AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿಗೆ ಹೋಗುವ ಅವಶ್ಯಕತೆ ಇಲ್ಲ, ಬೆಂಗಳೂರಿನಲ್ಲೇ ಆರಂಭವಾಗಿದೆ ಸರ್ಫ್​ ರೇಡ್​, ಡಿಕೆಶಿ ಮೊದಲ ರೈಡರ್​!

ಬೆಂಗಳೂರಿನಲ್ಲಿ ಕಳೆದ ರಾತ್ರಿ ಭಾರಿ ಮಳೆಯಾಗಿದೆ. ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತಿದೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಇದೇನಾ ಬ್ರ್ಯಾಂಡ್​ ಬೆಂಗಳೂರು? ಎಂದು ಪ್ರಶ್ನಿಸುತ್ತಾ ವ್ಯಂಗ್ಯವಾಗಿ ಪೋಸ್ಟ್​ ಹಾಕಿದ್ದಾರೆ. ಸದ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರ ಎಐ ಎಡಿಟೆಡ್​ ಸರ್ಫ್​ ರೇಡ್ ವಿಡಿಯೋ​ ಸಾಕಷ್ಟು ವೈರಲ್​ ಆಗುತ್ತಿದೆ.

ಕರಾವಳಿಗೆ ಹೋಗುವ ಅವಶ್ಯಕತೆ ಇಲ್ಲ, ಬೆಂಗಳೂರಿನಲ್ಲೇ ಆರಂಭವಾಗಿದೆ ಸರ್ಫ್​ ರೇಡ್​, ಡಿಕೆಶಿ ಮೊದಲ ರೈಡರ್​!
ಬೆಂಗಳೂರು ಜಲಾವೃತ ಚಿತ್ರ, ಡಿಕೆಶಿ ಸರ್ಫ್​ ರೈಡ್​
ವಿವೇಕ ಬಿರಾದಾರ
|

Updated on:May 19, 2025 | 2:32 PM

Share

ಬೆಂಗಳೂರು, ಮೇ 19: ಬೆಂಗಳೂರು ಮಹಾನಗರದಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ (Bengaluru Rain) ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಬೆಂಗಳೂರಿನ (Bengaluru Rain) ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಾಜಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿಯದೆ ಬಡಾವಣೆಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲಿ ಮರಗಳು ಬಿದ್ದಿದ್ದು, ನೀರಲ್ಲಿ ಮುಳಗಡೆಯಾಗಿರುವ ವಾಹನಗಳು ಕೆಟ್ಟು ನಿಂತಿವೆ. ಟ್ರಾಫಿಕ್​ ಜಾಮ್​ ಉಂಟಾಗಿದೆ. ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ತೊಂದರೆಗೊಳಗಾದವರನ್ನು ಅಧಿಕಾರಿಗಳು ಸರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

ಕಳೆದ ರಾತ್ರಿ ಸುರಿದ ಮಳೆಯಿಂದ ಇಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಹದಗೆಟ್ಟಿದೆ. ಸಾರ್ವಜನಿಕರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು, ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಇದೇನಾ ನಿಮ್ಮ ಗ್ರೇಟರ್​ ಬೆಂಗಳೂರು? ಇದೇನಾ ನಿಮ್ಮ ಬ್ರ್ಯಾಂಡ್​ ಬೆಂಗಳೂರು? ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ
Image
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
Image
ಲೂಟಿಕೋರರ ಬೆಂಗಳೂರು: ಮಳೆ ಅವಾಂತರ ಬೆನ್ನಲ್ಲೇ ಹೆಚ್​ಡಿಕೆ ಟೀಕೆ
Image
ಯೋಧರು ಖರೀದಿಸುವ ಮದ್ಯದ ತೆರಿಗೆ ಹೆಚ್ಚಿಸಲು ಮುಂದಾದ ಕಾಂಗ್ರೆಸ್ ಸರ್ಕಾರ
Image
ಬೆಂಗಳೂರು ಮಳೆ: ಸಿಸಿಬಿ ಕಚೇರಿಯೊಳಗೆ ನುಗ್ಗಿದ ನೀರು, ಅವಾಂತರ

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಪೋಸ್ಟ್​

ಬೆಂಗಳೂರಿನ ರಸ್ತೆಗಳು ನದಿಯಂತಾಗಿವೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಈ ವಿಚಾರವಾಗಿ ಸಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಲಾಗಿದೆ. ಈ ವಿಡಿಯೋವನ್ನು ಎಐ ತಂತ್ರಜ್ಞಾನ ಸಹಾಯದಿಂದ ಎಡಿಟ್​ ಮಾಡಲಾಗಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಪ್ಲೇ ಕಾರ್ಡ್​ ಹಿಡಿದು ಸರ್ಫ್​ ರೇಡ್​ ಮಾಡುತ್ತಿರುವಂತೆ ಎಡಿಟ್​ ಮಾಡಲಾಗಿದೆ. ಪ್ಲೇ ಕಾರ್ಡ್​ನಲ್ಲಿ ಬ್ರ್ಯಾಂಡ್​ ಬೆಂಗಳೂರು ಅಂತ ಬರೆಯಲಾಗಿದೆ.

ಈ ಪೋಸ್ಟ್​ಗೆ ಕ್ಯಾಪ್ಷನ್​ ಬರೆಯಲಾಗಿದ್ದು, “ಸರ್ಫ್​ ರೈಡ್​ ಅನುಭವ ಪಡೆಯಲು ಬೆಂಗಳೂರಿನ ಜನರು ಕರಾವಳಿಗೆ ಹೋಗುವ ಅವಶ್ಯಕತೆ ಇಲ್ಲ. ಕಾಂಗ್ರೆಸ್​ ಸರ್ಕಾರವು ತನ್ನ ಪ್ರೀತಿಯ ಸ್ನೇಹಿತ ಪಾಕಿಸ್ತಾನದ ಕನಸು ಬೆಂಗಳೂರು ಪೋರ್ಟ್​ ಅನ್ನು ನನಸು ಮಾಡುತ್ತಿದೆ” ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಳೆ ಸೃಷ್ಟಿಸಿದ ಅಧ್ವಾನ ಒಂದೆರಡಲ್ಲ; ಎಲ್ಲೆಲ್ಲಿ ಏನೇನಾಯ್ತು ನೋಡಿ!

ಬೆಂಗಳೂರು ಪೋರ್ಟ್​ ಧ್ವಂಸ ಅಂತ ಫೋಸ್ಟ್​ ಹಾಕಿದ್ದ ಪಾಕ್​ ನೆಟ್ಟಿಗರು

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿತ್ತು. ಭಾರತೀಯ ಸೇನೆ ಪಾಕಿಸ್ತಾನದ ಹಲವು ಸೇನಾ ನೆಲೆಗಳನ್ನು ಧ್ವಂಸ ಮಾಡಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಟ್ಟಿಟರ್​ ಖಾತೆಯ ಮೂಲಕ ವ್ಯಕ್ತಿಯೋರ್ವ ಭಾರತದ ದಾಳಿಗೆ ಪಾಕ್​ ಸಮರ್ಥ ಉತ್ತರ ಕೊಟ್ಟಿದ್ದು, ಬೆಂಗಳೂರಿನ ಪೋರ್ಟ್ ​ಅನ್ನು ಧ್ವಂಸ ಮಾಡಲಾಗಿದೆ ಎಂದು ಟ್ವೀಟ್​ ಮಾಡಿದ್ದನು.

ಇದು ಇಡೀ ಸಾಮಾಜಿಕ ಜಾಲತಾಣವನ್ನು ನಗೆಗಡಲಲ್ಲಿ ತೇಲಿಸಿತ್ತು. ಇದೀಗ, ಪಾಕಿಸ್ತಾನದ ನೆಟ್ಟಿಗನ ಕನಸನ್ನು ಕಾಂಗ್ರೆಸ್​ ಸರ್ಕಾರ ನನಸು ಮಾಡಿದೆ ಎಂದು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Mon, 19 May 25