ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟ ಮರುದಿನವೇ ಚಿನ್ನಾಭರಣ, ಹಣ ದೋಚಿ ಪರಾರಿಯಾದ ನವವಿವಾಹಿತೆ
ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ಮದುವೆಗಳು ರದ್ದಾಗಿರುವ ಪ್ರಕರಣಗಳ ಬಗ್ಗೆ ನೀವು ಆಗಾಗೆ ಸುದ್ದಿಗಳನ್ನು ಕೇಳಿರುತ್ತಿರಿ. ಆದರೆ ಮದುವೆಯಾಗಿ ಎರಡು ತಿಂಗಳ ಬಳಿಕ ಗಂಡನ ಮನೆ ಪ್ರವೇಶಿಸಿ ನವವಿವಾಹಿತೆಯೊಬ್ಬಳು, ರಾತ್ರಿ ಬೆಳಗಾಗುವಷ್ಟರಲ್ಲಿ ಗಂಡನ ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದು, ಪತಿಯೂ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಹಾಗಾದ್ರೆ ಏನಿದು ಈ ಪ್ರಕರಣ, ಈ ಘಟನೆ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ಹಾರ್ದೋಯ್, ಮೇ 19 : ಮದುವೆ ಮಂಟಪದಲ್ಲಿ ಮದುವೆ (marriage) ಗಳು ಮುರಿದು ಬಿದ್ದಿರುವ ಘಟನೆಗಳು, ಇಷ್ಟವಿಲ್ಲದ ಮದುವೆಗೆ ಒಪ್ಪಿ ಕೊನೆ ಕ್ಷಣದಲ್ಲಿ ಮದುವೆ ಮಂಟಪದಿಂದ ವಧು ಅಥವಾ ವರರು ಪರಾರಿಯಾಗಿರುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಉತ್ತರ ಪ್ರದೇಶದ ಹಾರ್ದೋಯ್ (Hardoi of Uttar Pradesh) ನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಎರಡು ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವವಿವಾಹಿತೆಯನ್ನು ಗಂಡನ ಮನೆಗೆ ಕರೆತರಲಾಗಿದೆ. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಪತ್ನಿಯೂ ಕಾಣೆಯಾಗಿದ್ದು, ಸಾವಿರಾರು ಕನಸು ಕಂಡಿದ್ದ ಪತಿಯೂ ಆಘಾತಕ್ಕೆ ಒಳಗಾಗಿದ್ದಾನೆ.
ಹೌದು, ರಾಮ್ ಪ್ರತಾಪ್ ಎನ್ನುವ ವ್ಯಕ್ತಿಯೂ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಹಾರಾಜ್‌ಗಂಜ್‌ನ ಹಳ್ಳಿಯ ಯುವತಿಯ ಜೊತೆಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಆದರೆ ಪತ್ನಿಯೂ ಗಂಡನ ಮನೆಗೆ ಮೇ 10 ರಂದು ಬಂದಿದ್ದು ಸಾವಿರಾರು ಕನಸು ಕಂಡಿದ್ದ ರಾಮ್ ಪ್ರತಾಪ್ ಗೆ ಆಘಾತವೊಂದು ಕಾದಿದೆ. ಹೌದು, ಮರುದಿನ ಅಂದರೆ ಮೇ 11 ರ ಬೆಳಿಗ್ಗೆ ತನ್ನ ಪತ್ನಿ ಎಲ್ಲಿಯೂ ಕಾಣಿಸಲಿಲ್ಲ. ಹೀಗಾಗಿ ರಾಮ್ ಪ್ರತಾಪ್ ಪತ್ನಿಯನ್ನು ಹುಡುಕಾಡಲು ಪ್ರಾರಂಭಿಸಿದ್ದಾನೆ.
ಇದನ್ನೂ ಓದಿ :ಗಾಯಗೊಂಡ ಶ್ವಾನಕ್ಕೆ ಚಿಕಿತ್ಸೆ ಕೊಡಿಸಲು ತಳ್ಳುಗಾಡಿಯಲ್ಲಿ ಆಸ್ಪತ್ರೆಗೆ ಕರೆದ್ಯೊಯ್ದ ಪುಟಾಣಿಗಳು, ವಿಡಿಯೋ ವೈರಲ್
ಅಷ್ಟೇ ಅಲ್ಲದೇ ಮುಂದೆ ನಿಂತು ಮದುವೆ ಮಾಡಿಸಿದ್ದ ಮಲ್ಲವಾನ್ ಪೊಲೀಸ್ ಠಾಣೆಯಲ್ಲಿ ತನ್ನ ಮದುವೆಗೆ ಮಧ್ಯಸ್ಥಿಕೆ ವಹಿಸಿದ್ದ ಉಂಚಟಿಲಾದ ದಿನೇಶ್, ಬಾಘ್ರೈನ ಶ್ಯಾಮು ಮತ್ತು ಮಜ್ಹಿಯಾದ ಕುಲದೀಪ್ ಅವರಿಗೆ ತನ್ನ ಪತ್ನಿ ಕಾಣೆಯಾಗಿರುವುದನ್ನು ತಿಳಿಸಿದ್ದಾನೆ. ಆದರೆ ಮದುವೆ ಮಾಡಿಸಿಕೊಟ್ಟ ಈ ವ್ಯಕ್ತಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಈ ಮೂವರಿಂದ ತನಗೇನೂ ಸಹಾಯವಾಗದು ಎಂದು ತಿಳಿದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ 13000 ರೂಪಾಯಿ ಕೂಡ ಕಾಣುತ್ತಿಲ್ಲ , ಹೆಂಡತಿಯೂ ಕಾಣುತ್ತಿಲ್ಲ ಎಂದು ಈ ಬಗ್ಗೆ ದೂರು ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








