AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heat or Eat: ಫ್ಯಾನ್ ಹಾಕೋಕೆ ಕರೆಂಟ್ ಇಲ್ಲ, ಅಡುಗೆ ಮಾಡೋಕೆ ಗ್ಯಾಸ್ ಇಲ್ಲ; ಯೂರೋಪ್​ನಲ್ಲಿ ಹಾಹಾಕಾರ

ಅಡುಗೆ ಅನಿಲ ಖರೀದಿಗೆ ಹಣವಿಲ್ಲದ ಬ್ರಿಟನ್​ ಜನರು ಹಸಿ ಆಹಾರದ ರೆಸಿಪಿ ಹುಡುಕುತ್ತಿದ್ದಾರೆ. ಸೆಖೆಗೆ ಬೆವರು ಸುರಿಯುತ್ತಿದ್ದರೂ ಫ್ಯಾನ್ ಹಾಕಲು ಅವರಿಗೆ ಕರೆಂಟ್​ ಬಿಲ್ ಭಯ.

Heat or Eat: ಫ್ಯಾನ್ ಹಾಕೋಕೆ ಕರೆಂಟ್ ಇಲ್ಲ, ಅಡುಗೆ ಮಾಡೋಕೆ ಗ್ಯಾಸ್ ಇಲ್ಲ; ಯೂರೋಪ್​ನಲ್ಲಿ ಹಾಹಾಕಾರ
ಬ್ರಿಟನ್​ನಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 06, 2022 | 6:17 AM

ಜರ್ಮನಿ, ಬ್ರಿಟನ್ ಸೇರಿದಂತೆ ಯೂರೋಪ್​ನ ಹಲವು ಶ್ರೀಮಂತ ದೇಶಗಳು ಹಣದುಬ್ಬರದಿಂದ (Inflation) ತತ್ತರಿಸಿದ್ದು ಸಾಮಾನ್ಯ ಜನರ ದೈನಂದಿನ ಬದುಕಿನ ರೀತಿನೀತಿಗಳೇ ಬದಲಾಗಿವೆ. ಈ ವರ್ಷ ಯೂರೋಪ್​ನಲ್ಲಿ ದಾಖಲೆ ಮಟ್ಟದ ಉಷ್ಣಾಂಶ ಏರಿಕೆಯಾಗಿದೆ (Heat Wave in Europe). ಆದರೆ ಹವಾನಿಯಂತ್ರಕಗಳು (ಎಸಿ) ಅಥವಾ ಫ್ಯಾನ್ ಬಳಸಲು ಜನರಿಗೆ ಸಾಧ್ಯವಾಗುತ್ತಿಲ್ಲ. ಬಟ್ಟೆಗಳಿಗೆ ಐರನ್ ಮಾಡಲು, ಧಾನ್ಯ-ತರಕಾರಿ ಬೇಯಿಸಿ ಅಡುಗೆ ಮಾಡಲೂ ಹಿಂಜರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಮತ್ತು ಅಡುಗೆ ಅನಿಲದ ಬೆಲೆ ವಿಪರೀತ ಹೆಚ್ಚಾಗಿದ್ದು, ದುಡಿಮೆಯ ಬಹುಪಾಲು ಇವೆರೆಡಕ್ಕೆ ವ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಅನಿವಾರ್ಯವಾಗಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ದೇಶಗಳಲ್ಲಿ ವಿದ್ಯುತ್ ಮತ್ತು ಅಡುಗೆ ಅನಿಲದ ಬಳಕೆ ಕಡಿಮೆಯಾಗಿದೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಯೂರೋಪ್​ನಲ್ಲಿ ಚಳಿಗಾಲ ಆರಂಭವಾಗಲಿದ್ದು, ರಷ್ಯಾ-ಉಕ್ರೇನ್ ಗಲಭೆ ಒಂದು ಹಂತಕ್ಕೆ ಬಂದು ಅನಿಲ ಸರಬರಾಜು ಮೊದಲ ಸ್ಥಿತಿಗೆ ಮರಳದಿದ್ದರೆ ಪರಿಸ್ಥಿತಿ ಮತ್ತಷ್ಟು ವಿಷಮಿಸಲಿದೆ. ಜರ್ಮನಿ ಮತ್ತು ನಾರ್ವೆ, ಬ್ರಿಟನ್​ ದೇಶಗಳಲ್ಲಿ ಸಾಮಾಜಿಕ ಅಸಂತುಷ್ಟಿ ಹೆಚ್ಚಾಗಿ ಜನರು ಬೀದಿಗಳಿದು ಪ್ರತಿಭಟಿಸುವ ಸಾಧ್ಯತೆಯಿದೆ. ಬ್ರಿಟನ್​ನ ರೈಲ್ವೆ ಇಲಾಖೆ, ಬಂದರು ನೌಕರರು ಹಾಗೂ ಜರ್ಮನಿಯ ಲುಫ್ತಾನ್ಸಾ ಏರ್​ಲೈನ್ಸ್​ ಸಿಬ್ಬಂದಿ ವೇತನ ಏರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಹಣದುಬ್ಬರ ಮತ್ತು ಬದಲಾದ ಜೀವನಶೈಲಿಯು ಜನರ ಆಕ್ರೋಶವಾಗಿ ಬದಲಾಗಿ, ಸಮಾಜದ ಹಲವು ವರ್ಗಗಳಲ್ಲಿ ಅಸಮಾಧಾನ ಹೆಚ್ಚಾಗಬಹುದು. ಡಿಸೆಂಬರ್ ಹೊತ್ತಿಗೆ ಪ್ರತಿಭಟನೆಗಳು ಈ ದೇಶಗಳಲ್ಲಿ ಸಾಮಾನ್ಯವಾಗಬಹುದು ಎಂದು ‘ಸಿವಿಲ್ ಅನ್​ರೆಸ್ಟ್ ಇಂಡೆಕ್ಸ್’ (ಸಾಮಾಜಿಕ ಅಶಾಂತಿ ಸೂಚ್ಯಂಕ) ಉಲ್ಲೇಖಿಸಿ ರಾಯಿಟರ್ಸ್​ ವರದಿ ಮಾಡಿದೆ.

ಯೂರೋಪ್ ದೇಶಗಳ ಲಕ್ಷಾಂತರ ಜನರು ಬೆಲೆಏರಿಕೆಯಿಂದ ಅಕ್ಷರಶಃ ತತ್ತರಿಸಿದ್ದು, ಸೆಖೆಯಿಂದ ಬೆವರುತ್ತಿದ್ದಾಗಲೂ, ಕರೆಂಟ್ ಇದ್ದರೂ ಫ್ಯಾನ್ ಸ್ವಿಚ್ ಹಾಕುತ್ತಿಲ್ಲ. ಇಂಗ್ಲೆಂಡ್​ನ ಗ್ರಿಮ್​ಸ್ಬಿ ಎನ್ನುವ ಪಟ್ಟಣದಲ್ಲಿರುವ ಫಿಲಿಪ್ ಕೀಟ್​ಲೆ ಇಂಥವರ ಪೈಕಿ ಒಬ್ಬರು. ‘ಈ ವರ್ಷದ ವಿಪರೀತ ಸೆಖೆ. ಹಾಗಂತೆ ಫ್ಯಾನ್ ಹಾಕೋಣ ಅಂದ್ರೆ ಭಯವಾಗುತ್ತೆ. ನನ್ನ ಬ್ಯಾಂಕ್ ಪಾಸ್​ಬುಕ್ ಒಮ್ಮೆ ನೋಡಿ. ಈ ಪಾಟಿ ಕರೆಂಟ್ ಬಿಲ್ ಕಟ್ಟುವಷ್ಟು ದುಡ್ಡು ನನ್ನ ಹತ್ರ ಇಲ್ಲ’ ಎನ್ನುತ್ತಾರೆ ಅವರು.

‘ನಿಮಗೆ ಇನ್ನೊಂದು ತಮಾಷೆ ಗೊತ್ತಾ’ ಎಂದು ಅವರು ರಾಯಿಟರ್ಸ್​ ವರದಿಗಾರರನ್ನು ಕೇಳಿದ್ದಾರೆ. ‘ನಾನು ಇತ್ತೀಚೆಗೆ ಬೇಯಿಸದೇ ತಿನ್ನುವಂಥ ಆಹಾರಗಳನ್ನು ಹೆಚ್ಚಾಗಿ ಬಳಸುತ್ತಿದ್ದೇನೆ. ನಮ್ಮ ಮನೆಗೆ ಅಡುಗೆ ಅನಿಲದ ಸಂಪರ್ಕವಿದೆ, ಸರಬರಾಜೂ ಆಗುತ್ತಿದೆ. ಆದರೆ ಅದನ್ನು ಬಳಸಿದ ನಂತರ ತುಂಬಬೇಕಾದ ಬಿಲ್ ನೆನಪಿಸಿಕೊಂಡರೆ ಭಯವಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.

ಶತಮಾನಗಳ ಕಾಲ ಹಲವು ದೇಶಗಳನ್ನು ಆಳಿದ್ದ, ಸೂರ್ಯಮುಳುಗದ ಸಾಮ್ರಾಜ್ಯ ಕಟ್ಟಿದ್ದ ಬ್ರಿಟನ್​ನ ಕಷ್ಟವೇ ಇಷ್ಟಿರುವಾಗ ಉಳಿದ ದೇಶಗಳ ಕಥೆ ಕೇಳಬೇಕೆ? ಕೊರೊನಾದಿಂದ ಆಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಆರ್ಥಿಕತೆಗೆ ರಷ್ಯಾ-ಉಕ್ರೇನ್ ಸಂಘರ್ಷ ಮತ್ತೊಂದು ಮಾರಕ ಹೊಡೆತ ನೀಡಿದ್ದು, ಚೇತರಿಸಿಕೊಳ್ಳುವುದು ಯಾವಾಗ ಎಂಬ ಪ್ರಶ್ನೆಗೆ ಅಲ್ಲಿನ ನಾಗರಿಕರು ಉತ್ತರ ಹುಡುಕುತ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಯೂರೋಪ್​ನಲ್ಲಿ ಅಡುಗೆ ಅನಿಲದ ಸರಾಸರಿ ಬೆಲೆಯು ಶೇ 550ರಷ್ಟು (ಐದು ಪಟ್ಟು) ಹೆಚ್ಚಾಗಿದೆ. ಬ್ರಿಟನ್​ನಲ್ಲಿ ಒಂದು ಮನೆಯ ಸರಾಸರಿ ಅಡುಗೆ ಅನಿಲ ವೆಚ್ಚವು 3,549 ಪೌಂಡ್​ ಆಗಿದೆ.

ಯೂರೋಪ್​ನ ಹಲವು ಸರ್ಕಾರವು ಸಹಾಯಧನಗಳನ್ನು ಘೋಷಿಸಿ ಜನರಿಗೆ ನೆರವಾಗಲು ಯತ್ನಿಸಿವೆ. ಆದರೆ ಅದರಿಂದಲೂ ಹೆಚ್ಚು ಪ್ರಯೋಜನವಾಗಿಲ್ಲ. ಚಳಿಗಾಲದಲ್ಲಿ ಪ್ರತಿವರ್ಷವೂ ಯೂರೋಪ್​ನಲ್ಲಿ ಇಂಧನ ಮತ್ತು ವಿದ್ಯುತ್ ಬಳಕೆ ಹೆಚ್ಚಾಗಿರುತ್ತದೆ. ಮನೆಗಳಲ್ಲಿ ಶಾಖ ಉತ್ಪಾದಿಸುವ ಉಪಕರಣಗಳಿಗೆ ಅಡುಗೆ ಅನಿಲ ಮತ್ತು ವಿದ್ಯುತ್ ಬಳಕೆಯಾಗುವುದರಿಂದ ಅದನ್ನು ನಿರ್ವಹಿಸುವುದು ಹೇಗೆಂಬ ಚಿಂತೆ ಜನರನ್ನು ಕಾಡುತ್ತಿದೆ. 2021ರ ಚಳಿಗಾಲಕ್ಕೆ ಹೋಲಿಸಿದರೆ ಈ ಬಾರಿಯ ಚಳಿಗಾಲದಲ್ಲಿ ಇಂಧನ-ವಿದ್ಯುತ್ ಬಳಕೆಗಾಗಿ ಯೂರೋಪಿಯನ್ನರು ದುಪಟ್ಟು ಹಣ ತೆರುತ್ತಾರೆ ಎಂದು ವಿಶ್ಲೇಷಿಸಲಾಗಿದೆ. ಈ ವರ್ಷದ ಅಕ್ಟೋಬರ್ ನಂತರ ಬ್ರಿಟನ್​ನಲ್ಲಿ ಬಡವರ ಸಂಖ್ಯೆ ಹೆಚ್ಚಾಗಬಹುದು. ಸಾಕಷ್ಟು ಜನರು ಇಂಧನ ಶುಲ್ಕ ಭರಿಸಲು ಸಾಧ್ಯವಾಗದೆ ಚಳಿಗಾಲದಲ್ಲಿ ಹಲವು ಕಷ್ಟನಷ್ಟ ಅನುಭವಿಸಬಹುದು ಎಂಬ ಆತಂಕ ಸರ್ಕಾರದ ವಲಯದಲ್ಲಿ ವ್ಯಕ್ತವಾಗಿದೆ.

ಆಹಾರವೂ ಸಿಗುತ್ತಿಲ್ಲ, ಶಾಖವೂ ಇಲ್ಲ; ಅಲ್ಲಿನ ಜನರ ಪರಿಸ್ಥಿತಿ ವಿವರಿಸುವ ಇಂಥ ಟ್ವೀಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇವೆ. ಈ ಪೈಕಿ ಒಂದನ್ನು ಇಲ್ಲಿ ನೀಡಲಾಗಿದೆ…

ಇದನ್ನೂ ಓದಿ: Rupee Weakens: ಯೂರೋಪ್​ನಲ್ಲಿ ಇಂಧನ ಬಿಕ್ಕಟ್ಟು: ಡಾಲರ್ ಎದುರು 20 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

Published On - 6:00 am, Tue, 6 September 22

ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?