AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವರ್ಚುವಲ್ ಕಾನ್ಫರೆನ್ಸ್ ಅವಾಂತರ; ವಿಡಿಯೋ ಆಫ್ ಮಾಡಲು ಮರೆತು ಭರ್ಜರಿ ಭೋಜನ ಸವಿದ ವಕೀಲ!

ಅತ್ಯಂತ ಖುಷಿಯಿಂದ ಭೋಜನವನ್ನು ಸವಿಯುತ್ತಿರುವ ಅವರು ತಮ್ಮ ಮೊಬೈಲ್​ನ ವಿಡಿಯೊವನ್ನು ಬಂದ್ ಮಾಡಲು ಮರೆತಿದ್ದಾರೆ. ಈವೇಳೆ ವಕೀಲ ಕ್ಷತ್ರಶಲ್ ರಾಜ್ ಭೋಜನ ಸವಿಯುವುದನ್ನು ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾದ ಎಲ್ಲರೂ ನೋಡುತ್ತಿದ್ದರು.

Viral Video: ವರ್ಚುವಲ್ ಕಾನ್ಫರೆನ್ಸ್ ಅವಾಂತರ; ವಿಡಿಯೋ ಆಫ್ ಮಾಡಲು ಮರೆತು ಭರ್ಜರಿ ಭೋಜನ ಸವಿದ ವಕೀಲ!
ವಿಡಿಯೋ ಆನ್ ಇಟ್ಟೇ ವಕೀಲರು ಮಾಡಿದ್ದೇನು?
guruganesh bhat
|

Updated on: Mar 09, 2021 | 5:22 PM

Share

ವಿಡಿಯೋ ಕಾಲ್​ಗಳಲ್ಲಿ ಆಗುವ ಅವಾಂತರಗಳು ಒಂದೇ ಎರಡೇ..ಸೋಷಿಯಲ್ ಮೀಡಿಯಾ ಗಮನಿಸಿದರೆ ಇಂಥಾ ಹತ್ತಾರು ವಿಡಿಯೋಗಳು ಒಂದರ ಮುಂದೆ ಒಂದರಂತೆ ಬರುತ್ತಲೇ ಇರುತ್ತವೆ. ಈಗ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಡಿಯೋ ಕಾಲ್/ ವರ್ಚುವಲ್ ಮಿಟಿಂಗ್​ನಲ್ಲಿ ನಡೆದ ಅವಾಂತರವೊಂದು ಸಖತ್ ಸುದ್ದಿ ಮಾಡುತ್ತಿದೆ. ಕ್ಷತ್ರಶಲ್ ರಾಜ್ ಎಂಬ ಬಿಹಾರದ ವಕೀಲರೊಬ್ಬರು ವಿಡಿಯೋ ಕಾಲ್​ನಲ್ಲಿ ಅವಾಂತರ ಸೃಷ್ಟಿಸಿಕೊಂಡಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎಚ್ಚರಿಕೆ ನೀಡಿದ ಬಳಿಕ ವಿಡಿಯೋ ಆಫ್ ಮಾಡಿದ್ದಾರೆ. ಅಷ್ಟಕ್ಕೂ ವಿಡಿಯೋ ಕಾಲ್ ನಡುವೆ ನಡೆದಿದ್ದೇನು? ಇಲ್ಲಿದೆ ಮಾಹಿತಿ.

ವಿಡಿಯೋ ಕಾನ್ಫರೆನ್ಸ್​ನಲ್ಲಿ ಇವರೆಲ್ಲರೂ ಭಾಗಿಯಾಗಿದ್ದರು. ಕೆಲ ಕಾಲ ಸಿಕ್ಕಿದ ವಿರಾಮದಲ್ಲಿ ವಕೀಲ ಕ್ಷತ್ರಶಲ್ ರಾಜ್ ಅವರು ಊಟ ಮಾಡಲು ಶುರುಮಾಡಿದ್ದಾರೆ. ಅತ್ಯಂತ ಖುಷಿಯಿಂದ ಭೋಜನವನ್ನು ಸವಿಯುತ್ತಿರುವ ಅವರು ತಮ್ಮ ಮೊಬೈಲ್​ನ ವಿಡಿಯೊವನ್ನು ಬಂದ್ ಮಾಡಲು ಮರೆತಿದ್ದಾರೆ. ಈ ವೇಳೆ ವಕೀಲ ಕ್ಷತ್ರಶಲ್ ರಾಜ್ ಭೋಜನ ಸವಿಯುವುದನ್ನು ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗಿಯಾದ ಎಲ್ಲರೂ ನೋಡಿದ್ದಾರೆ! ವಕೀಲರ ಅವಾಂತರ ಗಮನಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಕೀಲರಿಗೆ ಕರೆ ಮಾಡಿ ಎಚ್ಚರಿಸಿದ್ದಾರೆ.

ಈ ಅಚಾತುರ್ಯ ಮನಗಂಡ ಸಾಲಿಸೇಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರು ತಕ್ಷಣ ತಮ್ಮ ವೈಯಕ್ತಿಕ ಮೊಬೈಲ್​ನಿಂದ ವಕೀಲರಿಗೆ ಕರೆ ಮಾಡಿ ‘ಹೀಗಾಗುತ್ತಿದೆ‘ ಎಂದು ಹೇಳಿದ್ದಾರೆ. ಆಗಲೇ ಎಚ್ಚೆತ್ತುಕೊಂಡ ವಕೀಲ ಕ್ಷತ್ರಶಲ್ ರಾಜ್, ತಮ್ಮ ಮೊಬೈಲ್​ನ ವಿಡಿಯೋವನ್ನು ಅಫ್ ಮಾಡಿದ್ದಾರೆ.

ಇತ್ತೀಚಿಗೆ ನಡೆದಿದ್ದ ಇನ್ನೊಂದು ಘಟನೆ

ವ್ಯಕ್ತಿಯೋರ್ವ ತನ್ನ ಮನೆಯಲ್ಲಿ ಕುಳಿತು ಝೂಮ್​ ಮೀಟಿಂಗ್​ನಲ್ಲಿ ನಿರತನಾಗಿದ್ದ. ಮನೆಯಲ್ಲಿ ಕುಳಿತಾಗ ಮನೆಯವರ ಮಾತು ಕೇಳದಂತೆ, ಮನೆಯವರು ಫ್ರೇಮ್​ನಲ್ಲಿ ಬರದಂತೆ ನೋಡಿಕೊಳ್ಳಬೇಕು ತಾನೇ? ಆದರೆ ಈ ಪುಣ್ಯಾತ್ಮ ಅದನ್ನು ಮರೆತಿದ್ದ. ಝೂಮ್ ಮೀಟಿಂಗ್​ನಲ್ಲಿ ಇದ್ದಾಗಲೇ ಈತನ ಮುದ್ದಿನ ಹೆಂಡತಿ ಫ್ರೇಮ್​ನಲ್ಲಿ ಕಾಣಿಸಿಕೊಂಡಳು. ಕೇವಲ ಕಾಣಿಸಿಕೊಂಡಿದ್ದರೆ ಪರವಾಗಿರಲಿಲ್ಲ. ತನ್ನ ಪತಿರಾಯನ ಮೇಲೆ ಪ್ರೀತಿ ಉಕ್ಕಿ ಬಂದು ತನ್ನ ಕೆಂದುಟಿಗಳಿಂದ (?) ಆತನಿಗೆ ಚುಂಬನದ ಮಳೆ ಸುರಿಸಲು ಮುಂದಾಗಿದ್ದಳು! ಪಾಪ..ತನ್ನ ಪಾಡಿಗೆ ತಾನು ಮೀಟಿಂಗ್ ನಲ್ಲಿದ್ದ ಪತಿ ಒಂದು ಕ್ಷಣಕ್ಕೆ ಗಾಬರಿಬಿದ್ದುಹೋದ. ಆಗಿಂದಾಗಲೇ ಹೆಂಡತಿಯ ಮುಖಾರವಿಂದವನ್ನು ಕಂಪ್ಯೂಟರ್​​ ಫ್ರೇಮ್​ನಿಂದ ಆಚೆಗೆ ಸರಿಸಿ ತಾನು ಮೀಟಿಂಗ್​ನಲ್ಲಿರುವುದಾಗಿ ಭಿನ್ನವಿಸಿದ. ಆದರೆ ಅಲ್ಲಿಯವರೆಗಿನ ಈ ಪ್ರಹಸನ ಝೂಮ್​​ನಲ್ಲಿ ದಾಖಲಾಗಿತ್ತು. ಈ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ ಹರ್ಷ ಗೋಯೆಂಕಾ.

ಇಂತಹ ಅವಾಂತರಗಳು ವರ್ಚುವಲ್ ಕಾನ್ಫರೆನ್ಸ್​ಗಳಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತವೆ ಎಂಬುದನ್ನು ಇಲ್ಲಿ ಸ್ಮರಿಸಬಹುದು

ಇದನ್ನೂ ಓದಿ: ಗಂಡ ಝೂಮ್ ಮೀಟಿಂಗ್​ನಲ್ಲಿದ್ದಾಗಲೇ ಜುಮ್ಮನೆ ಮುತ್ತಿಕ್ಕಲು ಬಂದ ಪತ್ನಿ! ನಂತರ ಆಗಿದ್ದು ಮಾತ್ರ…

Video Viral: ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ! ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಘಟನೆ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು