ಸಿಂಧೂ ನದಿ ನಮ್ಮದು, ನೀರು ಬಿಡದಿದ್ದರೆ ನಿಮ್ಮ ರಕ್ತ ಹರಿಯುತ್ತೆ: ಪಾಕ್ ನಾಯಕ

ಪಹಲ್ಗಾಮ್​ನಲ್ಲಿ ಭಾರತೀಯ ನಾಗರಿಕರ ಮೇಲೆ ನಡೆದ ದಾಳಿಯ ನಂತರ ಭಾರತದ ಸರ್ಕಾರ ಪಾಕಿಸ್ತಾನದ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿತ್ತು, ಅದರಲ್ಲಿ ಪ್ರಮುಖವಾಗಿರುವುದು ಸಿಂಧೂ ನದಿ. ಸಿಂಧೂ ನದಿ ನೀರನ್ನು ತಡೆದು ಪಾಕ್​​​ಗೆ ತಕ್ಕ ಉತ್ತರ ನೀಡಿದೆ. ಇದೀಗ ಇದರಿಂದ ಸಂಕಷ್ಟಕ್ಕೆ ಒಳಾಗಾಗಿರುವ ಪಾಕ್​​​​​ಗೆ ತನ್ನ ಹತ್ತಾಶೆಯ ಹೇಳಿಕೆಯನ್ನು ನೀಡುತ್ತಿದೆ. ಸಿಂಧೂ ನದಿ ನಮ್ಮದು, ನೀರು ಬಿಡದಿದ್ದರೆ ನಿಮ್ಮ ರಕ್ತ ಹರಿಯುತ್ತೆ ಎಂದು ಪಿಪಿಪಿ ಅಧ್ಯಕ್ಷ ಭುಟ್ಟೋ-ಜರ್ದಾರಿ ಹೇಳಿದ್ದಾರೆ.

ಸಿಂಧೂ ನದಿ ನಮ್ಮದು, ನೀರು ಬಿಡದಿದ್ದರೆ ನಿಮ್ಮ ರಕ್ತ ಹರಿಯುತ್ತೆ: ಪಾಕ್ ನಾಯಕ
ಪಿಪಿಪಿ ಅಧ್ಯಕ್ಷ ಭುಟ್ಟೋ-ಜರ್ದಾರಿ

Updated on: Apr 26, 2025 | 11:50 AM

ಪಹಲ್ಗಾಮ್​ನಲ್ಲಿ (Pahalgam) ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ, ಭಾರತದ ಜತೆಗೆ ಮತ್ತಷ್ಟು ದ್ವೇಷ ಕಟ್ಟಿಕೊಂಡ ಪಾಕಿಸ್ತಾನಕ್ಕೆ, ಭಾರತ ಸರಿಯಾದ ಉತ್ತರವನ್ನು ನೀಡಿದೆ. ಭಾರತ ಪಾಕಿಸ್ತಾನಕ್ಕೆ ಎಲ್ಲದಕ್ಕೂ ಅಗತ್ಯ ಇರುವ ರಾಷ್ಟ್ರ, ಭಾರತ ಇದ್ದರೆ ಮಾತ್ರ ಪಾಕ್​​ ಸುರಕ್ಷಿತವಾಗಿದೆ. ಇದನ್ನು ಅರಿಯದ ಪಾಕ್​​​ ತನ್ನ ಕ್ರೂರ ಕೃತ್ಯವನ್ನು ಎಸಗಿದೆ. ಭಾರತದ ಪ್ರಜೆಗಳ ಮೇಲೆ ಗುಂಡಿನ ದಾಳಿ ನಡೆಸಿದ ಪಾಕ್​​​ಗೆ ಸರಿಯಾಗಿ ಬುದ್ಧಿ ಕಳಿಸಲು ಭಾರತ ಸಿಂಧೂ ನದಿ ನೀರು ಬೀಡುವುದನ್ನು ನಿಲ್ಲಿಸಿದೆ. ಇದು ಪಾಕ್​​​​ಗೆ ದೊಡ್ಡ ಪೆಟ್ಟು ಬಿದ್ದಿದೆ. ಪಾಕ್​​​​ಗೆ ಎಲ್ಲದಕ್ಕೂ ಈ ನೀರೇ ಆಸರೆಯಾಗಿತ್ತು. ಆದರೆ ಇದೀಗ ಇದನ್ನೇ ಭಾರತ ಸರ್ಕಾರ ನಿಲ್ಲಿಸಿದೆ. ಭಾರತ ಸರ್ಕಾರದ ಈ ನಿರ್ಧಾರಕ್ಕೆ ಪಾಕ್ ಸರ್ಕಾರ ಕೆಂಡಕಾರುತ್ತಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ (Bhutto-Zardari) ಭಾರತದ ಈ ಕ್ರಮವನ್ನು ಟೀಕಿಸಿದ್ದಾರೆ. ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಭುಟ್ಟೋ-ಜರ್ದಾರಿ, ಸಿಂಧೂ ನಮ್ಮದು ಮತ್ತು ಅದು ನಮ್ಮದೇ ಆಗಿರುತ್ತದೆ. ನೀರು ಬಿಟ್ಟರೇ ಸರಿ ಇಲ್ಲದಿದ್ದರೆ ನಿಮ್ಮ ರಕ್ತ ಹರಿಯುತ್ತದೆ ಎನ್ನುವ ಮೂಲಕ ಯುದ್ಧಕ್ಕೆ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ.

ಭಾರತ ಪಹಲ್ಗಾಮ್ ದಾಳಿಗೆ ಪಾಕಿಸ್ತಾನವನ್ನು ಬಲಿಪಶುವನ್ನಾಗಿ ಮಾಡುತ್ತಾ, ತನ್ನ ಆಂತರಿಕ ಭದ್ರತಾ ಲೋಪಗಳಿಂದ ಗಮನವನ್ನು ಬೇರೆಡೆ ಸೆಳೆಯುತ್ತಿದೆ. ಭಾರತವು ಇಸ್ಲಾಮಾಬಾದ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದೆ. ಈ ಮೂಲಕ ಪಾಕಿಸ್ತಾನಿ ಮಿಲಿಟರಿ ಅಟ್ಯಾಚ್‌ಗಳನ್ನು ಹೊರಹಾಕುವುದು, ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು ಮತ್ತು ಅಟ್ಟಾರಿ ಭೂ ಸಾರಿಗೆ ಪೋಸ್ಟ್ ಅನ್ನು ಮುಚ್ಚುವುದು ಸೇರಿದಂತೆ ಹಲವಾರು ರಾಜತಾಂತ್ರಿಕ ಮತ್ತು ಆರ್ಥಿಕ ಕ್ರಮಗಳನ್ನು ಪ್ರಾರಂಭಿಸಿದೆ. ಇದೀಗ ಈ ಕ್ರಮಗಳು ಪಾಕಿಸ್ತಾನಕ್ಕೆ ಸಂಕಷ್ಟಕ್ಕೆ ಕಾರಣವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ದಲ್ಲಿ 26 ನಾಗರಿಕರ ಮೇಲೆ ದಾಳಿ ಮಾಡಿದ ಲಷ್ಕರ್-ಎ-ತೈಬಾ (ಎಲ್‌ಇಟಿ) ವಿರುದ್ಧ ಭಾರತೀಯ ಸೇನೆ ಈಗಾಗಲೇ ಕಾರ್ಯಚರಣೆ ಮುಂದುವರಿಸಿದೆ. ಈ ದಾಳಿ ನಡೆಸಿದ ಸಂಘಟನೆಗೆ ಪಾಕ್​​​ ಸರ್ಕಾರವೇ ಬೆಂಬಲ ನೀಡಿದೆ. ಈ ಕಾರಣಕ್ಕೆ ಭಾರತ ಈ ಕ್ರಮವನ್ನು ಅನುಸರಿಸಿದೆ. ಭಾರತದ ಸರ್ಕಾರ ಈ ಕ್ರಮ ತೆಗೆದುಕೊಳ್ಳುತ್ತಿದ್ದಂತೆ ಪಾಕ್  ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಭುಟ್ಟೋ-ಜರ್ದಾರಿ ತುರ್ತು ಸಭೆ ನಡೆಸಿದ್ದಾರೆ. ಸಿಂಧೂ ನದಿಯ ನೀರು ಪಾಕ್​​​ಗೆ ಎಷ್ಟು ಮುಖ್ಯ ಎನ್ನುವುದು ಈ ನಾಯಕರ ಮಾತಿನಿಂದ ಅರ್ಥವಾಗುತ್ತಿದೆ.

ಇದನ್ನೂ ಓದಿ
ಪ್ರವಾಸಿಗರನ್ನು ಹತ್ಯೆ ಮಾಡಿದ್ದು ಅಮಾನವೀಯ ಕೃತ್ಯ: ವಿಶ್ವಸಂಸ್ಥೆ
ಸ್ನಾನಕ್ಕೂ ಭಾರತದಿಂದ ನೀರು ಕೇಳಬೇಕು; ಟ್ರೋಲ್ ಮಾಡಿಕೊಂಡ ಪಾಕಿಸ್ತಾನೀಯರು!
ಪಾಕಿಸ್ತಾನಕ್ಕೆ ಭೇಟಿ ನೀಡಬೇಡಿ; ತನ್ನ ಪ್ರಜೆಗಳಿಗೆ ರಷ್ಯಾ ಎಚ್ಚರಿಕೆ
ಭಾರತದಲ್ಲಿದ್ದಾರೆ 14,000 ಪಾಕಿಸ್ತಾನಿ ಪ್ರಜೆಗಳು

ಇದನ್ನೂ ಓದಿ: ಬಲೂಚಿಸ್ತಾನದಲ್ಲಿ ಪಾಕ್ ಸೇನೆ ಮೇಲೆ ಐಇಡಿ ದಾಳಿ, ಪಾಕಿಸ್ತಾನದ 10 ಸೇನಾಧಿಕಾರಿಗಳು ಸಾವು

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈ ಹಿಂದೆಯೂ ಭಯೋತ್ಪಾದನೆ ವಿರುದ್ಧ ಹೋರಾಡಿತ್ತು. ಆದರೆ ಇದೀಗ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳವಂತೆ ಉತ್ತರ ನೀಡುತ್ತಿದೆ. ಉಗ್ರರನ್ನು ಸಾಕುತ್ತಿರುವ ಪಾಕ್​​​ಗೆ ಭೀಕ್ಷೆ ಬೇಡ ಸ್ಥಿತಿ ಬಂದಿದೆ. ಅನೇಕ ರಾಷ್ಟ್ರಗಳು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ. ಆದರೆ ಪಾಕ್​​​ಗೆ ಇನ್ನು ಬುದ್ಧಿ ಬಂದಿಲ್ಲ. ಅಲ್ಲಿ ನಾಯಕರು ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ.

ಸಿಂಧೂ ನದಿ ಪಾಕಿಸ್ತಾನ ಪ್ರಜೆಗಳ ಪಾಲಿಗೆ ಜೀವ ನದಿ: ಪ್ರಧಾನಿ ಶೆಹಬಾಜ್ ಷರೀಫ್

ಸಿಂಧೂ ನದಿ ಪಾಕಿಸ್ತಾನ ಪ್ರಜೆಗಳ ಪಾಲಿಗೆ ಜೀವ ನದಿ, ಸಿಂಧೂ ನದಿ ನೀರನ್ನು ತಡೆದರೆ ತಕ್ಕ ಉತ್ತರ ನೀಡಬೇಕಾಗುತ್ತೆ. ಸಿಂಧೂ ನದಿ ನೀರನ್ನು ತಡೆಯುವ ಕೆಲಸ ಮಾಡಬಾರದು. ದೇಶದ ಸಮಗ್ರತೆ ಮತ್ತು ಭದ್ರತೆ ವಿಚಾರದಲ್ಲಿ ರಾಜಿಯಾಗಲ್ಲ,ಈ ವಿಚಾರದಲ್ಲಿ ಪಾಕ್​ ಸೇನೆ ಮತ್ತು ನಮ್ಮ ನಿಲುವು ಒಂದೇ
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಎಂದು ಹೇಳಿದ್ದಾರೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:47 am, Sat, 26 April 25