ಅಫಘಾನಿಸ್ತಾನವನ್ನು ವಶಡಿಸಿಕೊಂಡ ಬಳಿಕ ತಾಲಿಬಾನ್ ಬಂಡುಕೋರ ಸಂಘಟನೆಯ ನಾಯಕರು ಮಂಗಳವಾರ ಮೊಟ್ಟ ಮೊದಲ ಸುದ್ದಿಗೋಷ್ಟಿಯೊಂದನ್ನು ದೇಶದ ರಾಜಧಾನಿ ಕಾಬೂಲ್ನಲ್ಲಿ ನಡೆಸಿದರು. ಆಪಘಾನಿಸ್ತಾನದಲ್ಲಿರುವ ಬೇರೆ ದೇಶದ ರಾಯಭಾರಿ ಕಚೇರಿಗಳು, ಡಿಪ್ಲೊಮ್ಯಾಟ್ಗಳು ಹೆದರುವ ಅವಶ್ಯಕತೆಯಿಲ್ಲ, ಎಲ್ಲ ರಾಯಭಾರಿ ಕಚೇರಿಗಳಿಗೆ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಸುದ್ದಿಗಾರರನ್ನು ಉದ್ದೇಶಿಸಿ ತಾಲಿಬಾನ್ ಬಾತ್ಮೀದಾರ ಜಬಿಯುಲ್ಲಾ ಮುಜಾಹಿದ್, ವಿದೇಶೀ ರಾಯಭಾರಿ ಕಚೇರಿಗಳಿಗೆ ಭದ್ರತೆ ಒದಗಿಸುವುದು ಆದ್ಯತೆಯಾಗಿದೆ ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ವರ್ಗದ ಸಂಪೂರ್ಣ ಸುರಕ್ಷತೆ ತಮಗೆ ಪ್ರಾಮುಖ್ಯತೆಯ ವಿಷಯವಾಗಿದೆ ಎಂದು ಹೇಳಿದರು, ಎಂದು ಅಫಘಾನಿಸ್ತಾನದ ಟೆಲಿವಿಷನ್ ನ್ಯೂಸ್ ಚ್ಯಾನೆಲ್ ಟೊಲೊ ನ್ಯೂಸ್ ವರದಿ ಮಾಡಿದೆ.
ಯಾವುದೇ ದೇಶದೊಂದಿಗೆ ತಮಗೆ ವೈರತ್ವ ಇಲ್ಲ ಮತ್ತು ಎಲ್ಲರನ್ನು ಕ್ಷಮಿಸಲಾಗಿದೆ ಅಂತ ಜಬಿಯುಲ್ಲಾ ಮುಜಾಹಿದ್ ಹೇಳರಿರುವರೆಂದು ವರದಿಯಾಗಿದೆ.
Mujahid says they have pardoned everyone and will not take revenge against anyone, including former military members and those who worked with the foreign forces. "No one will search their house," Mujahid says. pic.twitter.com/JGE6jTgzRN
— TOLOnews (@TOLOnews) August 17, 2021
ಇದಕ್ಕೆ ಮೊದಲು, ಅಫಘಾನಿಸ್ತಾನದ ಜನರು ಹೆದರುವ ಕಾರಣವಿಲ್ಲ, ಎಲ್ಲರನ್ನೂ ಕ್ಷಮಿಸಲಾಗಿದೆ, ನಮಗೆ ವಿನಾಕಾರಣ ಹೆದರಿ ದೇಶ ಬಿಟ್ಟು ಹೋಗುವ ಕೆಲಸವನ್ನು ಯಾರೂ ಮಾಡಬಾರದು ಎಂದು ಘೋಷಣೆ ಮಾಡಿದ ತಾಲಿಬಾನ್ ನಾಯಕರು ಮಹಿಳೆಯರಿಗೆ ತಮ್ಮ ಸರ್ಕಾರವನ್ನು ಸೇರುವಂತೆ ಆಗ್ರಹಿಸಿದರು.
ಮಹಿಳೆಯರು ಸರ್ಕಾರವನ್ನು ಸೇರಿದ್ದೇಯಾದರೆ, ಜನರಲ್ಲಿ ಅದರಲ್ಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಮನೆ ಮಾಡಿರುವ ಭಯ ಹೊರಟು ಹೋಗುತ್ತದೆ, ಮತ್ತು ದೇಶ ಬಿಟ್ಟು ಪಲಾಯನಗೈಯುತ್ತಿರುವ ಸಹಸ್ರಾರು ಜನ ತಮ್ಮ ಮನಸ್ಸು ಬದಲಿಸಿ ದೇಶದಲ್ಲೇ ನೆಲೆಸುವ ನಿರ್ಧಾರಕ್ಕೆ ಬರುತ್ತಾರೆ ಎಂದರು.
ಇಸ್ಲಾಮಿಕ್ ಕಟ್ಟಳೆಗಳ ವ್ಯಾಪ್ತಿಯಲ್ಲೇ ತಾಲಿಬಾನ್ ಮಹಿಳೆಯರು ಮತ್ತು ಅವರ ಹಕ್ಕುಗಳನ್ನು ಗೌರವಿಸುತ್ತದೆ ಎಂದು ಮುಜಾಹಿದ್ ಹೇಳಿದರು. ತಾಲಿಬಾನ್ ಸಾಂಸ್ಕೃತಿಕ ಆಯೋಗದ ಸದಸ್ಯ ಇನಾಮುಲ್ಲಾ ಸಮಾನ್ಗನಿ ಅವರು ಮಂಗಳವಾರ ಬೆಳಗ್ಗೆ ಮಹಿಳೆಯರಿಗೆ ಸರ್ಕಾರದ ಭಾಗವಾಗುವಂತೆ ನೀಡಿದ ಆಹ್ವಾನವನ್ನು ಪುನರುಚ್ಛರಿಸಿದ ಮುಜಾಹಿದ್, ಮಹಿಳೆಯರು ನಿರ್ಭೀತಿಯಿಂದ ಸರ್ಕಾರ ಸೇರಲು ಮುಂದಾಗಬೇಕು ಎಂದರು.
ಅಫಘಾನಿಸ್ತಾನದಲ್ಲಿ ಒಂದು ಇಸ್ಲಾಮಿಕ್ ಸರ್ಕಾರ ಪ್ರತಿಷ್ಠಾಪನೆಗೊಳ್ಳುವುದು ಸಾಧ್ಯವಾಗುವ ಹಾಗೆ ಏರ್ಪಾಟುಗಳನ್ನು ಮಾಡಲಾಗುವುದು ಎಂದು ಮುಜಾಹಿದ್ ಹೇಳಿದರೆಂದು ಚ್ಯಾನೆಲ್ ವರದಿ ಮಾಡಿದೆ.
ಇದನ್ನೂ ಓದಿ: ತಾಲಿಬಾನ್ನಿಂದ ನಿರ್ವಹಿಸಲ್ಪಡುವ, ಉಗ್ರಸಂಘಟನೆಗೆ ಬೆಂಬಲ ಸೂಚಿಸುವ ಖಾತೆಗಳನ್ನು ನಿಷೇಧಿಸುವುದಾಗಿ ಫೇಸ್ಬುಕ್ ಘೋಷಣೆ
Published On - 12:17 am, Wed, 18 August 21