AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಮುಂದಿನ ಅಧ್ಯಕ್ಷೆಯಾಗ್ತಾರಾ ಭಾರತ ಮೂಲದ ಕಮಲಾ ಹ್ಯಾರಿಸ್​?

ಡೊನಾಲ್ಡ್​ ಟ್ರಂಪ್​ ಅವರೊಂದಿಗಿನ ಚರ್ಚೆಯಲ್ಲಿ ಜೋ ಬೈಡನ್ ಮಂಕಾದ ಬಳಿಕ ಅಧ್ಯಕ್ಷೀಯ ಪ್ರಚಾರದಿಂದ ಹಿಂದೆ ಸರಿಯುವಂತೆ ಒತ್ತಡ ಹೆಚ್ಚಿದೆ. ಜತೆಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ರನ್ನು ಪ್ರಮುಖ ಅಭ್ಯರ್ಥಿಯನ್ನಾಗಿ ನೋಡಲಾಗುತ್ತಿದೆ.

ಅಮೆರಿಕದ ಮುಂದಿನ ಅಧ್ಯಕ್ಷೆಯಾಗ್ತಾರಾ ಭಾರತ ಮೂಲದ ಕಮಲಾ ಹ್ಯಾರಿಸ್​?
ಜೋ ಬೈಡನ್-ಕಮಲಾ ಹ್ಯಾರಿಸ್
ನಯನಾ ರಾಜೀವ್
|

Updated on: Jul 04, 2024 | 11:15 AM

Share

ಅಮೆರಿಕದಲ್ಲಿ ಮುಂಬರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಸಂಭಾವ್ಯ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್(Donald Trump) ಅವರೊಂದಿಗಿನ ಚರ್ಚೆಯಲ್ಲಿ ನಿರಾಶಾದಾಯಕ ಪ್ರದರ್ಶನದ ಹೊರತಾಗಿಯೂ ಅಧ್ಯಕ್ಷ ಜೋ ಬೈಡನ್(Joe Biden) ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅಚಲರಾಗಿದ್ದಾರೆ.

ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಜೋ ಬೈಡನ್ ಹೇಳಿದ್ದಾರೆ, ನಾನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ. ಇದರಿಂದ ನನ್ನನ್ನು ಯಾರೂ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಬೈಡನ್ ಹೇಳುತ್ತಿದ್ದಾರೆ. ಬೈಡನ್ ಮತ್ತು ಹ್ಯಾರಿಸ್ ಇಬ್ಬರೂ ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯ ಕರೆಯ ಮೇರೆಗೆ ಇದ್ದಕ್ಕಿದ್ದಂತೆ ಆಗಮಿಸಿದ್ದರು.

ಅಮೆರಿಕ ಅಧ್ಯಕ್ಷ, ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಅವರಿಗಿಂತಲೂ ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿ ಡೊನಾಲ್ಡ್​ ಟ್ರಂಪ್ ಅವರು ಶೇ.6ರಷ್ಟು ಮುನ್ನಡೆ ಗಳಿಸಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್​ ಜರ್ನಲ್ ಸಮೀಕ್ಷೆ ತಿಳಿಸಿದೆ.

ಮತ್ತಷ್ಟು ಓದಿ: ಸಂಜೆ 4 ಗಂಟೆ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಏನಾಗುತ್ತೆ, ಏನಾದರೂ ಕಾಯಿಲೆ ಇದೆಯೇ?

ಟ್ರಂಪ್ ಅವರು ಶೇಕಡಾ 48ರಷ್ಟು ಮತದಾರರ ಬೆಂಬಲ ಹೊಂದಿದ್ದು, ಬೈಡನ್ ಅವರಿಗೆ ಶೇ.42ರಷ್ಟು ಬೆಂಬಲವಿದೆ. ಕಳೆದ ಫೆಬ್ರವರಿಯಲ್ಲಿ ಇಬ್ಬರು ನಡುವಣ ಅಂತರ ಶೇ.2ರಷ್ಟಾಗಿತ್ತು. ಆ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್​ಗಿಂತಲೂ ಟ್ರಂಪ್ ಮತ್ತಷ್ಟು ಮುನ್ನಡೆ ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಯಾರು ಸೂಕ್ತರು, ಜೋ ಬೈಡನ್ ಅವರಿಗಿಂತ ಸಮರ್ಥ ಅಭ್ಯರ್ಥಿ ಯಾರಾದರೂ ಇದ್ದಾರಾ, ಡೊನಾಲ್ಡ್​ ಟ್ರಂಪ್​ ಸವಾಲೊಡ್ಡಬಲ್ಲ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್.

ಅಮೆರಿಕದಲ್ಲಿ ಒಂದು ಬಾರಿ ಅಧ್ಯಕ್ಷರಾದರೆ ಎರಡನೇ ಬಾರಿಗೂ ಸ್ಪರ್ಧಿಸಬಹುದು ಆದರೆ ಮೂರನೇ ಬಾರಿಗೆ ಸ್ಪರ್ಧಿಸುವಂತಿಲ್ಲ, ಜೋ ಬೈಡನ್ ತಮ್ಮ ಎರಡನೇ ಅವಧಿಗೆ ಅಧ್ಯಕ್ಷರಾಗ ಹೊರಟಿದ್ದಾರೆ. ಆದರೆ ಅವರ ದೈಹಿಕ ಸ್ಥಿರತೆ ಬಗ್ಗೆ ಈಗ ಸವಾಲು ಎದ್ದಿದ್ದು, ಅವರ ಜಾಗಕ್ಕೆ ಕಮಲಾ ಹ್ಯಾರಿಸ್​ ಸೂಕ್ತ ಎಂದು ಹೇಳಲಾಗುತ್ತಿದೆ.

ನಿರಂತರವಾಗಿ ಜೋ ಬೈಡನ್ ಜನಪ್ರಿಯತೆ ಕ್ಷೀಣಿಸುತ್ತಿದೆ, ಡೊನಾಲ್ಡ್​ ಟ್ರಂಪ್​ ಜತೆ ನಡೆದ ಸಂವಾದದ ಸಂದರ್ಭದಲ್ಲಿ ಅವರು ಮಂಕಾಗಿದ್ದರು. ಈ ಹಿನ್ನೆಲೆಯಲ್ಲಿ ಡೆಮಾಕ್ರೆಟಿಕ್ ಪಕ್ಷವು ಆತಂಕದಲ್ಲಿದೆ, ಟ್ರಂಪ್ ವಿರುದ್ಧ ಸಮರ್ಥ ಅಭ್ಯರ್ಥಿ ನಿಲ್ಲಿಸಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ. ಇಲ್ಲವಾದರೆ ಈ ವರ್ಷದ ನವೆಂಬರ್​ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷಕ್ಕೆ ಹಿನ್ನಡೆಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ