ಕಾಬೂಲ್: 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ (Afghanistan) ಬೀಡು ಬಿಟ್ಟಿದ್ದ ಅಮೆರಿಕ ಸೇನೆ (US Military Troops) ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ವಾಪಾಸಾಗಿದೆ. ಈ ಹಿನ್ನೆಲೆಯಲ್ಲಿ ಕಾಬೂಲ್ ಏರ್ಪೋರ್ಟ್ನಲ್ಲಿ (Kabul Airport) ತಾಲಿಬಾನ್ ಸಂಭ್ರಮಾಚರಣೆ ಮಾಡಿದೆ. ಹಲವು ತಿಂಗಳಿನಿಂದ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೈನಿಕರನ್ನು ಸ್ಥಳಾಂತರ ಮಾಡುತ್ತಿತ್ತು. ಕಾಬೂಲನ್ನು ತಾಲಿಬಾನ್ (Taliban) ವಶಪಡಿಸಿಕೊಂಡ ಬಳಿಕ ಆ. 31ರೊಳಗೆ ಅಮೆರಿಕದ ಸೈನಿಕರು ಅಫ್ಘಾನಿಸ್ತಾನವನ್ನು ತೊರೆಯಬೇಕೆಂದು ತಾಲಿಬಾನ್ ಗಡುವು ನೀಡಿತ್ತು. ಆ ಗಡುವು ಮುಗಿಯುವುದರೊಳಗೆ ಅಮೆರಿಕ ಸೈನಿಕ ಪಡೆ ಅಫ್ಘಾನಿಸ್ತಾನದಿಂದ ಕಾಲ್ಕಿತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ತನ್ನ ಸಂತೋಷವನ್ನು ಹಂಚಿಕೊಂಡಿರುವ ತಾಲಿಬಾನ್, ಅಮೆರಿಕದ ಸೋಲಿನಿಂದ ಬೇರೆ ದೇಶಗಳು ಕೂಡ ಪಾಠ ಕಲಿಯಲಿ. ಇದು ಇಡೀ ಅಫ್ಘಾನಿಸ್ತಾನಕ್ಕೆ ಸಂದ ಗೆಲುವು ಎಂದು ಘೋಷಿಸಿದೆ.
ಕಾಬೂಲ್ ವಿಮಾನ ನಿಲ್ದಾಣದ ರನ್ವೇ ತುಂಬ ಓಡಾಡಿ ಸಂಭ್ರಮಾಚರಣೆ ಮಾಡಿದ ತಾಲಿಬಾನ್ ನಾಯಕರು, ಈ ದಿಗ್ವಿಜಯ ಅಫ್ಘಾನಿಸ್ತಾನದ ಪ್ರತಿಯೊಬ್ಬರಿಗೂ ಸೇರಿದ್ದು. ನಾವು ಇಡೀ ಜಗತ್ತಿದಿನ ಎಲ್ಲ ದೇಶಗಳೊಂದಿಗೆ ಸೌಹಾರ್ದಯುತವಾದ ಸಂಬಂಧವನ್ನು ಹೊಂದಲು ಇಷ್ಟಪಡುತ್ತೇವೆ. ಅಫ್ಘಾನ್ನಲ್ಲಿ ಸೋಲನ್ನು ಅನುಭವಿಸಿ ವಾಪಾಸ್ ಹೋಗಿರುವ ಅಮೆರಿಕದಿಂದ ಇಡೀ ಜಗತ್ತು ಪಾಠ ಕಲಿತಿದೆ ಎಂದು ಭಾವಿಸುತ್ತೇವೆ. ಇದು ನಾವು ಸಂಭ್ರಮಿಸಲೇಬೇಕಾದ ಗೆಲುವಾಗಿದೆ ಎಂದು ಹೇಳಿದ್ದಾರೆ.
U.S. service members have officially completed the largest non-combatant evacuation in U.S. military history – evacuating more than 122,000 people from Afghanistan since the end of July. The women and men who completed this mission have ended America’s longest war. pic.twitter.com/z4fsStXUYz
— The White House (@WhiteHouse) August 30, 2021
ಕಾಬೂಲ್ನ ಖಾಲಿ ಏರ್ಫೀಲ್ಡ್ನಲ್ಲಿ ನಿಂತು ಫೋಟೋ ತೆಗೆಸಿಕೊಂಡ ತಾಲಿಬಾನ್ ನಾಯಕರು ತಮ್ಮ ವಿಜಯವನ್ನು ಜಗತ್ತಿಗೆ ಸಾರಿದ್ದಾರೆ. ಈ ಮೂಲಕ 2 ದಶಕಗಳ ಯುದ್ಧದಿಂದ ಅಮೆರಿಕ ಹಿಂದೆ ಸರಿದಿದೆ. 2001ರಲ್ಲಿ ಅಮೆರಿಕದ ಅವಳಿ ಕಟ್ಟಡದ ಮೇಲೆ ಅಲ್ಖೈದಾ ಉಗ್ರರು ದಾಳಿ ನಡೆಸಿದಾಗ ಒಸಾಮಾ ಬಿನ್ ಲಾಡೆನ್ ಹಾಗೂ ಉಗ್ರ ಸಂಘಟನೆಗಳ ಮೇಲೆ ತಿರುಗಿ ಬಿದ್ದಿದ್ದ ಅಮೆರಿಕ ಅಫ್ಘಾನಿಸ್ತಾನದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿತ್ತು. ಅಲ್ಲದೆ, ತಾಲಿಬಾನ್ ಉಗ್ರರ ವಿರುದ್ಧ ಸಮರ ಸಾರಿತ್ತು. ತಾಲಿಬಾನ್ ಉಗ್ರರನ್ನು ಅಫ್ಘಾನಿಸ್ತಾನದಿಂದ ಹೊಡೆದೋಡಿಸಿ, ಅವರು ಮತ್ತೆ ಅಫ್ಘಾನ್ ಪ್ರವೇಶ ಮಾಡದಂತೆ 2 ದಶಕಗಳ ಕಾಲ ಕಾವಲು ಕಾದಿತ್ತು. ಆದರೆ, ಇಂಚಿಂಚಾಗಿ ಅಫ್ಘಾನಿಸ್ತಾನವನ್ನು ಆವರಿಸಿಕೊಳ್ಳತೊಡಗಿದ ತಾಲಿಬಾನ್ ಉಗ್ರರು ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ಪಡೆದ ಬಳಿಕ ಅಫ್ಘಾನ್ ಸರ್ಕಾರ ತಾಲಿಬಾನ್ಗೆ ಶರಣಾಗಿತ್ತು. ಬಳಿಕ, ಅಮೆರಿಕ ಸೇನೆಗೆ ವಾಪಾಸ್ ಹೋಗಲು ಆ. 31ರವರೆಗೆ ತಾಲಿಬಾನ್ ಗಡುವು ನೀಡಿತ್ತು. ಕೊನೆಗೂ ಗಡುವಿಗೂ ಮೊದಲೇ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ಹೊರ ನಡೆದಿದೆ.
#Taliban fighters enter a hangar in #Kabul Airport and examine #chinook helicopters after #US leaves #Afghanistan. pic.twitter.com/flJx0cLf0p
— Nabih (@nabihbulos) August 30, 2021
ಅಫ್ಘಾನ್ ತೊರೆಯುವ ಮುನ್ನ ಅಮೆರಿಕದ ಸೇನಾಪಡೆ ಅಫ್ಘಾನ್ನಲ್ಲಿದ್ದ ತಮಗೆ ಸೇರಿದ ಎಲ್ಲ ಯುದ್ಧ ವಿಮಾನಗಳು, ಶಸ್ತ್ರಸಜ್ಜಿತ ವಾಹನಗಳನ್ನು ನಿಷ್ಕ್ರಿಯಗೊಳಿಸಿದೆ. ಇನ್ನು ಆ ಯುದ್ಧ ವಿಮಾನಗಳು ಹಾರಾಟ ನಡೆಸುವುದಿಲ್ಲ ಎಂದು ಅಮೆರಿಕ ಸೇನೆ ಘೋಷಿಸಿದೆ. ಇದರಿಂದ ಅಮೆರಿಕದ ಸೈನಿಕರು ಬಿಟ್ಟು ಹೋದ ವಿಮಾನಗಳು, ಹೈಟೆಕ್ ರಾಕೆಟ್ಗಳನ್ನು ತಾಲಿಬಾನ್ ಬಳಸಲು ಸಾಧ್ಯವಾಗದಂತಾಗಿದೆ.
ಇದನ್ನೂ ಓದಿ: ಡೆಡ್‌ಲೈನ್‌ಗೂ 24 ತಾಸು ಮುನ್ನವೇ ಜಾಗ ಖಾಲಿ ಮಾಡಿದ ಅಮೆರಿಕಾ ಸೇನೆ, ತಾಲಿಬಾನಿಗಳ ಕೈಗೆ ಅಫ್ಘಾನಿಸ್ತಾನ್
ಭಾರತ- ಪಾಕಿಸ್ತಾನದ ಜಗಳದಲ್ಲಿ ಅಫ್ಘಾನಿಸ್ತಾನವನ್ನು ಎಳೆದು ತರಬೇಡಿ; ತಾಲಿಬಾನ್ ಸೂಚನೆ
(Taliban declare victory at Kabul airport after US Troops Leave Afghanistan says world should have learnt their lesson)
Published On - 1:28 pm, Tue, 31 August 21