Loading video

ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಬೋರ್ಗಲ್ಲಿನ ಮೇಲೆ ನೀರು ಸುರಿದಂತಾಗುತ್ತಿದೆ: ಶೋಭಾ ಕರಂದ್ಲಾಜೆ

|

Updated on: Feb 19, 2025 | 12:17 PM

ರಾಜ್ಯ ಬಿಜೆಪಿ ಘಟಕದಲ್ಲಿ ನಡೆಯುತ್ತಿರುವ ಒಳಜಗಳ, ತಮಗೆ ನೀಡಿದ ನೋಟೀಸ್​ಗೆ ಬಸನಗೌಡ ಪಾಟೀಲ್ ಯತ್ನಾಳ್ ಇದುವರೆಗೆ ಉತ್ತರಿಸದಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ತನಗೆ ಅದ್ಯಾವುದೂ ಗೊತ್ತಿಲ್ಲ, ಅದನ್ನೆಲ್ಲ ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ, ಕೇಂದ್ರದ ಮಂತ್ರಿಯಾಗಿ ತನ್ನ ಮೇಲಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವೆ ಮತ್ತು ಕರ್ನಾಟಕದಲ್ಲಿ ವಿರೋಧ ಪಕ್ಷದ ಭಾಗವಾಗಿ ಕೆಲಸ ಮಾಡುತ್ತಿರುವೆ ಎಂದು ಶೋಭಾ ಹೇಳಿದರು.

ದೆಹಲಿ: ಇಂದು ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರ್ನಾಟಕದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿದ್ದು ತಾನೂ ಅದರ ಒಂದು ಭಾಗ ಮತ್ತು ಸರ್ಕಾರದ ವೈಫಲ್ಯಗಳನನ್ನು ಎತ್ತಿ ತೋರಿಸುವುದ ತನ್ನ ಕರ್ತವ್ಯ ಎಂದು ಹೇಳಿದರು. ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತಿದೆ, ಗ್ಯಾರಂಟಿ ಯೋಜನೆನಗಳ ಹಣ ಬಂದಿಲ್ಲವೆಂದು ರಾಜ್ಯದಲ್ಲಿ ಜನ ಈಗಾಗಲೇ ರೊಚ್ಚಿಗೆದ್ದಿದ್ದಾರೆ ಎಂದು ಶೋಭಾ ಹೇಳಿದರು. ಅದರೆ ತಮ್ಮ ಹೋರಾಟಗಳ ಬಗ್ಗೆ ಸರ್ಕಾರ ನಿರ್ಲಿಪ್ತ ಭಾವ ತಳೆದಿದೆ, ಬಿಜೆಪಿಯ ಹೋರಾಟಗಳು ಬೋರ್ಗಲ್ಲ ಮೇಲೆ ನೀರು ಸುರಿದಂತಾಗುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವೈಫಲ್ಯಗಳ ಬಗ್ಗೆ ಕೇಳಿದರೆ ಉದಾಸೀನ ಭಾವ ಪ್ರದರ್ಶಿಸುತ್ತಾರೆ ಎಂದು ಕೇಂದ್ರ ಸಚಿವೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕೇಂದ್ರ ವರಿಷ್ಠರ ಅನುಮತಿಯಿಲ್ಲದೆ ಶೋಭಾ ಕರಂದ್ಲಾಜೆ ಸತ್ಯಾಗ್ರಹದಲ್ಲಿ ಭಾಗಿಯಾಗುತ್ತಾರೆಯೇ? ಯತ್ನಾಳ್