ಪತಿ ಜತೆ ಫೋನ್​​ನಲ್ಲಿ ಮಾತನಾಡುತ್ತಿರುವಾಗಲೇ ದಾಳಿ, ಇಸ್ರೇಲ್​​ನಲ್ಲಿ ಕೇರಳ ಮೂಲದ ಮಹಿಳೆಗೆ ಗಂಭೀರ ಗಾಯ

|

Updated on: Oct 09, 2023 | 3:18 PM

ಇಸ್ರೇಲ್​​ ಮೇಲೆ ಪ್ಯಾಲೆಸ್ತೀನ್ ಭಯೋತ್ಪಾದಕರು ದಾಳಿ ಮುಂದುವರಿದಿದ್ದು, ಇದೀಗ ಇಸ್ರೇಲ್​​ನಲ್ಲಿರುವ ಕೇರಳ ಮೂಲದ ನರ್ಸ್​ ಒಬ್ಬರ ಮೇಲೆ ದಾಳಿ ನಡೆದಿದ್ದು, ಅವರಿಗೆ ಗಂಭೀರ ಗಾಯಗಳಲಾಗಿವೆ ಎಂದು ಹೇಳಲಾಗಿದೆ. ಇವರು ತನ್ನ ಪತಿಯೊಂದಿಗೆ ವಿಡಿಯೋ ಕಾಲ್​​ನಲ್ಲಿ ಮಾತನಾಡುತ್ತಿರುವಾಗಲೇ ಈ ದಾಳಿ ನಡೆದಿದೆ. ಗಾಯಗೊಂಡಿರುವ ನರ್ಸ್​​ನ್ನು ಶೀಜಾ ಆನಂದ್ (41) ಎಂದು ಗುರುತಿಸಲಾಗಿದೆ.

ಪತಿ ಜತೆ ಫೋನ್​​ನಲ್ಲಿ ಮಾತನಾಡುತ್ತಿರುವಾಗಲೇ ದಾಳಿ, ಇಸ್ರೇಲ್​​ನಲ್ಲಿ ಕೇರಳ ಮೂಲದ ಮಹಿಳೆಗೆ ಗಂಭೀರ ಗಾಯ
ಶೀಜಾ ಆನಂದ್
Follow us on

ಇಸ್ರೇಲ್ (Israel) ಮೇಲೆ ಪ್ಯಾಲೆಸ್ತೀನ್ (Palestine​​) ಭಯೋತ್ಪಾದಕರು ದಾಳಿ ಮುಂದುವರಿದಿದ್ದು, ಇದೀಗ ಇಸ್ರೇಲ್​​ನಲ್ಲಿರುವ ಕೇರಳ ಮೂಲದ ನರ್ಸ್​ ಒಬ್ಬರ ಮೇಲೆ ದಾಳಿ ನಡೆದಿದ್ದು, ಅವರಿಗೆ ಗಂಭೀರ ಗಾಯಗಳಲಾಗಿವೆ ಎಂದು ಹೇಳಲಾಗಿದೆ. ಇವರು ತನ್ನ ಪತಿಯೊಂದಿಗೆ ವಿಡಿಯೋ ಕಾಲ್​​ನಲ್ಲಿ ಮಾತನಾಡುತ್ತಿರುವಾಗಲೇ ಈ ದಾಳಿ ನಡೆದಿದೆ. ಗಾಯಗೊಂಡಿರುವ ನರ್ಸ್​​ನ್ನು ಶೀಜಾ ಆನಂದ್ (41) ಎಂದು ಗುರುತಿಸಲಾಗಿದೆ. ಸುಮಾರು ಏಳು ವರ್ಷಗಳಿಂದ ಇಸ್ರೇಲ್​ನಲ್ಲಿ ನರ್ಸ್​​ ವೃತ್ತಿಯನ್ನು ಶೀಜಾ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಶೀಜಾ ಆನಂದ್ ಅವರು ಶನಿವಾರದಂದು ಇಸ್ರೇಲ್​​ ಮೇಲೆ ದಾಳಿ ನಡೆದಾಗ ತನ್ನ ಕುಟುಂಬಕ್ಕೆ ಫೋನ್​​ ಮಾಡಿದ್ದಾರೆ. ನಾನು ಇಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ. ನಂತರ ತನ್ನ ಪತಿಗೆ ಫೋನ್​​ ಮಾಡಿದಾಗ ಒಂದು ದೊಡ್ಡ ಶಬ್ದ ಕೇಳಿ, ಕರೆ ಕಟ್​​ ಆಗುತ್ತದೆ ಎಂದು ಆಕೆಯ ಪತಿ ಹೇಳಿದ್ದಾರೆ.

ಈ ಘಟನೆಯ 3-4 ಗಂಟೆಯ ನಂತರ ಇಸ್ರೇಲ್​​ನಿಂದ ಒಂದು ಫೋನ್ ಬರುತ್ತದೆ. ನಿಮ್ಮ ಪತ್ನಿ ಭಯೋತ್ಪಾದಕರ ದಾಳಿಯಿಂದ ಗಾಯಗೊಂಡಿದ್ದಾರೆ. ಈಗಾಗಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೇರೆ ಕಡೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.

ಶೀಜಾ ಆನಂದ್ ಅವರ ಪತಿ ಮತ್ತು ಮಕ್ಕಳು ಭಾರತದಲ್ಲಿದ್ದಾರೆ. ಅವರ ಪತಿ ಪುಣೆಯಲ್ಲಿ ಕೆಲಸದಲ್ಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇಸ್ರೇಲ್​​ನ ಬೆತ್ಲೆಹೆಮ್‌ನ ಹೋಟೆಲ್‌ನಲ್ಲಿ 200ಕ್ಕೂ ಹೆಚ್ಚು ಜನರ ಸಿಲುಕಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಈಗಾಗಲೇ ಅವರನ್ನು ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಇದರ ಜತೆಗೆ ಪ್ಯಾಲೆಸ್ತೀನ್‌ನ ಹೋಟೆಲ್‌ನಲ್ಲಿ ಕೊಚ್ಚಿಯ 45 ಜನ ಸಿಲುಕಿಕೊಂಡಿದ್ದಾರೆ. ಈಗಾಗಲೇ ಅವರನ್ನು ಭಾರತಕ್ಕೆ ಕರೆದುಕೊಂಡು ಬರುವ ಕೆಲಸವನ್ನು ಮಾಡಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ. ಇಸ್ರೇಲ್​ನಲ್ಲಿರುವ ಭಾರತದ ರಾಯಭಾರಿ ಜತೆಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತುಕತೆ ನಡೆಸಿದ್ದು, ಇಸ್ರೇಲ್​​ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಯಾವುದೇ ದೇಶದ ಯಹೂದಿ ಇಸ್ರೇಲ್​ನ ಪೌರತ್ವ ಪಡೆಯಬಹುದೇ?

ಇಸ್ರೇಲ್​ನಲ್ಲಿ ಅನೇಕ ಕಡೆಯಿಂದ ದಾಳಿಗಳು ನಡೆಸುತ್ತದೆ. ಈಗಾಗಲೇ ಪ್ಯಾಲೆಸ್ತೀನ್ ಹಮಾಸ್ ಭಯೋತ್ಪಾದಕರು ಇಸ್ರೇಲ್​ ಮೇಲೆ 5,000 ರಾಕೆಟ್​​ಗಳ ದಾಳಿ ಮಾಡಿದ್ದಾರೆ. ಮೂರು ದಿನದ ಈ ಯುದ್ಧದಲ್ಲಿ 1,100 ಜನ ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ಅಡಗುತಾಣಗಳನ್ನು ನಾಶಪಡಿಸಲು ಇಸ್ರೇಲ್ ಶನಿವಾರ ಪ್ರತಿದಾಳಿ ಆರಂಭಿಸಿದೆ. ದಕ್ಷಿಣ ಇಸ್ರೇಲ್‌ನಲ್ಲಿ ಕೆಲವು ಹಮಾಸ್ ನುಸುಳುಕೋರರು ಇಸ್ರೇಲಿ ಮಿಲಿಟರಿಯೊಂದಿಗೆ ಗುಂಡಿನ ಚಕಮಕಿ ನಡೆಸಿದ್ದಾರೆ. ಈ ಸಮಯದಲ್ಲಿ ಪ್ರತಿದಾಳಿಯಾಗಿ ಇಸ್ರೇಲ್​​ ಕೂಡ ದಾಳಿ ನಡೆಸಿದೆ. ಇನ್ನು ಇಸ್ರೇಲ್​​ನಲ್ಲಿ 18 ಸಾವಿರ ಭಾರತೀಯರು ವಾಸವಾಗಿದ್ದಾರೆ. ಈ ಯುದ್ಧದಲ್ಲಿ ಭಾರತೀಯರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ