ಅಫ್ಘಾನಿಸ್ತಾನ ಸರ್ಕಾರದ ಮಾಧ್ಯಮ-ಮಾಹಿತಿ ಕೇಂದ್ರದ ಉನ್ನತಾಧಿಕಾರಿಯನ್ನು ಹತ್ಯೆಗೈದ ತಾಲಿಬಾನ್ ಉಗ್ರರು..

| Updated By: Lakshmi Hegde

Updated on: Aug 06, 2021 | 4:51 PM

ಇತ್ತೀಚೆಗೆ ತಾಲಿಬಾನ್​ನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಕಾದಾಟ ಹೆಚ್ಚಾಗಿದೆ. ಹಿಂಸಾಚಾರವೂ ಮಿತಿಮೀರಿದೆ. ಉಗ್ರರಿಂದ ರಾಕೆಟ್​ ದಾಳಿ ಅದಕ್ಕೆ ಪ್ರತಿಯಾಗಿ ವಾಯುಸೇನೆಗಳ ಏರ್​ಸ್ಟ್ರೈಕ್​ ನಡೆಯುತ್ತಲೇ ಇದೆ.

ಅಫ್ಘಾನಿಸ್ತಾನ ಸರ್ಕಾರದ ಮಾಧ್ಯಮ-ಮಾಹಿತಿ ಕೇಂದ್ರದ ಉನ್ನತಾಧಿಕಾರಿಯನ್ನು ಹತ್ಯೆಗೈದ ತಾಲಿಬಾನ್ ಉಗ್ರರು..
ಮೃತ ಅಧಿಕಾರಿ
Follow us on

ಕಾಬೂಲ್​: ಅಫ್ಘಾನಿಸ್ತಾನ ಸರ್ಕಾರ (Afghanistan Government)ದ ಉನ್ನತ ಮಾಧ್ಯಮ ಮತ್ತು ಮಾಹಿತಿ ಅಧಿಕಾರಿಯನ್ನು ಕಾಬೂಲ್​​ನಲ್ಲಿ, ತಾಲಿಬಾನ್​ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಭಯೋತ್ಪಾದಕ ಸಂಘಟನೆಯ ವಕ್ತಾರ ತಿಳಿಸಿದ್ದಾರೆ. ಸರ್ಕಾರದ ಮಾಧ್ಯಮ ಮತ್ತು ಮಾಹಿತಿ ಕೇಂದ್ರ (GMIC) ಮುಖ್ಯಸ್ಥ ದವಾ ಖಾನ್​ ಮಿನಪಾಲ್​ ಹತ್ಯೆಯಾದ ಅಧಿಕಾರಿಯಾಗಿದ್ದಾರೆ. ಇವರು ಹತ್ಯೆಯಾಗಿದ್ದನ್ನು ಫೆಡರಲ್​ ಇಂಟೀರಿಯರ್​ ಸಚಿವಾಲಯ ಕೂಡ ದೃಢಪಡಿಸಿದೆ. ಆದರೆ ಹತ್ಯೆ ಮಾಡಿದ್ದು ಯಾರು ಎಂಬುದನ್ನು ಸಚಿವಾಲಯ ತಿಳಿಸಿಲ್ಲ.

ಮಿನಪಾಲ್​ ಅವರು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್​ ಘನಿ ಅವರ ವಕ್ತಾರರಾಗಿಯೂ ಕೆಲಸ ಮಾಡಿದ್ದರು. ಮಿನಪಾಲ್​ ಇನ್ನೂ ಯುವಕನಾಗಿದ್ದು, ಶತ್ರುಗಳಿಗೆ ಸದಾ ದುಃಸ್ವಪ್ನದಂತೆ ಇದ್ದರು. ಅಫ್ಘಾನ್​ ಸರ್ಕಾರದ ಪ್ರಮುಖ ಬೆಂಬಲಿಗರಲ್ಲಿ ಒಬ್ಬರಾಗಿದ್ದರು ಎಂದು ಆಂತರಿಕ ಸಚಿವಾಲಯದ ವಕ್ತಾರ, ಮಿರ್ವೈಸ್​ ಸ್ಟಾನಿಕ್​ಜಾಯ್ ಹೇಳಿದ್ದಾರೆ.

ಇತ್ತೀಚೆಗೆ ತಾಲಿಬಾನ್​ನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಕಾದಾಟ ಹೆಚ್ಚಾಗಿದೆ. ಹಿಂಸಾಚಾರವೂ ಮಿತಿಮೀರಿದೆ. ಉಗ್ರರಿಂದ ರಾಕೆಟ್​ ದಾಳಿ ಅದಕ್ಕೆ ಪ್ರತಿಯಾಗಿ ವಾಯುಸೇನೆಗಳ ಏರ್​ಸ್ಟ್ರೈಕ್​ ನಡೆಯುತ್ತಲೇ ಇದೆ. ಉದಾರವಾದ ಇಸ್ಲಾಮಿಕ್​ ಆಡಳಿತ ಬೆಂಬಲಿಸುವ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತರು, ಅಧಿಕಾರಶಾಹಿಗಳು, ನ್ಯಾಯಾಧೀಶರು ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ತಾಲಿಬಾನ್​ ಉಗ್ರರು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ, ಮೈದಾನ್ ವಾರ್ಡಕ್ ಪ್ರಾಂತ್ಯದ ಸಯ್ಯದ್ ಜಿಲ್ಲಾ ಗವರ್ನರ್​​ನನ್ನೂ ಕೂಡ ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳುವ ಹಾಗೆ ರಾಮಮಂದಿರದ ಲೋಕಾರ್ಪಣೆ 2023 ರಲ್ಲಿ ಆಗುತ್ತದೆಯೇ?

57 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ ವೇಳೆಯೇ ಕೈಕೊಟ್ಟ ಮೋಟಾರ್! ಅಧಿಕಾರಿಗಳ ವಿರುದ್ಧ ಎಚ್ ಡಿ ರೇವಣ್ಣ ಗರಂ