Toxic Syrup: ಭಾರತದ 7 ಸಿರಪ್​ಗಳ ಕುರಿತು ತ್ವರಿತ ತನಿಖೆ ಆರಂಭಿಸಿದ ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆಯು ಭಾರತ ನಿರ್ಮಿತ 7 ಸಿರಪ್​ಗಳ ಕುರಿತು ತನಿಖೆ ಆರಂಭಿಸಿದೆ. ಗ್ಯಾಂಬಿಯಾದಲ್ಲಿ ಭಾರತ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ 66 ಮಕ್ಕಳು ಸಾವನ್ನಪ್ಪಿರುವ ಕುರಿತಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.

Toxic Syrup: ಭಾರತದ 7 ಸಿರಪ್​ಗಳ ಕುರಿತು ತ್ವರಿತ ತನಿಖೆ ಆರಂಭಿಸಿದ ವಿಶ್ವ ಆರೋಗ್ಯ ಸಂಸ್ಥೆ
ಸಿರಪ್​
Image Credit source: NDTV

Updated on: Jun 20, 2023 | 11:18 AM

ವಿಶ್ವ ಆರೋಗ್ಯ ಸಂಸ್ಥೆಯು ಭಾರತ ನಿರ್ಮಿತ 7 ಸಿರಪ್​ಗಳ ಕುರಿತು ತನಿಖೆ ಆರಂಭಿಸಿದೆ. ಗ್ಯಾಂಬಿಯಾದಲ್ಲಿ ಭಾರತ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ 66 ಮಕ್ಕಳು ಸಾವನ್ನಪ್ಪಿರುವ ಕುರಿತಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಜಾಗತಿಕವಾಗಿ 300 ಕ್ಕೂ ಹೆಚ್ಚು ಸಾವುಗಳಿಗೆ ಸಂಬಂಧಿಸಿದ ವಿಷಪೂರಿತ ಔಷಧಗಳು ಮತ್ತು ಸಿರಪ್‌ಗಳ ತನಿಖೆಯ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇಂದು ಏಳು ಭಾರತ ನಿರ್ಮಿತ ಸಿರಪ್‌ಗಳನ್ನು ಮುಖ್ಯವಾಗಿ ತನಿಖೆ ಮಾಡಬೇಕೆಂದು ಕೇಳಿದೆ.

ಭಾರತ ಮತ್ತು ಇಂಡೋನೇಷ್ಯಾದಿಂದ ತಯಾರಿಸಿದ 20 ಸಿರಪ್‌ಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ. ಈ ಔಷಧಿಗಳಲ್ಲಿ ಕೆಮ್ಮು ಸಿರಪ್‌ಗಳು ಮತ್ತು ವಿವಿಧ ಔಷಧಿಗಳಿಂದ ತಯಾರಿಸಲಾದ ವಿಟಮಿನ್‌ಗಳು ಸೇರಿವೆ.

ಮತ್ತಷ್ಟು ಓದಿ: Cough Syrup: ಭಾರತದಲ್ಲಿ ತಯಾರಾದ ಶೀತ-ಕೆಮ್ಮಿನ ಔಷಧಿ ಸೇವಿಸಿ ಆಫ್ರಿಕಾದಲ್ಲಿ 66 ಮಕ್ಕಳ ಸಾವು

ಉಜ್ಬೇಕಿಸ್ತಾನ್, ಗ್ಯಾಂಬಿಯಾ ಮತ್ತು ನೈಜೀರಿಯಾ ಸೇರಿದಂತೆ ಕೆಲವು ದೇಶಗಳು ಇತ್ತೀಚೆಗೆ ಭಾರತದಲ್ಲಿ ತಯಾರಿಸಿದ ಔಷಧಿಗಳನ್ನು ಸೇವಿಸಿ ಸಾವು ಸಂಭವಿಸಿತ್ತು. ಈ ಹಿಂದೆ ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನದಲ್ಲಿ ಸಂಭವಿಸಿದ ಸಾವುಗಳಿಗೆ ಸಂಬಂಧಿಸಿದಂತೆ ಭಾರತ ನಿರ್ಮಿತ ಕೆಮ್ಮಿನ ಸಿರಪ್‌ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ವೈದ್ಯಕೀಯ ಉತ್ಪನ್ನ ಎಚ್ಚರಿಕೆಗಳನ್ನು ಎತ್ತಿದೆ.

ಭಾರತದ ಡ್ರಗ್ ಕಂಟ್ರೋಲರ್ ನೋಯ್ಡಾದ ಮರಿಯನ್ ಬಯೋಟೆಕ್, ಹರಿಯಾಣ ಮೂಲದ ಮೈಡೆನ್ ಫಾರ್ಮಾಸ್ಯುಟಿಕಲ್ಸ್, ಚೆನ್ನೈ ಮೂಲದ ಗ್ಲೋಬಲ್ ಫಾರ್ಮಾ ಮತ್ತು ಪಂಜಾಬ್‌ನ ಕ್ಯೂಪಿ ಫಾರ್ಮಾಕೆಮ್ ಸೇರಿದಂತೆ ತಯಾರಕರ ಮೇಲೆ ತ್ವರಿತ ತನಿಖೆಯನ್ನು ಪ್ರಾರಂಭಿಸಿದೆ, ಅವುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:17 am, Tue, 20 June 23