ಇರಾನ್ನಲ್ಲಿ ಭೀಕರ ಅಪಘಾತ; ಬುಲ್ಡೋಜರ್‌ಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ರೈಲು, 22 ಪ್ರಯಾಣಿಕರ ಸಾವು

| Updated By: ಆಯೇಷಾ ಬಾನು

Updated on: Jun 09, 2022 | 8:01 AM

ರೈಲು ಹಳಿತಪ್ಪಿ 22 ಪ್ರಯಾಣಿಕರು ಮೃತಪಟ್ಟಿದ್ದು 90 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇರಾನ್ನಲ್ಲಿ ಭೀಕರ ಅಪಘಾತ; ಬುಲ್ಡೋಜರ್‌ಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ರೈಲು, 22 ಪ್ರಯಾಣಿಕರ ಸಾವು
ಇರಾನ್ನಲ್ಲಿ ಭೀಕರ ಅಪಘಾತ; ಬುಲ್ಡೋಜರ್‌ಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ರೈಲು
Follow us on

ಇರಾನ್: ಇರಾನ್ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಪೂರ್ವ ಇರಾನ್ ಮೂಲಕ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ರೈಲು ಬುಲ್ಡೋಜರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ರೈಲು ಹಳಿತಪ್ಪಿ 22 ಪ್ರಯಾಣಿಕರು ಮೃತಪಟ್ಟಿದ್ದು 90 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರೈಲಿನಲ್ಲಿ ಸುಮಾರು 350 ಜನ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ರಾಜಧಾನಿ ಟೆಹ್ರಾನ್‌ನ ಆಗ್ನೇಯಕ್ಕೆ ಸುಮಾರು 340 ಮೈಲು ಅಥವಾ 550 ಕಿಲೋಮೀಟರ್ ದೂರದಲ್ಲಿರುವ ಮರುಭೂಮಿ ನಗರವಾದ ತಬಾಸ್ ಬಳಿ ಬುಧವಾರ ಮುಂಜಾನೆಯ ಕತ್ತಲೆಯಲ್ಲಿ ಭೀಕರ ಅಪಘಾತ ನಡೆದು ಹೋಗಿದೆ. ಆಂಬ್ಯುಲೆನ್ಸ್‌ಗಳು ಮತ್ತು ಹೆಲಿಕಾಪ್ಟರ್‌ಗಳೊಂದಿಗೆ ರಕ್ಷಣಾ ತಂಡಗಳು ಆಗಮಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: Reserve Bank Of India: ಕೋ-ಆಪರೇಟಿವ್ ಬ್ಯಾಂಕ್​ಗಳ ಸಾಲ ನೀಡುವ ಮೊತ್ತದ ಮಿತಿ ದುಪ್ಪಟ್ಟು ಮಾಡಿದ ಆರ್​ಬಿಐ

ಹಿಂದೆ ಇದೇ ರೀತಿಯ ಅಪಘಾತ ನಡೆದಿತ್ತು
2004 ರಲ್ಲಿ ಪೆಟ್ರೋಲ್, ರಸಗೊಬ್ಬರ ಮತ್ತು ಹತ್ತಿ ತುಂಬಿದ ರೈಲೊಂದು ಈಶಾನ್ಯ ನಗರವಾದ ನೇಶಾಬುರ್ ಬಳಿ ಅಪಘಾತಕ್ಕೀಡಾಗಿ ಸುಮಾರು 320 ಜನರು ಮೃತಪಟ್ಟಿದ್ದರು. ಅಲ್ಲದೆ 2016 ರಲ್ಲಿ, ಉತ್ತರ ಪ್ರಾಂತ್ಯದ ಸೆಮ್ನಾನ್‌ನಲ್ಲಿ ಕೆಟ್ಟುಹೋದ ರೈಲು ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದು 49 ಜನರು ಸಾವನ್ನಪ್ಪಿದರು. ಈ ಘಟನೆಯ ನಂತರ ಇರಾನ್ನಲ್ಲಿ ನಿನ್ನೆ ಮತ್ತೊಂದು ದುರಂತ ನಡೆದಿದ್ದು ಈ ವರೆಗೆ 22 ಮಂದಿ ಮೃತಪಟ್ಟಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:44 am, Thu, 9 June 22