AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hajj Pilgrimage: ಸೌದಿ ಅರೇಬಿಯಾದಲ್ಲಿ ದಾಖಲೆಯ ತಾಪಮಾನ; 1,000 ಕ್ಕೂ ಹೆಚ್ಚು ಹಜ್ ಯಾತ್ರಿಕರು ಸಾವು

ವಾರ್ಷಿಕ ತೀರ್ಥಯಾತ್ರೆಯ ಸಮಯದಲ್ಲಿ ಸುಮಾರು 10 ದೇಶಗಳು 1,081 ಸಾವುಗಳನ್ನು ವರದಿ ಮಾಡಿದೆ. ಅಂಕಿಅಂಶಗಳು ಅಧಿಕೃತ ಹೇಳಿಕೆಗಳ ಮೂಲಕ ಅಥವಾ ತಮ್ಮ ದೇಶಗಳ ಪ್ರತಿಕ್ರಿಯೆಗಳ ಮೇಲೆ ಕೆಲಸ ಮಾಡುವ ರಾಜತಾಂತ್ರಿಕರಿಂದ ಬಂದಿವೆ ಎಂದು ಎಎಫ್​​ಪಿ ವರದಿ ಮಾಡಿದೆ.

Hajj Pilgrimage: ಸೌದಿ ಅರೇಬಿಯಾದಲ್ಲಿ ದಾಖಲೆಯ ತಾಪಮಾನ; 1,000 ಕ್ಕೂ ಹೆಚ್ಚು ಹಜ್ ಯಾತ್ರಿಕರು ಸಾವು
ಹಜ್
ರಶ್ಮಿ ಕಲ್ಲಕಟ್ಟ
|

Updated on:Jun 20, 2024 | 6:12 PM

Share

ರಿಯಾದ್ ಜೂನ್ 20: ಏಷ್ಯಾದ ಕೆಲವು ಭಾಗಗಳಲ್ಲಿ ಬಿಸಿಲಿನ ತಾಪ (Record-breaking heat)  ಮುಂದುವರಿದಿರುವುದರಿಂದ, ಸೌದಿ ಅರೇಬಿಯಾದಲ್ಲಿ (Saudi Arabia) ಈ ವರ್ಷದ ಹಜ್‌ನಲ್ಲಿ (Hajj Pilgrimage)1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಎಎಫ್ ಪಿ ವರದಿ ಮಾಡಿದೆ. ಮರಣಹೊಂದಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಈ ವರ್ಷ ತೀವ್ರ ತಾಪಮಾನದಲ್ಲಿ ಹಜ್ ಯಾತ್ರೆಯನ್ನು ಮಾಡಿದ ನೋಂದಾಯಿಸದ ಯಾತ್ರಿಕರು ಎಂದು ವರದಿ ತೋರಿಸಿದೆ. ಗುರುವಾರ ವರದಿಯಾದ ಹೊಸ ಸಾವುಗಳಲ್ಲಿ ಈಜಿಪ್ಟ್‌ನಿಂದ 58 ಮಂದಿ ಇದ್ದಾರೆ. ಆ ದೇಶದಿಂದ ಸಾವಿಗೀಡಾದ 658 ಪೈಕಿ 630 ಮಂದಿ ನೋಂದಾಯಿಸದೇ ಇರುವ ಯಾತ್ರಿಕರು ಎಂದು ಅರಬ್ ರಾಜತಾಂತ್ರಿಕರು ಹೇಳಿದ್ದಾರೆ.

ವಾರ್ಷಿಕ ತೀರ್ಥಯಾತ್ರೆಯ ಸಮಯದಲ್ಲಿ ಸುಮಾರು 10 ದೇಶಗಳು 1,081 ಸಾವುಗಳನ್ನು ವರದಿ ಮಾಡಿದೆ. ಅಂಕಿಅಂಶಗಳು ಅಧಿಕೃತ ಹೇಳಿಕೆಗಳ ಮೂಲಕ ಅಥವಾ ತಮ್ಮ ದೇಶಗಳ ಪ್ರತಿಕ್ರಿಯೆಗಳ ಮೇಲೆ ಕೆಲಸ ಮಾಡುವ ರಾಜತಾಂತ್ರಿಕರಿಂದ ಬಂದಿವೆ ಎಂದು ಎಎಫ್​​ಪಿ ವರದಿ ಮಾಡಿದೆ.

ಹಜ್‌ನ ದಿನಾಂಕಗಳು ಮತ್ತು ಸಮಯವನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನಿಂದ ನಿರ್ಧರಿಸಲಾಗುತ್ತದೆ. ಈ ವಾರದ ಆರಂಭದಲ್ಲಿ, ಹವಾಮಾನ ಏಜೆನ್ಸಿಗಳು ಮೆಕ್ಕಾದ ಮಸೀದಿಯಲ್ಲಿ 51 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ವರದಿ ಮಾಡಿದೆ. ಕಳೆದ ತಿಂಗಳು ಪ್ರಕಟವಾದ ಸೌದಿ ಅಧ್ಯಯನದ ಪ್ರಕಾರ, ಈ ಪ್ರದೇಶದಲ್ಲಿ ತಾಪಮಾನವು ಪ್ರತಿ ದಶಕದಲ್ಲಿ 0.4 ಡಿಗ್ರಿ ಸೆಲ್ಸಿಯಸ್ ಏರುತ್ತಿದೆ.

ಈ ವರ್ಷ ಸೌದಿ ಅಧಿಕಾರಿಗಳು ನೂರಾರು ಸಾವಿರ ನೋಂದಾಯಿತ ಯಾತ್ರಾರ್ಥಿಗಳನ್ನು ಹಜ್‌ಗೆ ಕಳುಹಿಸಿದ್ದು,ಅವರಲ್ಲಿ ಹಲವರು ಸರಿಯಾದ ಪರವಾನಗಿಗಳಿಲ್ಲದೆ ತೀರ್ಥಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ. ನೋಂದಾಯಿಸದ ಯಾತ್ರಿಕರು ಹವಾನಿಯಂತ್ರಿತ ಪ್ರದೇಶಗಳು ಮತ್ತು ಇತರ ಸೌಲಭ್ಯಗಳಿಗೆ ಪ್ರವೇಶವನ್ನು ಹೊಂದಿಲ್ಲದ ಕಾರಣ, ಅವರು ಶಾಖದ ಅಲೆಗೆ ಹೆಚ್ಚು ಒಳಗಾಗುತ್ತಾರೆ.

“ಅರಾಫತ್ ದಿನದ ಮೊದಲು ಭದ್ರತಾ ಪಡೆಗಳು ಬೆನ್ನಟ್ಟಿದ ನಂತರ ಜನರು ಸುಸ್ತಾಗಿದ್ದರು. ಅವರು ದಣಿದಿದ್ದರು ಎಂದು ಅರಬ್ ರಾಜತಾಂತ್ರಿಕರು ತಿಳಿಸಿದ್ದಾರೆ. ತೀವ್ರವಾದ ತಾಪಮಾನ , ಇದು ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಹಿಗ್ಗುವಿಕೆ ಮತ್ತು ಇತರ ಸಮಸ್ಯೆಗಳಿಗಳು ಹೆಚ್ಚಿನ ಯಾತ್ರಿಕರ ಸಾವಿಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

ಇದನ್ನೂ ಓದಿ: Hajj Pilgrimage: ಹಜ್​ ಯಾತ್ರೆಗೆ ತೆರಳಿದ್ದ 68 ಮಂದಿ ಭಾರತೀಯರು ಸಾವು

ಈಜಿಪ್ಟ್ ಜೊತೆಗೆ, ಮಲೇಷ್ಯಾ, ಪಾಕಿಸ್ತಾನ, ಭಾರತ, ಜೋರ್ಡಾನ್, ಇಂಡೋನೇಷ್ಯಾ, ಇರಾನ್, ಸೆನೆಗಲ್, ಟುನೀಶಿಯಾ ಮತ್ತು ಇರಾಕ್‌ನ ಸ್ವಾಯತ್ತ ಕುರ್ದಿಸ್ತಾನ್ ಪ್ರದೇಶಗಳು ಸಹ ಸಾವುನೋವುಗಳನ್ನು ದೃಢಪಡಿಸಿವೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Thu, 20 June 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ