (@RW_UNP) May 16, 2022
“ನವೆಂಬರ್ 2019 ರಲ್ಲಿ, ನಮ್ಮ ವಿದೇಶಿ ವಿನಿಮಯ ಮೀಸಲು $7.5 ಬಿಲಿಯನ್ ಆಗಿತ್ತು. ಆದಾಗ್ಯೂ, ಇಂದು, $ 1 ಮಿಲಿಯನ್ ಮಾಡುವುದು ಖಜಾನೆಗೆ ಸವಾಲಾಗಿದೆ. ಅನಿಲವನ್ನು ಆಮದು ಮಾಡಿಕೊಳ್ಳಲು ಅಗತ್ಯವಿರುವ $5 ಮಿಲಿಯನ್ ಅನ್ನು ಸಂಗ್ರಹಿಸಲು ಹಣಕಾಸು ಸಚಿವಾಲಯಕ್ಕೆ ಕಷ್ಟಕರವಾಗಿದೆ ಎಂದು ಅವರು ಹೇಳಿದರು.
Published On - 9:15 pm, Mon, 16 May 22