ಟೆಕ್ಸಾಸ್‌ನ (Texas) ಯುವಾಲ್ಡಿಯಲ್ಲಿನ ಶಾಲೆಯಲ್ಲಿ ನಡೆದ ಗುಂಡಿನ ದಾಳಿ (Shooting) ಆ ಪ್ರದೇಶದ ಅನೇಕ ಕುಟುಂಬಗಳನ್ನು ತೀವ್ರ ಆಘಾತ ಮತ್ತು ದುಃಖಕ್ಕೆ ಸಿಲುಕಿಸಿದೆ. ಈ ಘಟನೆ ನಂತರ ಸಂತ್ರಸ್ತರಿಗೆ ಸಾಂತ್ವನ ನೀಡಲು ಐದು ವಿವಿಧ ಸಂಸ್ಥೆಗಳು ಥೆರಪಿ ಡಾಗ್‌ಗಳನ್ನು (Therapy Dogs) ನಿಯೋಜಿಸಿವೆ. ಕಂಫರ್ಟ್ ಡಾಗ್ಸ್ ಎಂದೇ ಕರೆಯಲ್ಪಡುವ ಈ ಥೆರಪಿ ಡಾಗ್ಸ್ (ಮಾನಸಿಕ ಚಿಕಿತ್ಸೆ ನೀಡಲು ಸಹಾಯ ಮಾಡುವ ನಾಯಿಗಳು) ಆಘಾತದಿಂದ ಹೊರಬರಲು ಮನುಷ್ಯರಿಗೆ ಸಹಾಯಮಾಡುತ್ತಿವೆ. ಅಂದರೆ ಇವುಗಳ ಸಾನಿಧ್ಯವು ಮನುಷ್ಯನ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮನುಷ್ಯರಿಗೆ, ಮಾನಸಿಕ ಹೊಯ್ದಾಟದಲ್ಲಿರುವ ಮನುಷ್ಯರಿಗೆ ಸಹಾಯ ಮಾಡಲು ಈ ನಾಯಿಗಳನ್ನು ಬಳಸಲಾಗುತ್ತದೆ.
ಲುಥೇರಿಯನ್ ಚರ್ಚ್ ಚಾರಿಟಿಗಳಾದ ಎನ್ ಪಿಆರ್ ಪ್ರಕಾರ ಈ ಪ್ರದೇಶಕ್ಕೆ ಎಂಟು ಗೋಲ್ಡನ್ ರಿಟ್ರೀವರ್‌ಗಳನ್ನು ನಿಯೋಜಿಸಲಾಗಿದೆ ಮತ್ತು ಇನ್ನಷ್ಟು ಬರುವ ನಿರೀಕ್ಷೆಯಿದೆ. ಈ ಬಗ್ಗೆ ಮಾತನಾಡಿದ ಚಾಪ್ಲೈನ್ ಕ್ರಿಸ್ ಬ್ಲೇರ್ , ಅನೇಕ ಜನರು ಭಾವನಾತ್ಮಕವಾಗಿ ಕುಸಿದಿದ್ದಾರೆ. ಹೀಗಿರುವಾಗ ನಮ್ಮ ನಾಯಿಗಳನ್ನು ಅವರ ಬಳಿಗೆ ಬಿಡುವುದು ಅವರಿಗೆ ಸಾಂತ್ವನ ನೀಡಬಲ್ಲುದು. ಮಾನವರು ಆ ನೋವಿನ ಗೋಡೆ ಭೇದಿಸಿ ಹೊರಬರುವುದು ಕಷ್ಟ , ಆದರೆ ನಾಯಿಗಳು ಖಂಡಿತವಾಗಿಯೂ ಆ ಗೋಡೆಯನ್ನು ತೆಗೆದು ಹಾಕುತ್ತವೆ. ಈ ಮೂಲಕ ನಡೆಯುತ್ತಿರುವ ಎಲ್ಲಾ ಗೊಂದಲಗಳಿಂದ ಅವರನ್ನು ಸ್ವಲ್ಪಮಟ್ಟಿಗೆ ವಿಚಲಿತಗೊಳಿಸಲು ಸಾಧ್ಯವಾಗುತ್ತದೆ. ಅವರು ಸಂತೋಷದ ವಿಷಯದ ಮೇಲೆ ಕೇಂದ್ರೀಕರಿಸಲು ಅವಕಾಶ ಸಿಗುತ್ತದೆ ಎಂದಿದ್ದಾರೆ.
Comfort dogs have arrived in Uvalde,Texas. They will be the best sight for the children. This group of volunteers has stated that they will remain with the community for as long as they are needed. pic.twitter.com/sqfseKHo25
— Beth Hill-Skinner (@bethhillskinner) May 30, 2022
ಕಂಫರ್ಟ್ ಡಾಗ್ಸ್ ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡಲು ಮಾತ್ರವಲ್ಲ, ಕಾನೂನು ಜಾರಿ ಅಧಿಕಾರಿಗಳು ಮತ್ತು ವೈದ್ಯಕೀಯ ಪ್ರತಿಸ್ಪಂದಕರಿಗೂ ಸಹಾಯ ಮಾಡುತ್ತವೆ. ಕಂಫರ್ಟ್ ಡಾಗ್ ಗಳ ಚಿತ್ರಗಳನ್ನು ಅನೇಕ ಬಳಕೆದಾರರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರಲ್ಲಿ ಒಬ್ಬರಾದ ಶರೋನ್ ಮರ್ಫಿ, “ಇಂದು ಟೆಕ್ಸಾಸ್‌ನ ಯುವಾಲ್ಡಿಯಲ್ಲಿ ಕಂಫರ್ಟ್ ಡಾಗ್ಸ್. ಬೆಳಕು ಮಂಕಾಗಿರಬಹುದು, ಆದರೆ ಕತ್ತಲೆ ಮೇಲುಗೈ ಸಾಧಿಸುವುದಿಲ್ಲ ಎಂದಿದ್ದಾರೆ.
The Comfort Dogs in Uvale, Texas today.???
The light may have been dimmed, but darkness will not prevail.?? @K9ComfortDogs pic.twitter.com/S1TmLQhlah— ?Sharon Murphy? (@sharonainvegas) May 29, 2022
ಟೆಕ್ಸಾಸ್ ನಲ್ಲಿ ನಡೆದ ಗುಂಡಿನ ದಾಳಿ ಮತ್ತೊಮ್ಮೆ ಅಮೆರಿಕದಲ್ಲಿ ಗನ್ ಸುರಕ್ಷತೆ ಮತ್ತು ಅದರ ಪ್ರವೇಶದ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.
ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ