57 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ ವೇಳೆಯೇ ಕೈಕೊಟ್ಟ ಮೋಟಾರ್! ಅಧಿಕಾರಿಗಳ ವಿರುದ್ಧ ಎಚ್ ಡಿ ರೇವಣ್ಣ ಗರಂ
ನೀವು ವರ್ಷಗಳ ಹಿಂದೆಯೇ ಕಾಮಗಾರಿ ಮುಗಿಸಬೇಕಿತ್ತು. ಯಾಕೆ ಹೀಗೆ ಮಾಡಿದ್ದೀರಾ ಎಂದು ಗೊತ್ತಿದೆ ಎಂದು ಅವರು ಜೋರಾದ ನಂತರ, ತಡಬಡಾಯಿಸಿ ಇಂಜಿನಿಯರ್ಗಳು ಹಾಗೂಹೀಗೂ ಮಾಡಿ ಮೋಟರ್ ಆನ್ ಆಗುವಂತೆ ಮಾಡಿದ್ದಾರೆ.
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗ್ರಾಮದಲ್ಲಿ ಏತ ನೀರಾವರಿ ಯೋಜನೆ ಉದ್ಘಾಟನೆ ವೇಳೆ ಮೋಟರ್ ಕೈಕೊಟ್ಟು ಉದ್ಘಾಟನೆಗೆ ಆಗಮಿಸಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಗರಂ ಆದ ಘಟನೆ ನಡೆದಿದೆ. ಇಂದು 57 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗಮಿಸಿದ್ದರು. ಈ ವೇಳೆ ಮೂರು ಬಾರಿ ಸ್ವಿಚ್ ಒತ್ತಿದರೂ ಯಂತ್ರ ಆನ್ ಆಗಿಲ್ಲ. ಇದರಿಂದ ಮಾಜಿ ಸಚಿವ ಎಚ್.ಡಿ.ರೇವಣ್ಣ ಗರಂ ಆಗಿದ್ದಾರೆ. ನೀವು ವರ್ಷಗಳ ಹಿಂದೆಯೇ ಕಾಮಗಾರಿ ಮುಗಿಸಬೇಕಿತ್ತು. ಯಾಕೆ ಹೀಗೆ ಮಾಡಿದ್ದೀರಾ ಎಂದು ಗೊತ್ತಿದೆ ಎಂದು ಅವರು ಜೋರಾದ ನಂತರ, ತಡಬಡಾಯಿಸಿ ಇಂಜಿನಿಯರ್ಗಳು ಹಾಗೂಹೀಗೂ ಮಾಡಿ ಮೋಟರ್ ಆನ್ ಆಗುವಂತೆ ಮಾಡಿದ್ದಾರೆ.
ಬಿಜೆಪಿ ಹಿರಿಯ ನಾಯಕ ಸಂಸದ ವಿ ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರು ಹಿರಿಯ ರಾಜಕಾರಣಿ, ಅವರ ಬಗ್ಗೆ ಗೌರವ ಇದೆ. ರಾಜ್ಯದ ಹಿತದೃಷ್ಟಿಯಿಂದ, ಚಾಮರಾಜನಗರ, ಮೈಸೂರು ಜಿಲ್ಲೆಯ ಹಿತದಿಂದ ಅವರು ಮುಂದುವರೆಯುವುದು ಒಳ್ಲೆಯದು. ಆದರೆ ಆರೋಗ್ಯ ವಿಚಾರ ಬೇರೆ, ದೇವೇಗೌಡರು 89 ವರ್ಷ ಆದರೂ ಕೆಲಸ ಮಾಡುತ್ತಿಲ್ಲವೇ? ಆದ್ದರಿಂದ ಅವರು ರಾಜಕೀಯ ವಾಗಿ ಮುಂದುವರೆದು ಕೆಲಸ ಮಾಡಲಿ ಎಂದರು.
ಇದನ್ನೂ ಓದಿ:
Corona Vaccine Shortage: ಕೊವಿಡ್ ಲಸಿಕೆ ಸಿಗದೆ ರೊಚ್ಚಿಗೆದ್ದ ಸಾರ್ವಜನಿಕರು, ಹಾಸನ ಡಿಸಿ ಮನೆಗೆ ಮುತ್ತಿಗೆ
ಹಾಸನ: ಒಂದೇ ಕಾಲೇಜಿನ ಕೇರಳ ಮೂಲದ 21 ವಿದ್ಯಾರ್ಥಿನಿಯರಿಗೆ ಕೊವಿಡ್ ದೃಢ
(HD Ravanna fire against the authorities in Hassan)
Published On - 4:11 pm, Fri, 6 August 21