ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡು ಸ್ಯಾನಿಟೈಜರ್ ಸ್ಪ್ರೇ ಮಾಡಿದ ಥಾಯ್ಲೆಂಡ್ ಪ್ರಧಾನಿ ಪ್ರಯುತ್ ಚಾನ್ ಓಚಾ

|

Updated on: Mar 12, 2021 | 4:49 PM

Viral video: ಪ್ರಧಾನಿ ಪ್ರಯುತ್ ಚಾನ್ ಓಚಾ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ಪತ್ರಕರ್ತರು ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನ ತುಂಬಲು ಸಮರ್ಥ ಅಭ್ಯರ್ಥಿಗಳ ಪಟ್ಟಿ ಮಾಡಿದ್ದೀರಾ ಎಂದು ಕೇಳಿದ್ದಕ್ಕೆ ಸಿಟ್ಟುಗೊಂಡು ಸ್ಯಾನಿಟೈಜರ್ ಸ್ಪ್ರೇ ಮಾಡಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡು ಸ್ಯಾನಿಟೈಜರ್ ಸ್ಪ್ರೇ ಮಾಡಿದ ಥಾಯ್ಲೆಂಡ್ ಪ್ರಧಾನಿ ಪ್ರಯುತ್ ಚಾನ್ ಓಚಾ
ಪ್ರಯುತ್ ಚಾನ್ ಓಚಾ
Follow us on

ಬ್ಯಾಂಕಾಕ್: ಥಾಯ್ಲೆಂಡ್ ಪ್ರಧಾನಿ ಪ್ರಯುತ್ ಚಾನ್ ಓಚಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಪತ್ರಕರ್ತರ ಪ್ರಶ್ನೆಗಳಿಗೆ ಸಿಡಿಮಿಡಿಗೊಂಡು ಅವರ ಮೇಲೆ ಸ್ಯಾನಿಟೈಜರ್ ಸ್ಪ್ರೇ ಮಾಡಿದ ಘಟನೆ ನಡೆದಿದೆ. ಪ್ರಧಾನಿ ಪತ್ರಕರ್ತರ ಮೇಲೆ ಸ್ಯಾನಿಟೈಜರ್ ಸ್ಪ್ರೇ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಪ್ರಧಾನಿ ಪ್ರಯುತ್ ಚಾನ್ ಓಚಾ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ಪತ್ರಕರ್ತರು ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನ ತುಂಬಲು ಸಮರ್ಥ ಅಭ್ಯರ್ಥಿಗಳ ಪಟ್ಟಿ ಮಾಡಿದ್ದೀರಾ ಎಂದು ಕೇಳಿದ್ದಾರೆ. ಏಳು ವರ್ಷಗಳ ಹಿಂದೆ ನಡೆದ ಬಂಡಾಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದಕ್ಕೆ ಮೂವರು ಸಚಿವರು ಜೈಲು ಪಾಲಾಗಿದ್ದರು. ಈ ಬಗ್ಗೆ ಪ್ರಶ್ನೆ ಕೇಳಿದಾಗ ಚಾನ್ ಓಚಾ ಕೋಪಗೊಂಡಿದ್ದಾರೆ.

ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿ ಪ್ರಕಾರ ವೇದಿಕೆಯಲ್ಲಿದ್ದ ಚಾನ್ ಓಚಾ, ನಿಮಗೆ ಬೇರೇನಾದರೂ ಕೇಳುವುದು ಇದೆಯೇ?. ಅಭ್ಯರ್ಥಿಗಳ ಪಟ್ಟಿ ಬಗ್ಗೆ ನನಗೇನೂ ಗೊತ್ತಿಲ್ಲ . ನಾನು ನೋಡಿಲ್ಲ. ಪ್ರಧಾನಿಯವರಿಗೆ ಇದೆಲ್ಲಾ ಮೊದಲೇ ಗೊತ್ತಾಗಲೇಬೇಕೆಂದಿದೆಯಾ? ಎಂದು ಪತ್ರಕರ್ತರ ಮೇಲೆ ಗುಡುಗಿದ್ದಾರೆ.


ಆಮೇಲೆ ವೇದಿಕೆಯಿಂದ ಹೊರ ನಡೆದ ಪ್ರಧಾನಿ ಅಲ್ಲಿದ್ದ ಸ್ಯಾನಿಟೈಜರ್ ಬಾಟಲಿಯೊಂದನ್ನು ಕೈಗೆತ್ತಿಕೊಂಡು ಪತ್ರಕರ್ತರ ಬಳಿಗೆ ಹೋಗಿ ಸ್ಪ್ರೇ ಮಾಡಿದ್ದಾರೆ. ಪ್ರಧಾನಿ ಸ್ಯಾನಿಟೈಜರ್ ಸ್ಪ್ರೇ ಮಾಡುತ್ತಿರುವಾಗಲೇ ಅದನ್ನು ತಮ್ಮ ಮೊಬೈಲ್ ನಲ್ಲಿ ಪತ್ರಕರ್ತರು ಶೂಟ್ ಮಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿರುವ ಈ ವಿಡಿಯೊ ಬಗ್ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಮಾಡಿದ್ದಾರೆ.

ಇದನ್ನೂ ಓದಿViral Video: ವರ್ಚುವಲ್ ಕಾನ್ಫರೆನ್ಸ್ ಅವಾಂತರ; ವಿಡಿಯೋ ಆಫ್ ಮಾಡಲು ಮರೆತು ಭರ್ಜರಿ ಭೋಜನ ಸವಿದ ವಕೀಲ!

Published On - 4:46 pm, Fri, 12 March 21