ಆ ಚಟ ಬಿಡುವುದು ಹುಡುಗರಿಗಿಂತ ಹುಡುಗಿಯರಿಗೆ ಕಷ್ಟ, ಕಷ್ಟವಾಗಿದೆ! ಇತ್ತೀಚಿನ ಸಮೀಕ್ಷೆಯಲ್ಲಿ ಸಂಚಲನಾತ್ಮಕ ಸಂಗತಿ
ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ಫೇಸ್‌ಬುಕ್, ಟಿಕ್ ಟಾಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳ ಸಹವಾಸಕ್ಕೆ ಬಿದ್ದಿರುವ ಮಂದಿ ತುಂಬಾ ಸಮಯವನ್ನು ಅವುಗಳಲ್ಲೇ ಕಳೆಯುತ್ತಿದ್ದಾರೆ. ಹಲವರಿಗೆ ಚಟವಾಗಿ ಪರಿಣಮಿಸಿಬಿಟ್ಟಿದೆ.
Social Media Addiction: ಬೆಡ್ ರೂಮ್ಗೆ ಪ್ರವೇಶಿಸಿರುವ ಸೆಲ್ಫೋನ್ ಮೂಲಕ ಸಾಮಾಜಿಕ ಜಾಲತಾಣಗಳು ಇಂದಿನ ಇಂಟರ್ನೆಟ್ ಯುಗದಲ್ಲಿ ಚಟವಾಗಿ ಮಾರ್ಪಟ್ಟಿದೆ. ಇಂದಿನ ದಿನಮಾನಗಳಲ್ಲಿ ಚಿಕ್ಕವರು, ಹಿರಿಯರು ಎನ್ನದೇ ಎಲ್ಲರೂ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಮಾಹಿತಿಯನ್ನು ಹಂಚಿಕೊಳ್ಳುವುದರ ಜೊತೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ ಕ್ರೇಜ್‌ನೊಂದಿಗೆ, ಬಳಕೆ ಮಾಡುತ್ತಿದ್ದಾರೆ. ಮೊಬೈಲ್ ಜೀವನದಲ್ಲಿ ಅತ್ಯಗತ್ಯ ಭಾಗವಾಗಿದೆ, ಸಾಧನವಾಗಿದೆ. ಪ್ರತಿಯೊಬ್ಬರೂ ಫೇಸ್‌ಬುಕ್, ಟಿಕ್ ಟಾಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ತಲ್ಲೀನರಾಗಿದ್ದಾರೆ. ಇವು ಈಗ ಹಲವರಿಗೆ ಚಟವಾಗಿ ಪರಿಣಮಿಸಿವೆ. ಇಂತಹ ಸಂದರ್ಭದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.. ಫೇಸ್ ಬುಕ್, ಟಿಕ್ ಟಾಕ್, ಇನ್ ಸ್ಟಾಗ್ರಾಂ, ಯೂಟ್ಯೂಬ್ ನಂತಹ ಪ್ಲಾಟ್ ಫಾರ್ಮ್ ಗಳನ್ನು ತ್ಯಜಿಸುವುದು ಕಷ್ಟಕರವಾಗಿರುವುದು ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಯುಎಸ್‌ಎ ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಸಮೀಕ್ಷೆಯ ಪ್ರಕಾರ, ಹದಿಹರೆಯದ ಹುಡುಗಿಯರು ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟರ್, ಟಿಕ್ ಟಾಕ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಬಿಡುವುದು ಕಷ್ಟ ಕಷ್ಟ ಎಂದು ನಿಸ್ಸಂದಿಗ್ಧವಾಗಿ ಹೇಳುತ್ತಾರೆ. ಹುಡುಗರಿಗಿಂತ ಹುಡುಗಿಯರು ಇವನ್ನು ಬಿಡುವುದಕ್ಕೆ ಹೆಚ್ಚು ಆಕ್ಷೇಪಿಸಿದರು. ಸಾಮಾಜಿಕ ಮಾಧ್ಯಮವನ್ನು ತ್ಯಜಿಸುವ ಆಲೋಚನೆಯ ಬಗ್ಗೆ ಕೇಳಿದಾಗ, 54 ಪ್ರತಿಶತ ಹದಿಹರೆಯದವರು ಅದನ್ನು ಬಿಟ್ಟುಕೊಡುವುದು ಕಷ್ಟವೇ ಸರಿ ಎಂದಿದ್ದಾರೆ. ಉಳಿದ ಶೇ. 46ರಷ್ಟು ಜನ ನೋ ಪ್ರಾಬ್ಲಮ್ ಎಂದು ಉತ್ತರಿಸಿದ್ದಾರೆ.
ಹುಡುಗಿಯರಿಗೇ ಹೆಚ್ಚು ಕಷ್ಟ… ಹದಿಹರೆಯದ ಹುಡುಗರಿಗಿಂತ ಹದಿಹರೆಯದ ಹುಡುಗಿಯರು ಸಾಮಾಜಿಕ ಮಾಧ್ಯಮವನ್ನು ತೊರೆಯಲು ಕಷ್ಟ ವ್ಯಕ್ತಪಡಿಸುತ್ತಾರೆ ಎಂದು ಸಮೀಕ್ಷೆಯ ಫಲಿತಾಂಶಗಳು ತೋರಿಸಿವೆ. ಅದು ಶೇ. 58 ವರ್ಸಸ್ ಶೇ 49 ದಷ್ಟಿದೆ. ಇದಕ್ಕೆ ವ್ಯತಿರಿಕ್ತವಾಗಿ, ಹದಿಹರೆಯದ ಹುಡುಗರಲ್ಲಿ ಕಾಲು ಭಾಗದಷ್ಟು ಜನರು ಸಾಮಾಜಿಕ ಮಾಧ್ಯಮವನ್ನು ತ್ಯಜಿಸುವುದು ಸುಲಭ ಎಂದು ಹೇಳಿದ್ದಾರೆ. ಇದಕ್ಕೆ ಶೇಕಡಾ 15ರಷ್ಟು ಹದಿಹರೆಯದ ಹುಡುಗಿಯರು ಮಾತ್ರ ದನಿಗೂಡಿಸಿದ್ದಾರೆ.
“ಎಲ್ಲಾ ಯುವಜನರು ಸಹ ಸಾಮಾಜಿಕ ಮಾಧ್ಯಮವನ್ನು ತ್ಯಜಿಸುವುದು ತುಂಬಾ ಕಷ್ಟ ಎಂದು ಹೇಳುತ್ತಾರೆ. 15 ರಿಂದ 17 ವರ್ಷ ವಯಸ್ಸಿನ ಹದಿಹರೆಯದವರ ಪೈಕಿ ಹತ್ತುಮಂದಿಯಲ್ಲಿ ಆರು ಮಂದಿ ಸಾಮಾಜಿಕ ಮಾಧ್ಯಮವನ್ನು ತ್ಯಜಿಸುವುದು ಸ್ವಲ್ಪ ಕಷ್ಟ ಎಂದು ಹೇಳುತ್ತಾರೆ. 13 ರಿಂದ 14 ವರ್ಷ ವಯಸ್ಸಿನವರು ಸಹ ಕಷ್ಟ ಎನ್ನುತ್ತಾರೆ” ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.
ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಕಳೆದ ಸಮಯವನ್ನು ಪ್ರತಿಬಿಂಬಿಸುವಾಗ, ಅಮೆರಿಕದ ಹದಿಹರೆಯದವರಲ್ಲಿ ಹೆಚ್ಚಿನವರು (55 ಪ್ರತಿಶತ) ಅವರು ಈ ಇಂಟರ್ನೆಟ್ ಅಪ್ಲಿಕೇಶನ್‌ಗಳು ಮತ್ತು ಸೈಟ್‌ಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಆದರೆ ಮೂರನೇ ಒಂದು ಭಾಗದಷ್ಟು ಹದಿಹರೆಯದವರು (36 ಪ್ರತಿಶತ) ಅವರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ ಎಂದು ಹೇಳುತ್ತಾರೆ.
ಬಹುಪಾಲು ಯುವ ವಯಸ್ಕರು ಕೇವಲ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಮೀರಿ ಸ್ಮಾರ್ಟ್ ಫೋನ್‌ಗಳು (95 ಪ್ರತಿಶತ), ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳು (90 ಪ್ರತಿಶತ), ಮತ್ತು ಗೇಮಿಂಗ್ ಕನ್ಸೋಲ್‌ಗಳಂತಹ (80 ಪ್ರತಿಶತ) ಡಿಜಿಟಲ್ ಸಾಧನಗಳಲ್ಲಿ ತಲ್ಲೀನರಾಗಿಬಿಟ್ಟಿದ್ದಾರೆ.
ದೈನಂದಿನ ಹದಿಹರೆಯದ ಇಂಟರ್ನೆಟ್ ಬಳಕೆದಾರರ ಸಂಖ್ಯೆ 2014-15 ರಲ್ಲಿ ಶೇಕಡಾ 92 ರಷ್ಟು ಇದ್ದಿದ್ದು, ಇಂದು ಶೇಕಡಾ 97 ಕ್ಕೆ ಏರಿದೆ ಎಂದು ಅಧ್ಯಯನವು ತೋರಿಸುತ್ತದೆ. ಹೆಚ್ಚುವರಿಯಾಗಿ, 2014-15 ರಿಂದ ತಾವು ಆನ್‌ಲೈನ್‌ನಲ್ಲಿದ್ದೇವೆ ಎಂದು ಹೇಳುವ ಹದಿಹರೆಯದವರ ಸಂಖ್ಯೆ ಬಹುತೇಕ ದ್ವಿಗುಣಗೊಂಡಿದೆ.
ಕಳೆದ ಎಂಟು ವರ್ಷಗಳಲ್ಲಿ ಹದಿಹರೆಯದವರು ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಹೆಚ್ಚಿಸಿದ್ದರೆ, ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳು ಅಥವಾ ಗೇಮಿಂಗ್ ಕನ್ಸೋಲ್‌ಗಳಂತಹ ಇತರ ಡಿಜಿಟಲ್ ತಂತ್ರಜ್ಞಾನಗಳ ಬಳಕೆಯಲ್ಲಿ ಅವರ ಸಂಖ್ಯೆ ಬದಲಾಗದೆ ಉಳಿದಿದೆ ಎಂದು ಸಮೀಕ್ಷೆ ಹೇಳಿದೆ.
To read more in telugu click here
Published On - 6:05 pm, Mon, 15 August 22