Stabbings In Canada ಕೆನಡಾದಲ್ಲಿ ಚೂರಿ ಇರಿತ; 10 ಮಂದಿ ಸಾವು, ಆರೋಪಿಗಳಿಗಾಗಿ ಪೊಲೀಸ್ ಶೋಧ

| Updated By: ರಶ್ಮಿ ಕಲ್ಲಕಟ್ಟ

Updated on: Sep 05, 2022 | 1:53 PM

ತುರ್ತು ಕರೆಗಳಿಗೆ ಪ್ರತಿಕ್ರಿಯಿಸಿದ ಪೊಲೀಸರು ದೂರದ ಸ್ಥಳೀಯ ಸಮುದಾಯದ ಜೇಮ್ಸ್ ಸ್ಮಿತ್ ಕ್ರೀ ನೇಷನ್ ಮತ್ತು ಹತ್ತಿರದ ಪಟ್ಟಣವಾದ ಸಾಸ್ಕಾಚೆವಾನ್‌ನ ವೆಲ್ಡನ್‌ನಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಸಹಾಯಕ ಕಮಿಷನರ್ ರೊಂಡಾ ಬ್ಲಾಕ್‌ಮೋರ್...

Stabbings In Canada ಕೆನಡಾದಲ್ಲಿ ಚೂರಿ ಇರಿತ; 10 ಮಂದಿ ಸಾವು, ಆರೋಪಿಗಳಿಗಾಗಿ ಪೊಲೀಸ್ ಶೋಧ
Follow us on

ಒಟ್ಟಾವಾ: ಕೆನಡಾದ (Canada) ಸಾಸ್ಕಾಚೆವಾನ್ (Saskatchewan) ಪ್ರಾಂತ್ಯದ ಸ್ಥಳೀಯ ಸಮುದಾಯ ಮತ್ತು ಸಮೀಪದ ಪಟ್ಟಣದಲ್ಲಿ ಭಾನುವಾರ ನಡೆದ ಚೂರಿ ಇರಿತದಲ್ಲಿ 10 ಜನರು ಸಾವಿಗೀಡಾಗಿದ್ದು 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಶಂಕಿತರ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ತುರ್ತು ಕರೆಗಳಿಗೆ ಪ್ರತಿಕ್ರಿಯಿಸಿದ ಪೊಲೀಸರು ದೂರದ ಸ್ಥಳೀಯ ಸಮುದಾಯದ ಜೇಮ್ಸ್ ಸ್ಮಿತ್ ಕ್ರೀ ನೇಷನ್ ಮತ್ತು ಹತ್ತಿರದ ಪಟ್ಟಣವಾದ ಸಾಸ್ಕಾಚೆವಾನ್‌ನ ವೆಲ್ಡನ್‌ನಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಸಹಾಯಕ ಕಮಿಷನರ್ ರೊಂಡಾ ಬ್ಲಾಕ್‌ಮೋರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕನಿಷ್ಠ 15 ಜನರು ಗಾಯಗೊಂಡು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ. “ನಾವು ಇಬ್ಬರು ಶಂಕಿತರನ್ನು ಹುಡುಕುತ್ತಿದ್ದೇವೆ.  ಆಪಾದಿತ ದಾಳಿಕೋರರು ವಾಹನದಲ್ಲಿ ಓಡಿಹೋಗಿದ್ದಾರೆ. ಕಪ್ಪು ಕೂದಲು ಮತ್ತು ಕಂದು ಕಣ್ಣುಗಳುಳ್ಳ ಅವರನ್ನು 30 ಮತ್ತು 31 ವರ್ಷ ವಯಸ್ಸಿನ ಮೈಲ್ಸ್ ಮತ್ತು ಡೇಮಿಯನ್ ಸ್ಯಾಂಡರ್ಸನ್ ಎಂದು ಗುರುತಿಸಲಾಗಿದೆ.


2,500 ಜನಸಂಖ್ಯೆಯನ್ನು ಹೊಂದಿರುವ ಜೇಮ್ಸ್ ಸ್ಮಿತ್ ಕ್ರೀ ನೇಷನ್ ಸ್ಥಳೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತು, ಆದರೆ ಸಾಸ್ಕಾಚೆವಾನ್ ಪ್ರಾಂತ್ಯದ ಅನೇಕ ನಿವಾಸಿಗಳು ಸ್ಥಳದಲ್ಲಿ ಆಶ್ರಯ ಪಡೆಯುವಂತೆ ಒತ್ತಾಯಿಸಲಾಗಿದೆ.

ಪ್ರಧಾನಿ ಜಸ್ಟಿನ್ ಟ್ರುಡೊ ಈ ದಾಳಿಯನ್ನು “ಭಯಾನಕ ಮತ್ತು ಹೃದಯವಿದ್ರಾವಕ” ಎಂದು ಹೇಳಿದ್ದು ಮೃತರಿಗೆ  ಸಂತಾಪ ಸೂಚಿಸಿದ್ದು ,  ಅಧಿಕಾರಿಗಳ ಸೂಚನೆಗಳನ್ನು ಗಮನಿಸುವಂತೆ ನಿವಾಸಿಗಳನ್ನು ಒತ್ತಾಯಿಸಿದರು.

Published On - 1:26 pm, Mon, 5 September 22