ಟ್ರಂಪ್​ ವಿರೋಧಿಸುವವರು ಅಮೆರಿಕ ಬಿಟ್ಟು ಇಲ್ಲಿಗೆ ಬನ್ನಿ, ಕೇವಲ 84ರೂ.ಗೆ ಮನೆ ಕೊಳ್ಳಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್ ಗೆಲುವು ಸಾಧಿಸಿದ್ದು, ವಿಶ್ವದೆಲ್ಲೆಡೆ ತುಂಬಾ ಚರ್ಚೆಯಾಗುತ್ತಿದೆ. ಅವರ ವಿಜಯದ ನಂತರ ಅವರ ಬೆಂಬಲಿಗರು ತುಂಬಾ ಸಂತೋಷವಾಗಿದ್ದರೆ, ಅನೇಕರು ಅವರನ್ನು ಇನ್ನೂ ಹೆಚ್ಚು ವಿರೋಧಿಸಲು ಶುರು ಮಾಡಿದ್ದಾರೆ.

ಟ್ರಂಪ್​ ವಿರೋಧಿಸುವವರು ಅಮೆರಿಕ ಬಿಟ್ಟು ಇಲ್ಲಿಗೆ ಬನ್ನಿ, ಕೇವಲ 84ರೂ.ಗೆ ಮನೆ ಕೊಳ್ಳಿ
ಡೊನಾಲ್ಡ್​ ಟ್ರಂಪ್ Image Credit source: Forbes
Follow us
ನಯನಾ ರಾಜೀವ್
|

Updated on: Nov 20, 2024 | 9:26 AM

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್ ಗೆಲುವು ಸಾಧಿಸಿದ್ದು, ವಿಶ್ವದೆಲ್ಲೆಡೆ ತುಂಬಾ ಚರ್ಚೆಯಾಗುತ್ತಿದೆ. ಅವರ ವಿಜಯದ ನಂತರ ಅವರ ಬೆಂಬಲಿಗರು ತುಂಬಾ ಸಂತೋಷವಾಗಿದ್ದರೆ, ಅನೇಕರು ಅವರನ್ನು ಇನ್ನೂ ಹೆಚ್ಚು ವಿರೋಧಿಸಲು ಶುರು ಮಾಡಿದ್ದಾರೆ.

ಅನೇಕ ಕಂಪನಿಗಳು ಮತ್ತು ಉದ್ಯಮಿಗಳು ಸಹ ಇದರ ಲಾಭವನ್ನು ಪಡೆಯುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯನ್ನು ನೋಡಲು ಬಯಸದವರಿಗೆ ಪ್ರಪಂಚದಾದ್ಯಂತ ಅನೇಕ ಕೊಡುಗೆಗಳನ್ನು ಘೋಷಿಸುತ್ತಿದ್ದಾರೆ. ಟ್ರಂಪ್ ವಿರೋಧಿಗಳು ಅಮೆರಿಕದಲ್ಲಿ ಮಾತ್ರವಲ್ಲ ವಿವಿಧ ದೇಶಗಳಲ್ಲೂ ಇದ್ದಾರೆ.

2024ರಲ್ಲಿ ಡೊನಾಲ್ಡ್​ ಟ್ರಂಪ್ ವಿಜಯದ ನಂತರ ದೇಶದಿಂದ ಹೊರಹೋಗಲು ಇಚ್ಛಿಸುವವರಿಗೆ ಇಟಲಿಯ ಗ್ರಾಮವೊಂದು ಭರ್ಜರಿ ಆಫರ್ ನೀಡುತ್ತಿದೆ. ಒಂದು ಡಾಲರ್​ ಅಂದರೆ 84 ರೂಪಾಯಿಗೆ ಮನೆಯನ್ನು ನೀಡುವುದಾಗಿ ಘೋಷಿಸಿದೆ. ಮೆಡಿಟರೇನಿಯನ್ ಸಮುದ್ರದ ಸುಂದರವಾದ ದ್ವೀಪವಾದ ಸಾರ್ಡಿನಿಯಾದ ಓಲೋಲೈ ಎಂಬ ಹಳ್ಳಿಯು ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಕೇವಲ ಒಂದು ಯೂರೋಗೆ ಮನೆಗಳನ್ನು ನೀಡುತ್ತಿರುವ ಇಟಾಲಿಯನ್ ಹಳ್ಳಿಗಳಲ್ಲಿ ಒಂದಾಗಿದೆ.

ಮತ್ತಷ್ಟು ಓದಿ: 4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ

ಗ್ರಾಮವು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ, ನೀವು ಜಾಗತಿಕ ರಾಜಕೀಯದಿಂದ ಬೇಸತ್ತಿದ್ದೀರಾ, ನಿಮ್ಮ ಜೀವನವನ್ನು ಉತ್ತಮಗೊಳಿಸಲು ಮತ್ತು ಹೆಚ್ಚು ಸುರಕ್ಷಿತವಾಗಿಸಲು ನೀವು ಹೊಸ ಅವಕಾಶಗಳನ್ನು ಹುಡುಕುತ್ತಿರುವಿರಾ? ಹಾಗಾದರೆ ಇಲ್ಲಿಗೆ ಬನ್ನಿ ಎಂದು ಹೇಳಲಾಗಿತ್ತು, ಗ್ರಾಮವು ಕೇವಲ 1,150 ಜನಸಂಖ್ಯೆಯನ್ನು ಹೊಂದಿದೆ.

4 ವರ್ಷಗಳ ಹಡಗು ಪ್ರಯಾಣ ಹಳ್ಳಿ ಮಾತ್ರವಲ್ಲ, ಈ ಮೊದಲು ಫ್ಲೋರಿಡಾದ ಹಡಗು ಕಂಪನಿ ವಿಲ್ಲಾ ವಿ ರೆಸಿಡೆನ್ಸ್ ನಾಲ್ಕು ವರ್ಷಗಳ ಸ್ಕಿಪ್ ಫಾರ್ವರ್ಡ್ ಕ್ರೂಸ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಪ್ರಯಾಣದಲ್ಲಿ, ಅಮೆರಿಕದ ಜನರಿಗೆ ನಾಲ್ಕು ವರ್ಷಗಳ ಹಡಗು ಪ್ರಯಾಣವನ್ನು ನೀಡಲಾಗಿದೆ, ಇದು 140 ದೇಶಗಳ 425 ಕ್ಕೂ ಹೆಚ್ಚು ಬಂದರುಗಳನ್ನು ಭೇಟಿ ಮಾಡಲು ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ಈ ಸೌಲಭ್ಯವನ್ನು ಪಡೆಯುವ ಜನರು ನಿಗದಿತ ಮೊತ್ತವನ್ನು ಪಾವತಿಸುವ ಮೂಲಕ ಒಂದರಿಂದ ನಾಲ್ಕು ವರ್ಷಗಳ ಕಾಲ ವಿಹಾರದಲ್ಲಿ ಉಳಿದುಕೊಂಡಿರುವಾಗ ಪ್ರಪಂಚದ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ