AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಕಿಹಾಕಿಕೊಳ್ಳುವ ಭಯದಿಂದ ಕೊರಿಯನ್​ ರೀತಿ ಮುಖ ಬದಲಿಸಿಕೊಂಡಿದ್ದರೂ ಪೊಲೀಸರ ಬಲೆಗೆ ಬಿದ್ದ ಥೈಲ್ಯಾಂಡ್ ಡ್ರಗ್ ಡೀಲರ್

ಥೈಲ್ಯಾಂಡ್​ನ ಡ್ರಗ್ ಡೀಲರ್​ ಒಬ್ಬ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳಬಾರದೆಂದು ಮುಖಕ್ಕೆ ಎರಡು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿ, ಕೊರಿಯನ್ ರೀತಿ ಬದಲಾಯಿಸಿಕೊಂಡಿದ್ದರೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸಿಕ್ಕಿಹಾಕಿಕೊಳ್ಳುವ ಭಯದಿಂದ ಕೊರಿಯನ್​ ರೀತಿ ಮುಖ ಬದಲಿಸಿಕೊಂಡಿದ್ದರೂ ಪೊಲೀಸರ ಬಲೆಗೆ ಬಿದ್ದ ಥೈಲ್ಯಾಂಡ್ ಡ್ರಗ್ ಡೀಲರ್
ಬಂಧನ
ನಯನಾ ರಾಜೀವ್
|

Updated on: Mar 01, 2023 | 10:17 AM

Share

ಥೈಲ್ಯಾಂಡ್​ನ ಡ್ರಗ್ ಡೀಲರ್​ ಒಬ್ಬ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳಬಾರದೆಂದು ಮುಖಕ್ಕೆ ಎರಡು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿ, ಕೊರಿಯನ್ ರೀತಿ ಬದಲಾಯಿಸಿಕೊಂಡಿದ್ದರೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಳ್ಳ ಚಾಪೆ ಕೆಳಗೆ ನುಗ್ಗಿದ್ರೆ ಪೊಲೀಸರು ರಂಗೋಲಿ ಕೆಳಗೆ ನುಗ್ಗಿದ್ದಾರೆ, ಆತ ಎಷ್ಟೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರೂ ಪೊಲೀಸರು ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬ್ಯಾಂಕಾಂಗ್​ನ ಅಪಾರ್ಟ್​ಮೆಂಟ್​ ಒಂದರಲ್ಲಿ ಸಿಕ್ಕಿಬಿದ್ದಿದ್ದು, ಕ್ಲಾಸ್​ ಒನ್ ಡ್ರಗ್ ಆಮದು ಮಾಡಿಕೊಳ್ಳುವ ಹಾಗೂ ಎಕ್ಸ್​ಟಸಿ ಹೊಂದಿರುವ ಆರೋಪ ಹೊರಿಸಲಾಗಿದೆ. ಸಹರತ್ ಸಾವಾಂಗ್‌ಜೆಂಗ್ ಎಂಬಾತ ಕೊರಿಯಾದ ಸಿಯೋಂಗ್ ಜಿಮಿನ್ ಎಂಬ ಹೆಸರನ್ನು ಬಳಸಿಕೊಂಡು ತನ್ನ ನಿಜವಾದ ಗುರುತನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದ, ಶಸ್ತ್ರಚಿಕಿತ್ಸೆ ಬಳಿಕ ಮುಖವು ಗುರುತಿಸಲಾಗದಷ್ಟು ಬದಲಾಗಿತ್ತು.

ಮತ್ತಷ್ಟು ಓದಿ:ಮುಳಬಾಗಿಲಲ್ಲಿ ತಲೆ ಎತ್ತಲಿದ್ದ ಡ್ರಗ್ಸ್ ಮಾಫಿಯಾ ಚೆನ್ನೈ ಪೊಲೀಸರ ಸಕಾಲಿಕ ಮಾಹಿತಿಯಿಂದ ಛಿದ್ರ ಛಿದ್ರ! 7 ಆರೋಪಿಗಳ ಬಂಧನ, ಕಿಂಗ್ ಪಿನ್​ಗಳು ಪರಾರಿ

ಬ್ಯಾಂಕಾಕ್‌ನಲ್ಲಿ ಇತರ ಮಾರಾಟಗಾರರು ಮತ್ತು ಖರೀದಿದಾರರು ಹಾಗೂ ವಿತರಣೆಯನ್ನು ಪತ್ತೆಹಚ್ಚು ಸಮಯದಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ಆದರೆ ಪೊಲೀಸರು ಆತನನ್ನು ಕೊರಿಯನ್ ವ್ಯಕ್ತಿ ಎಂದೇ ಭಾವಿಸಿದ್ದರು. ಸಾವಾಂಗ್‌ಜೆಂಗ್‌ನನ್ನು ಬಂಧಿಸಲು ಪೊಲೀಸರಿಗೆ ತಿಳಿದಿರಲಿಲ್ಲ. ಬಳಿಕ ಆತ ತಾನು ಹೊಸ ಜೀವನವನ್ನು ಪ್ರಾರಂಭಿಸಲು ಬಯಸುತ್ತೇನೆ ಎಂದು ಹೇಳಿದ್ದಾನೆ.

ಡಾರ್ಕ್ ವೆಬ್‌ನಲ್ಲಿ ಬಿಟ್‌ಕಾಯಿನ್‌ನೊಂದಿಗೆ ಡ್ರಗ್‌ಗಳನ್ನು ಖರೀದಿಸಿ ನಂತರ ಬ್ಯಾಂಕಾಕ್ ಮತ್ತು ಸುತ್ತಮುತ್ತಲಿನ ಗ್ರಾಹಕರಿಗೆ ಮಾರಾಟ ಮಾಡುವುದನ್ನು ಆತ ಒಪ್ಪಿಕೊಂಡಿದ್ದಾರೆ. ಗಮನಾರ್ಹವೆಂದರೆ, ಆತನ ಇತ್ತೀಚಿನ ಬಂಧನಕ್ಕೂ ಮುನ್ನ ಕನಿಷ್ಠ ಮೂರು ಬಾರಿ ಬಂಧಿಸಲಾಗಿತ್ತು. ಒಂದು ಬಾರಿ ಪೊಲೀಸರು ಆತನ ಬಳಿ 290 ಎಕ್ಟಾಸಿ ಮಾತ್ರೆಗಳು ಮತ್ತು 2 ಕೆಜಿ ದ್ರವರೂಪದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದರು. ಆದಾಗ್ಯೂ, ಅವರು ಪ್ರತಿ ಬಾರಿ ಬಂಧನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿತ್ತು.

ಥೈಲ್ಯಾಂಡ್ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಮಾದಕವಸ್ತು ಕಳ್ಳಸಾಗಣೆ ಮತ್ತು ಬಳಕೆಯಂತಹ ಅಪರಾಧಗಳ ಮೇಲೆ ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ