ತೈಪೆ: ಪೂರ್ವ ತೈವಾನ್ (Taiwan) ಮತ್ತು ನೈಋತ್ಯ ಜಪಾನ್ (southwestern Japan) ನಡುವಿನ ಸಮುದ್ರದಲ್ಲಿ ಸೋಮವಾರ ಪ್ರಬಲ ಭೂಕಂಪ (Earthquake) ಸಂಭವಿಸಿದೆ, ಆದರೆ ಸುನಾಮಿ(tsunami) ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೈಪೆಯಲ್ಲಿ ಲಘು ಕಂಪನದ ಅನುಭವವಾಗಿದ್ದು ಯಾವುದೇ ಹಾನಿ ವರದಿಯಾಗಿಲ್ಲ. ತೈವಾನ್‌ನಿಂದ ಪೂರ್ವಕ್ಕೆ 110 ಕಿಲೋಮೀಟರ್ (66 ಮೈಲುಗಳು) ದೂರದಲ್ಲಿರುವ ಯೋನಾಗುನಿಯ ದಕ್ಷಿಣ ಮತ್ತು ಪಶ್ಚಿಮದ ದ್ವೀಪದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನಿನ ಅಧಿಕಾರಿಗಳು ತಿಳಿಸಿದ್ದಾರೆ. 6.1 ತೀವ್ರತೆಯ ಭೂಕಂಪವು 27 ಕಿಲೋಮೀಟರ್ (17 ಮೈಲಿ) ಆಳದಲ್ಲಿದೆ ಎಂದು ತೈವಾನ್‌ನ ಕೇಂದ್ರ ಹವಾಮಾನ ಬ್ಯೂರೋ ಹೇಳಿದೆ. ಭೂಕಂಪದ ತೀವ್ರತೆ 6.3 ರಷ್ಟಿತ್ತು ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಪೂರ್ವಭಾವಿ ಅಳತೆಗಳು ಕಂಪನದ ನಂತರ ಭಿನ್ನವಾಗಿರುತ್ತವೆ ಮತ್ತು ಹೆಚ್ಚಿನ ವಿಶ್ಲೇಷಣೆಯ ನಂತರ ಪರಿಷ್ಕರಿಸಲಾಗುತ್ತದೆ.
JUST IN: A strong earthquake shook seas between eastern Taiwan and southwestern Japan on Monday, but authorities say there was no danger of a tsunamihttps://t.co/KPzGXJ3IHq via AP pic.twitter.com/qLfD5aqDNB
ಇದನ್ನೂ ಓದಿ— Bloomberg (@business) May 9, 2022
ಸುನಾಮಿಯ ಅಪಾಯವಿಲ್ಲ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಭೂಕಂಪವು ಸಮುದ್ರದ ಮೇಲ್ಮೈಯಿಂದ 20 ಕಿಲೋಮೀಟರ್ (12 ಮೈಲುಗಳು) ಕೆಳಗೆ ಅಪ್ಪಳಿಸಿತು. ಅಲೆಯ ಉಬ್ಬರ ಇರಬಹುದು ಆದರೆ ಸುನಾಮಿ ಅಪಾಯವಿಲ್ಲ ಎಂದು ಸಂಸ್ಥೆ ಹೇಳಿದೆ.
ತೈವಾನ್ ಎರಡು ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನ ಸಮೀಪದಲ್ಲಿದೆ ಮತ್ತು ಭೂಕಂಪಗಳಿಗೆ ಆಗಾಗ ಗುರಿಯಾಗುತ್ತದೆ. 2016 ರಲ್ಲಿ ದಕ್ಷಿಣ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 1999 ರಲ್ಲಿ 7.3 ತೀವ್ರತೆಯ ಭೂಕಂಪದಲ್ಲಿ 2,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.
ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:15 pm, Mon, 9 May 22