ಇದು ನಮ್ಮಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲೂ ನಡೆಯುತ್ತದೆ ಇಂತಹ ಅಮಾನುಷ ಘಟನೆಗಳು..

ಮನೆ ಮಕ್ಕಳನ್ನೇ ದಶಕಗಟ್ಟಲೆ ಗೃಹ ಬಂಧನದಲ್ಲಿಡುವ ಸುದ್ದಿಗಳು ಭಾರತಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇಂಥದ್ದೇ ಒಂದು ಅಮಾನವೀಯ ಘಟನೆ ಸ್ವೀಡನ್​ನಲ್ಲಿ ನಡೆದಿದೆ.

ಇದು ನಮ್ಮಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲೂ ನಡೆಯುತ್ತದೆ ಇಂತಹ ಅಮಾನುಷ ಘಟನೆಗಳು..
ಮನೆ ಮಕ್ಕಳನ್ನೇ ದಶಕಗಟ್ಟಲೆ ಗೃಹ ಬಂಧನದಲ್ಲಿಡುವ ಸುದ್ದಿಗಳು ನಮ್ಮ ಕರ್ನಾಟಕ, ಭಾರತದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಆದರೆ ಇಂತಹ ಅಮಾನುಷ ಘಟನೆಗಳು ನಮ್ಮಲ್ಲಷ್ಟೇ ಅಲ್ಲ, ಮುಂದುವರಿದ ದೇಶಗಳಲ್ಲೂ ಜರುಗುತ್ತವೆ
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Dec 02, 2020 | 2:31 PM

ಮನೆ ಮಕ್ಕಳನ್ನೇ ದಶಕಗಟ್ಟಲೆ ಗೃಹ ಬಂಧನದಲ್ಲಿಡುವ ಸುದ್ದಿಗಳು ನಮ್ಮ ಕರ್ನಾಟಕ, ಭಾರತದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಆದರೆ ಇಂತಹ ಅಮಾನುಷ ಘಟನೆಗಳು ನಮ್ಮಲ್ಲಷ್ಟೇ ಅಲ್ಲ, ಮುಂದುವರಿದ ದೇಶಗಳಲ್ಲೂ ಜರುಗುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ.

ಸ್ವೀಡನ್​ ದೇಶದ ಸ್ಟಾಕ್​ಹೋಮ್​ನ ಮಹಿಳೆಯೋರ್ವಳು ತನ್ನ ಮಗನನ್ನು ಬರೋಬ್ಬರಿ 30 ವರ್ಷದಿಂದ ಗೃಹ ಬಂಧನದಲ್ಲಿ ಇರಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಕಳೆದ ತಿಂಗಳು ಮಹಿಳೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಗ, ಸಂಬಂಧಿಯೋರ್ವರು ಆಕೆಯ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಬಂಧನದಲ್ಲಿದ್ದ ಮಹಿಳೆಯ ಆ ನತದೃಷ್ಟ ಮಗ ಕಣ್ಣಿಗೆ ಬಿದ್ದಿದ್ದಾನೆ. ಮನೆ ಭೂತ ಬಂಗಲೆಯಂತೆ ಭಾಸವಾಗುತ್ತಿತ್ತು ಎಂದು ಸಂಬಂಧಿ ಹೇಳಿದ್ದಾರೆ.

12 ವರ್ಷವಾಗುವ ಮೊದಲಿಂದಲೇ ಬಂಧನ.. ಮಗನಿಗೆ 12 ವರ್ಷ ಆಗುವ ಮೊದಲೇ ಈ ಮಹಾತಾಯಿ ತನ್ನದೇ ಕರುಳ ಕುಡಿಯನ್ನು ಗೃಹ ಬಂಧನದಲ್ಲಿರಿಸಿದ್ದಾಳೆ. ಈ ಕುರಿತು ನೆರೆ ಮನೆಯವರಿಗೆ ಕಿಂಚಿತ್ ಸುಳಿವೂ ಸಿಗದಂತೆ ನಿಭಾಯಿಸಿದ್ದಾಳೆ. ಅಕ್ಕ ಪಕ್ಕದ ಮನೆಯವರು ಈ ಹುಡುಗ ಯಾಕೋ ಶಾಲೆಗೆ ಹೋಗುತ್ತಿಲ್ಲ ಎಂದು ಒಮ್ಮೆ ಯೋಚಿಸಿದ್ದಾರೆ. ಹೆಚ್ಚು ತಲೆಕೆಡಿಸಿಕೊಳ್ಳದೇ, ಮಗನನ್ನು ಮನೆಯಲ್ಲೇ ಬೆಳೆಸುತ್ತಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದಾರೆ.

41 ವರ್ಷವಾದರೂ ಬೆಳೆದಿಲ್ಲ ಹಲ್ಲುಗಳು

ಆ ಬಂಧಿತ ವ್ಯಕ್ತಿಗೆ ಪೌಷ್ಠಿಕಾಂಶದ ಕೊರತೆಯಿಂದ 41 ವರ್ಷವಾದರೂ ಹಲ್ಲುಗಳೇ ಬೆಳೆದಿಲ್ಲ! ನಡೆದಾಡಲು ಮತ್ತು ಮಾತನಾಡಲೂ ಆಗದ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮಹಾತಾಯಿಯನ್ನು ಬಂಧಿಸಿದ್ದಾರೆ. ಆದರೆ, ಆಕೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾಳೆ.

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್