AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

USAID: ಅಮೆರಿಕದ ಯುಎಸ್ ಏಡ್ ಇತಿಹಾಸ ಏನು, ಉದ್ದೇಶ ಯಾವುದು? ಟ್ರಂಪ್ ಬಳಗಕ್ಕೆ ಯಾಕೆ ಕೋಪ?

USAID Explained: ಏಷ್ಯಾ, ಆಫ್ರಿಕಾ ಇತ್ಯಾದಿಯಲ್ಲಿನವ ಹಿಂದುಳಿದ ಪ್ರದೇಶಗಳಲ್ಲಿ ಬಡತನ, ಅಪೌಷ್ಟಿಕತೆ ನಿವಾರಣೆಯಂತಹ ಕಾರ್ಯಗಳನ್ನು ಯುಎಸ್​ಏಡ್ ಮಾಡುತ್ತಿದೆ. ಇದಕ್ಕೆ ಈಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾಕೆ ವಿರೋಧಿಸುತ್ತಿದ್ದಾರೆ, ಕಿಡಿಕಾರುತ್ತಿದ್ದಾರೆ? ದಶಕಗಳ ಹಿಂದೆ ಕಾಯ್ದೆ ಮೂಲಕ ಅಧಿಕೃತವಾಗಿ ಅಮೆರಿಕ ಸರ್ಕಾರದಿಂದಲೇ ಸ್ಥಾಪನೆಯಾದ ಯುಎಸ್​ಏಡ್ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ಸಂಕ್ಷಿಪ್ತ ನೋಟ...

USAID: ಅಮೆರಿಕದ ಯುಎಸ್ ಏಡ್ ಇತಿಹಾಸ ಏನು, ಉದ್ದೇಶ ಯಾವುದು? ಟ್ರಂಪ್ ಬಳಗಕ್ಕೆ ಯಾಕೆ ಕೋಪ?
ಯುಎಸ್​ಏಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 20, 2025 | 11:38 AM

Share

ನವದೆಹಲಿ, ಫೆಬ್ರುವರಿ 20: ಆರೇಳು ದಶಕಗಳಿಂದ ಸದ್ದಿಲ್ಲದೇ ಕೆಲಸ ಮಾಡುತ್ತಿದ್ದ ಅಮೆರಿಕದ ಯುಎಸ್​ಏಡ್ (USAID) ಸಂಸ್ಥೆ ಈಗ ವಿವಾದದ ವಸ್ತುವಾಗಿದೆ. ಇಲಾನ್ ಮಸ್ಕ್ ನೇತೃತ್ವದಲ್ಲಿ ರಚನೆಯಾಗಿರುವ ಡೋಜೆ ಇಲಾಖೆ (DOGE) ಯುಎಸ್​ಏಡ್​ನಿಂದ ವಿದೇಶಗಳಿಗೆ ನೀಡಲಾದ ಧನಸಹಾಯಗಳ ಪಟ್ಟಿಯನ್ನು ಪ್ರಕಟಿಸಿ, ಆ ನೆರವನ್ನು ನಿಲ್ಲಿಸಿದೆ. ಡೊನಾಲ್ಡ್ ಟ್ರಂಪ್ ಅವರು ಯುಎಸ್​ಏಡ್ ಸಂಸ್ಥೆಯನ್ನು ಒಂದು ಪಕ್ಕಾ ಕ್ರಿಮಿನಲ್ ಸಂಘಟನೆ ಎಂದು ಕರೆದಿದ್ದಾರೆ. ಅಮೆರಿಕದ ತೆರಿಗೆ ಪಾವತಿದಾರರ ಹಣವನ್ನು ಇದು ದುರುಪಯೋಗಪಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಷ್ಟೇ ಅಲ್ಲ, ಹಿಂದಿನ ಬೈಡನ್ ಸರ್ಕಾರ ಭಾರತೀಯ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು 21 ಮಿಲಿಯನ್ ಡಾಲರ್ ಹಣದ ನೆರವು ಘೋಷಿಸಿದ್ದರ ಔಚಿತ್ಯವನ್ನು ಪ್ರಶ್ನಿಸಿದ ಟ್ರಂಪ್, ಇದು ಮೋದಿ ಸರ್ಕಾರವನ್ನು ಬದಲಿಸುವ ಪಿತೂರಿಯಾಗಿದ್ದಿರಬಹುದು ಎಂದು ಸಂದೇಹಿಸಿದ್ದಾರೆ. ಸರ್ಕಾರದ ಅಡಿಯಲ್ಲೇ ಇರುವ ಒಂದು ಸಂಸ್ಥೆ ಬಗ್ಗೆ ಅದೇ ದೇಶದ ಮುಖ್ಯಸ್ಥರು ಇಷ್ಟೊಂದು ದೊಡ್ಡ ಗಂಭೀರ ಆರೋಪ ಮಾಡಿರುವುದು ನಿಜಕ್ಕೂ ಗಂಭೀರದ ಸಂಗತಿ ಹೌದು.

ಏನಿದು ಯುಎಸ್ ಏಡ್?

USAID ಎಂದರೆ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್​ನ ಸಂಕ್ಷಿಪ್ತ ರೂಪ. ಹೆಸರೇ ಹೇಳುವಂತೆ ಇದು ಅಂತಾರಾಷ್ಟ್ರೀಯ ಅಭಿವೃದ್ಧಿಗೆ ಇರುವ ಅಮೆರಿಕದ ಒಂದು ಏಜೆನ್ಸಿ.

ಇದನ್ನೂ ಓದಿ: ಬೈಡನ್ ಭಾರತದಲ್ಲಿ ಸರ್ಕಾರ ಬದಲಿಸಲು ಪ್ರಯತ್ನಿಸಿದ್ದರೇ? ಚುನಾವಣೆಗಾಗಿ 182 ಕೋಟಿ ರೂ. ಕೊಡುವ ಅಗತ್ಯವೇನಿತ್ತು?

1961ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನೆಡಿ ಅವರು ಫಾರೀನ್ ಅಸಿಸ್ಟೆನ್ಸ್ ಆ್ಯಕ್ಟ್ ಜಾರಿಗೆ ತಂದು, ಆ ಮೂಲಕ ಯುಎಸ್​ಏಡ್ ಸಂಸ್ಥೆಯ ಸ್ಥಾಪನೆಗೆ ಎಡೆ ಮಾಡಿಕೊಟ್ಟರು. ಅಂದರೆ, 64 ವರ್ಷಗಳಿಂದಲೂ ಯುಎಸ್​ಏಡ್ ಅಸ್ತಿತ್ವದಲ್ಲಿದೆ. ಅದಕ್ಕೆ ಮುಂಚೆಯೂ ಅಮೆರಿಕದಿಂದ ವಿದೇಶೀ ನೆರವು ಯೋಜನೆಗಳು ಚಾಲನೆಯಲ್ಲಿದ್ದವು. ಆದರೆ, ಅಧಿಕೃತತೆ ಇರಲಿಲ್ಲ. 1961ರಲ್ಲಿ ಅಧಿಕೃತವಾಗಿ ಸರ್ಕಾರದ ಅಡಿಯಲ್ಲೇ ಈ ಕಾರ್ಯಗಳನ್ನು ಮಾಡಲು ಯುಎಸ್​ಏಡ್ ಅನ್ನು ಸ್ಥಾಪಿಸಲಾಗಿದೆ.

ಯುಎಸ್ ಏಡ್​ನ ಉದ್ದೇಶವೇನು?

ಅಮೆರಿಕದ ಉತ್ಪನ್ನಗಳಿಗೆ ವಿಶ್ವದಲ್ಲಿ ಅಗತ್ಯ ಮಾರುಕಟ್ಟೆಗಳನ್ನು ಸೃಷ್ಟಿಸಲು ಅನುವಾಗುವಂತೆ ವಿವಿಧ ದೇಶಗಳಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳುವುದು ಯುಎಸ್​ಏಡ್​ನ ಮೂಲ ಉದ್ದೇಶವಾಗಿತ್ತು. ಅಮೆರಿಕ ಸೂಪರ್ ಪವರ್ ಸ್ಥಾನ ಉಳಿಸಿಕೊಳ್ಳಬೇಕಾದರೆ ಆರ್ಥಿಕವಾಗಿ ಮಾತ್ರವಲ್ಲ, ರಾಜಕೀಯವಾಗಿಯೂ ವಿಶ್ವದ ವಿವಿಧೆಡೆ ಪೂರಕ ವಾತಾವರಣ ಸೃಷ್ಟಿಸುವುದು ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ ಯುಎಸ್​ಏಡ್ ಅನ್ನು ಬಳಸಿಕೊಳ್ಳಲಾಗಿತ್ತೂ ಕೂಡ.

ಈ ರಾಜಕೀಯ ಮತ್ತು ಆರ್ಥಿಕ ಉದ್ದೇಶಗಳ ಮಧ್ಯೆ, ಹಸಿವು, ಬಡತನ, ಅಪೌಷ್ಟಿಕತೆ, ಸಾಂಕ್ರಾಮಿಕ ಕಾಯಿಲೆ ಇತ್ಯಾದಿ ಸಮಸ್ಯೆಗಳು ದಟ್ಟವಾಗಿರುವ ಪ್ರದೇಶಗಳಲ್ಲಿ ಯುಎಸ್​ಏಡ್ ಮೂಲಕ ನೆರವೂ ನೀಡಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಮತದಾನ ಹೆಚ್ಚಿಸಲು ಯುಎಸ್​ಏಡ್​ನಿಂದ 21 ಮಿಲಿಯನ್ ಡಾಲರ್; ಇದು ದೊಡ್ಡ ಸ್ಕ್ಯಾಮ್ ಎಂದು ಭಾರತೀಯರ ಆಕ್ರೋಶ

ಡೊನಾಲ್ಡ್ ಟ್ರಂಪ್ ಅವರಿಂದ ಯುಎಸ್​ಏಡ್ ನಿಲ್ಲಿಸಲು ಆಗುತ್ತದಾ?

ಯುಎಸ್​ಏಡ್ ಬಗ್ಗೆ ಡೊನಾಲ್ಡ್ ಟ್ರಂಪ್ ಅವರ ಆಕ್ರೋಶಕ್ಕೆ ಕೆಲ ಪ್ರಮುಖ ಕಾರಣಗಳಿವೆ. ಅದರಲ್ಲಿ ಒಂದು, ಇದು ಅಮೆರಿಕಕ್ಕೆ ಯಾವ ಲಾಭವನ್ನೂ ತರದ ಯೋಜನೆ. ಹಾಗೆಯೇ, ಅಮೆರಿಕದ ಎಡಪಂಥೀಯರ ಚಿತಾವಣಿಯ ಭಾಗವಾಗಿ ಯುಎಸ್​ಏಡ್ ಇದೆ ಎಂಬುದು ಟ್ರಂಪ್ ಆರೋಪ.

ಸದ್ಯ ಯುಎಸ್​ಏಡ್ ಸಂಸ್ಥೆಯಲ್ಲಿ 10,000 ಜನರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಮುಕ್ಕಾಲು ಪಾಲು ಜನರು ವಿದೇಶಗಳಲ್ಲಿ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲು ನಿಯೋಜನೆಗೊಂಡಿದ್ದಾರೆ. ಇಷ್ಟೂ 10,000 ಮಂದಿಯನ್ನು ಟ್ರಂಪ್ ಅವರು ಲೆಫ್ಟ್ ಲೂನಾಟಿಕ್ಸ್ ಎಂದು ಕರೆದಿದ್ದಾರೆ. ಅಂದರೆ ಎಡಪಂಥೀಯ ಹುಚ್ಚರು ಎಂದಿದ್ದಾರೆ.

ಇದನ್ನೂ ಓದಿ: ಭಾರತ-ಅಮೆರಿಕದಿಂದ ಸದ್ಯದಲ್ಲೇ ದೊಡ್ಡ ನಡೆ..? ಚೀನಾ ಸ್ಥಾನಕ್ಕೆ ಭಾರತವನ್ನು ಕೂರಿಸುವ ಪ್ರಯತ್ನವಾ?

ಈ ಮಧ್ಯೆ, ಡೊನಾಲ್ಡ್ ಟ್ರಂಪ್ ಅವರು ಯುಎಸ್​ಏಡ್ ಅನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. ಈ ಕೆಲಸ ಸಾಧ್ಯವಾಗುವುದು ಸದ್ಯಕ್ಕೆ ಕಷ್ಟ. ಯುಎಸ್​ಏಡ್ ಅನ್ನು ಕಾಯ್ದೆ ಮೂಲಕ ಸ್ಥಾಪನೆ ಮಾಡಲಾಗಿದೆ. ಇದನ್ನು ನಿಲ್ಲಿಸಬೇಕೆಂದರೆ ಕಾಯ್ದೆ ತಿದ್ದುಪಡಿ ತರಬೇಕು ಅಥವಾ ರದ್ದು ಮಾಡಬೇಕು. ಹಾಗೆ ಮಾಡಬೇಕಾದರೆ ಅದು ಅಮೆರಿಕ ಸಂಸತ್​ನ ಅನುಮೋದನೆ ಪಡೆಯಬೇಕು. ಈಗ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಸಂಸತ್​ನಲ್ಲಿ ಅಷ್ಟು ಬಹುಮತ ಇಲ್ಲ. ಹೀಗಾಗಿ, ಯುಎಸ್​ಏಡ್ ಅನ್ನು ನಿಲ್ಲಿಸುವುದು ಅಲ್ಲಿನ ಸರ್ಕಾರಕ್ಕೆ ಕಷ್ಟ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್