ಶ್ರೀಲಂಕಾದಲ್ಲಿ ಲಕ್ಷಾಂತರ ಮಕ್ಕಳು ಹಸಿದ ಹೊಟ್ಟೆಯೊಂದಿಗೆ ಮಲಗುತ್ತಿದ್ದಾರೆ: ವಿಶ್ವಸಂಸ್ಥೆ

ದ್ವೀಪರಾಷ್ಟ್ರದಲ್ಲಿ ಆಹಾರ ಪದಾರ್ಥಗಳಾದ ಅಕ್ಕಿ, ಬೇಳೆ, ಖಾದ್ಯ ತೈಲ ಮತ್ತು ಇತರ ಸರಕುಗಳ ಬೆಲೆ ಗಗನಕ್ಕೆ ಮುಟ್ಟಿರುವ ಕಾರಣ ಬಡ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳು ಹಸಿದ ಹೊಟ್ಟೆಯಲ್ಲಿ ಮಲಗುತ್ತಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ಅಂಗವಾಗಿರುವ ಯುನಿಸೆಫ್ (UNICEF) ದಕ್ಷಿಣ ಏಷ್ಯಾ ನಿರ್ದೇಶಕ ಲರಿಯಾ ಅಡ್ಜೀ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಲಕ್ಷಾಂತರ ಮಕ್ಕಳು ಹಸಿದ ಹೊಟ್ಟೆಯೊಂದಿಗೆ ಮಲಗುತ್ತಿದ್ದಾರೆ: ವಿಶ್ವಸಂಸ್ಥೆ
ಶ್ರೀಲಂಕಾದ ಮಕ್ಕಳು ಉಪವಾಸ ಮಲಗುತ್ತಿದ್ದಾರೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 28, 2022 | 8:02 AM

ಕೊಲಂಬೋ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಮಕ್ಕಳು ಬರಿಹೊಟ್ಟೆಯಲ್ಲಿ ರಾತ್ರಿ ಹಾಸಿಗೆಗೆ ಹೋಗುತ್ತಿದ್ದಾರೆ ಎಂದು ಶುಕ್ರವಾರ ಹೇಳಿರುವ ವಿಶ್ವಸಂಸ್ಥೆಯು ಮುಂಬರುವ ದಿನಗಳಲ್ಲಿ ದಕ್ಷಿಣ ಏಷ್ಯಾದ ಬೇರೆ ರಾಷ್ಟ್ರಗಳಲ್ಲೂ ಸಹ ಇದೇ ಸ್ಥಿತಿ ಎದುರಾಗಬಹುದು ಅಂತ ಎಚ್ಚರಿಸಿದೆ. ರಫ್ತುಗಳನ್ನು ಖರೀದಿಸಲು ತೀವ್ರ ಸ್ವರೂಪದ ವಿದೇಶಿ ವಿನಿಮಯದ ಕೊರತೆಯನ್ನು ಶ್ರೀಲಂಕಾ ಸರ್ಕಾರ ಎದುರಿಸುತ್ತಿರುವುದರಿಂದ ಅಹಾರ ಸರಬರಾಜು, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಅಭಾವ ಉಂಟಾಗಿದೆ.

ದ್ವೀಪರಾಷ್ಟ್ರದಲ್ಲಿ ಆಹಾರ ಪದಾರ್ಥಗಳಾದ ಅಕ್ಕಿ, ಬೇಳೆ, ಖಾದ್ಯ ತೈಲ ಮತ್ತು ಇತರ ಸರಕುಗಳ ಬೆಲೆ ಗಗನಕ್ಕೆ ಮುಟ್ಟಿರುವ ಕಾರಣ ಬಡ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳು ಹಸಿದ ಹೊಟ್ಟೆಯಲ್ಲಿ ಮಲಗುತ್ತಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ಅಂಗವಾಗಿರುವ ಯುನಿಸೆಫ್ (UNICEF) ದಕ್ಷಿಣ ಏಷ್ಯಾ ನಿರ್ದೇಶಕ ಲರಿಯಾ ಅಡ್ಜೀ ಹೇಳಿದ್ದಾರೆ.

‘ಮಕ್ಕಳು ಬರಿ ಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ಬೆಳಗ್ಗೆ ಊಟ ಸಿಕ್ಕೀತೋ ಅಥವಾ ತಮ್ಮಲ್ಲಿಗೆ ಅದು ಎಲ್ಲಿಂದ ಬಂದೀತು ಎಂಬ ಯೋಚನೆಯಲ್ಲೇ ಅವರು ಹಾಸಿಗೆಗೆ ಹೋಗುತ್ತಿದ್ದಾರೆ,’ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ.

ಕಳೆದ ಏಪ್ರಿಲ್ ನಲ್ಲಿ ₹51 ಬಿಲಿಯನ್ ವಿದೇಶಿ ಸಾಲ ತೀರಿಸಬೇಕಿದ್ದ ಶ್ರೀಲಂಕಾ ಕೈ ಚೆಲ್ಲಿಬಿಟ್ಟಿತ್ತು. ಸದ್ಯದ ಬಿಕ್ಕಟ್ಟಿನಿಂದ ಪಾರು ಮಾಡಲು ಅಲ್ಲಿನ ಸರ್ಕಾರ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದೆ.

ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣದಿಂದ ಇಂಧನದ ಬೆಲೆ ಅಂಕೆ ಮೀರಿದ್ದು ಅದು ನೆರೆಹೊರೆಯ ರಾಷ್ಟ್ರಗಳ ಮೇಲೆ ಕೂಡ ಪರಿಣಾಮ ಬೀರುತ್ತಿದೆ ಎಂದು ಹೇಳಿರುವ ಲರಿಯಾ ಅಡ್ಜೀ ದಕ್ಷಿಣ ಏಷ್ಯಾ ಪ್ರಾಂತ್ಯದ ಇತರ ದೇಶಗಳಲ್ಲೂ ಅಹಾರ ಕೊರತೆಯ ಸಮಸ್ಯೆ ಎದುರಾಗಬಹುದು ಎಂದಿದ್ದಾರೆ.

‘ದಕ್ಷಿಣ ಏಷ್ಯಾದಾದ್ಯಂತ ತೀವ್ರ ಆರ್ಥಿಕ ಅನಿಶ್ಚಿತತೆ ಮತ್ತು ಹಣದುಬ್ಬರವು ಮಕ್ಕಳ ಜೀವಕ್ಕೆ ಮತ್ತಷ್ಟು ಅಪಾಯವನ್ನುಂಟು ಮಾಡಲಿದೆ ಎಂದು ಅವರು ಹೇಳಿದ್ದಾರೆ.

‘ಶ್ರೀಲಂಕಾದಲ್ಲಿ ನಾನೀಗ ನೋಡುತ್ತಿರುವುವುದುದ ದಕ್ಷಿಣ ಏಷ್ಯಾದ ಇತರ ದೇಶಗಳಿಗೆ ಎಚ್ಚರಿಕೆ ಗಂಟೆಯಾಗಿದೆ,’ ಎಂದು ಅಡ್ಜೀ ಹೇಳಿದ್ದಾರೆ.

ಶ್ರೀಲಂಕಾದ ಕನಿಷ್ಠ ಅರ್ಧದಷ್ಟು ಮಕ್ಕಳ ಜನಸಂಖ್ಯೆಯ ತುರ್ತು ಅಗತ್ಯಗಳನ್ನು ಪೂರೈಸಲು $25 ಮಿಲಿಯನ್‌ಗೆ ಹಣಕಾಸಿನ ನೆರವಿಗಾಗಿ ಯುನಿಸೆಫ್ ಅಪೀಲ್ ಮಾಡಿದೆ.

ಮಕ್ಕಳಲ್ಲಿ ಅತಿ ವೇಗವಾಗಿ ಹೆಚ್ಚುತ್ತಿರುವ ಅಪೌಷ್ಟಿಕತೆಯನ್ನು ನಿಭಾಯಿಸಲು ಸರ್ಕಾರವು ಈ ತಿಂಗಳು ತನ್ನದೇ ಆದ ಮನವಿಯೊಂದನ್ನು ಮಾಡಿದೆ.

2021ರ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಲಂಕಾದ ಶಿಶುವಿಹಾರಗಳಲ್ಲಿ ದಾಖಲಾಗಿರುವ 5,70,000 ಮಕ್ಕಳಲ್ಲಿ 1,27,000 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಅದಾದ ನಂತರ ಎದುರಾಗಿರುವ ಆಹಾರದ ಅಭಾವ ಮತ್ತು ಹೆಚ್ಚುತ್ತಿರುವ ಹಣದುಬ್ಬರದಿಂದ ಈ ಅಂಕಿ ಅಂಶಗಳು ದ್ವಿಗುಣಗೊಂಡಿರಬಹುದೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಪ್ರಸಕ್ತ ಸ್ಥಿತಿಯಿಂದ ಕಂಗೆಟ್ಟು ಹತಾಷರಾಗಿದ್ದ ಸಾವಿರಾರು ಲಂಕನ್ನರು ಕಳೆದ ತಿಂಗಳು ಪ್ರತಿಭಟನೆಗಿಳಿದು ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ ಒಳನುಗ್ಗಿ ದಾಂಧಲೆ ನಡೆಸಿದ ಬಳಿಕ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸಾ ದೇಶದಿಂದ ಪಲಾಯನ ಮಾಡಿ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ