ಇಂಧನ ಕ್ಷೇತ್ರದಲ್ಲಿ ಭಾರತ-ಜರ್ಮನಿ ಸಹಭಾಗಿತ್ವ ಅಗತ್ಯ: ನ್ಯೂಸ್9 ಗ್ಲೋಬಲ್ ಸಮಿಟ್ನಲ್ಲಿ ಈ ವಿಚಾರ ಚರ್ಚೆ
News9 Global Summit 2024: ನವೆಂಬರ್ 21ರಿಂದ 23ರವರೆಗೆ ಮೂರು ದಿನಗಳ ಕಾಲ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮ ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ನಡೆಯಲಿದೆ. ಟಿವಿ9 ನೆಟ್ವರ್ಕ್, ವಿಎಫ್ಬಿ ಸ್ಟುಟ್ಗಾರ್ಟ್ ಫುಟ್ಬಾಲ್ ತಂಡ ಜಂಟಿಯಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನಿಯೂ ಭಾಗಿಯಾಗಲಿದ್ದಾರೆ. ಎರಡೂ ದೇಶಗಳ ವ್ಯಾಪಾರ, ಉದ್ದಿಮೆ, ರಾಜಕೀಯ, ಹಣಕಾಸು, ಕ್ರೀಡೆ, ಮನರಂಜನೆ ಹೀಗೆ ವಿವಿಧ ಕ್ಷೇತ್ರಗಳ ಪ್ರಮುಖರು ಪಾಲ್ಗೊಳ್ಳುತ್ತಿದ್ದಾರೆ.
ನವದೆಹಲಿ, ನವೆಂಬರ್ 20: ಭಾರತ ಮತ್ತು ಜರ್ಮನಿ ಮಧ್ಯೆ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಂಬಂಧಗಳು ಪ್ರಬಲವಾಗಿವೆ. ಭಾರತದ ಪುರಾಣ, ವಿಜ್ಞಾನ, ಭಾಷೆಗಳನ್ನು ಜರ್ಮನಿಯರು ಚೆನ್ನಾಗಿ ಅರಿತುಕೊಂಡವರು. ಈ ಎರಡು ದೇಶಗಳ ನಡುವಿನ ವ್ಯಾಪಾರ ಇತ್ಯಾದಿ ಬಂಧ ಇನ್ನಷ್ಟು ಗಟ್ಟಿಗೊಳ್ಳುವ ಅಗತ್ಯತೆ ಇದೆ. ಅಂತೆಯೇ ಸಕಾಲದಲ್ಲಿ ನ್ಯೂಸ್9 ಗ್ಲೋಬಲ್ ಸಮಿಟ್ನ ಈ ವರ್ಷದ ಕಾರ್ಯಕ್ರಮವನ್ನು ಜರ್ಮನಿಯಲ್ಲಿ ಆಯೋಜಿಸಲಾಗಿದೆ. ಟಿವಿ9 ನೆಟ್ವರ್ಕ್ ವತಿಯಿಂದ ನವೆಂಬರ್ 21ರಿಂದ 23ರವರೆಗೆ ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ಗ್ಲೋಬಲ್ ಸಮಿಟ್ ನಡೆಯಲಿದೆ.
ಜರ್ಮನಿಯ ಟಾಪ್ ಫುಟ್ಭಾಲ್ ಲೀಗ್ನಲ್ಲಿ ಆಡುವ ವಿಎಫ್ಬಿ ಸ್ಟುಟ್ಗಾರ್ಟ್ ಕ್ಲಬ್ ಈ ಕಾರ್ಯಕ್ರಮದ ಸಹ-ಆಯೋಜಕ ಸಂಸ್ಥೆಯಾಗಿದೆ. ಬಾಡೆನ್ ಬುರ್ಟಂಬರ್ಗ್ ರಾಜ್ಯವೂ ಈ ಕಾರ್ಯಕ್ರಮವನ್ನು ಬೆಂಬಲಿಸಿದೆ. ಭಾರತ ಮತ್ತು ಜರ್ಮನಿ ಈ ಎರಡೂ ದೇಶಗಳಿಗೂ ಅನುಕೂಲವಾಗಬಲ್ಲಂತಹ ಪ್ರಮುಖ ಕ್ರಮಗಳ ಬಗ್ಗೆ ಚಿಂತನೆ, ವಿಚಾರ ವಿನಿಮಯ ನಡೆಯಲಿದೆ.
ಇದನ್ನೂ ಓದಿ: ಜರ್ಮನಿಯಲ್ಲಿ ನ್ಯೂಸ್9 ಜಾಗತಿಕ ಶೃಂಗಸಭೆಗೆ ವೇದಿಕೆ ಸಿದ್ಧ, ಪ್ರಧಾನಿ ಮೋದಿ ಸೇರಿ ಹಲವು ದಿಗ್ಗಜರು ಭಾಗಿ
ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮೊದಲಾದ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪ್ರಧಾನಿಯವರು ವಿಕಸಿತ ಭಾರತದ ಪರಿಕಲ್ಪನೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ, ಆ ಗುರಿ ಸಾಧನೆಗೆ ಭಾರತ ಯಾವೆಲ್ಲಾ ರೀತಿ ಸಜ್ಜಾಗಿದೆ, ಸಜ್ಜಾಗುತ್ತಿದೆ ಎಂಬುದನ್ನು ಜಾಹೀರುಗೊಳಿಸಲಿದ್ದಾರೆ.
ಈ ಶೃಂಗಸಭೆಯಲ್ಲಿ ನಡೆಯುವ ಗಹನ ಚರ್ಚಾ ವಿಷಯಗಳಲ್ಲಿ ಹವಾಮಾನ ಬದಲಾವಣೆಯ ಸಮಸ್ಯೆಯೂ ಒಂದಾಗಿರುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಇರುವ ಪರ್ಯಾಯ ಇಂಧನ ಆಯ್ಕೆಗಳಲ್ಲಿ ಭಾರತ ಮತ್ತು ಜರ್ಮನಿ ಹೇಗೆ ಸಹಭಾಗಿತ್ವ ಸಾಧಿಸಬಹುದು ಎಂದು ಒಂದು ಪ್ಯಾನಲ್ ಡಿಸ್ಕಶನ್ ನಡೆಯಲಿದೆ. ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ಪರ್ಯಾಯ ಹಸಿರು ಇಂಧನದ ಉತ್ಪಾದನೆ, ತಂತ್ರಜ್ಞಾನ ಅಭಿವೃದ್ಧಿ ಇತ್ಯಾದಿಯಲ್ಲಿ ಪರಸ್ಪರ ಸಹಕಾರ ಹೇಗೆ ಆಗಬಹುದು ಎಂಬುದನ್ನು ಈ ಸಂದರ್ಭದಲ್ಲಿ ಅವಲೋಕಿಸಲಾಗುತ್ತದೆ.
ಇದನ್ನೂ ಓದಿ: ಕರ್ನಾಟಕದಿಂದ ಹೊಸ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಸ್ ನೀತಿ; ಬೇರೆ ಬೇರೆ ಜಿಲ್ಲೆಗಳಲ್ಲಿ ಟೆಕ್ ವಲಯ ಅಭಿವೃದ್ಧಿಗೆ ಯೋಜನೆ
‘ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮವು ಭಾರತ ಮತ್ತು ಜರ್ಮನಿಯ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವತ್ತ ಗಮನ ಹರಿಸಲಿದೆ. ಎರಡೂ ದೇಶಗಳಲ್ಲಿನ ರಾಜಕೀಯ, ಉದ್ಯಮ, ನಾಗರಿಕ ಸಮಾಜ, ಕ್ರೀಡೆ, ಮನರಂಜೆ ಮೊದಲಾದ ಕ್ಷೇತ್ರಗಳ ಪ್ರಮುಖರನ್ನು ಒಂದು ವೇದಿಕೆಗೆ ತರುವ ಕೆಲಸ ಮಾಡುತ್ತಿದೆ’ ಎಂದು ಟಿವಿ9 ನೆಟ್ವರ್ಕ್ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:30 am, Wed, 20 November 24