
ಇಸ್ಲಮಾಬಾದ್, ಜುಲೈ 18: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan)ರಾವಲ್ಪಿಂಡಿಯ ಅಡಿಯಾಲಾ ಜೈಲಿನಿಂದ ಕಠಿಣ ಎಚ್ಚರಿಕೆ ನೀಡಿದ್ದಾರೆ. ಜೈಲಿನಲ್ಲಿ ತಮಗೆ ಏನಾದರೂ ಸಂಭವಿಸಿದರೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೇ ಜವಾಬ್ದಾರರು ಎಂದಿದ್ದ ಅವರು ಇದೀಗ ಜೈಲಿನಲ್ಲಿ ನನ್ನನ್ನು ಉಗ್ರನಿಗಿಂತ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಬಹು ಪ್ರಕರಣಗಳಲ್ಲಿ ಕೇಸ್ ದಾಖಲಾಗಿದ್ದರಿಂದ ಆಗಸ್ಟ್ 2023ರಿಂದ ಜೈಲಿನಲ್ಲಿರುವ 72 ವರ್ಷದ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಈ ಹಿಂದೆ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಮಾಜಿ ಪ್ರಧಾನಿಯಾದರೂ ನನ್ನನ್ನು ಭಯೋತ್ಪಾದಕನಿಗಿಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ನನ್ನ ಹಾಗೂ ನನ್ನ ಪತ್ನಿ ಬುಷ್ರಾ ಬೀಬಿ ಅವರ ಮೇಲಿನ ದೌರ್ಜನ್ಯ ತೀವ್ರಗೊಳ್ಳುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ನನ್ನ ಮೂಲಭೂತ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಜೈಲಿನಲ್ಲಿ ನಾನು ಎದುರಿಸುತ್ತಿರುವ ಕಠಿಣ ವರ್ತನೆ ತೀವ್ರಗೊಂಡಿದೆ. ನನ್ನ ಪತ್ನಿ ಬುಷ್ರಾ ಬೀಬಿಗೂ ಇದು ಅನ್ವಯಿಸುತ್ತದೆ. ಅವರ ಸೆಲ್‌ನಲ್ಲಿನ ಟಿವಿಯೂ ಇಲ್ಲ. ಮಾನವ ಮತ್ತು ಕೈದಿಗಳಿಗೆ ಕಾನೂನುಬದ್ಧವಾಗಿ ನೀಡಲಾದ ಎಲ್ಲಾ ಮೂಲಭೂತ ಹಕ್ಕುಗಳನ್ನು ನಮ್ಮಿಬ್ಬರಿಂದು ಕಸಿದುಕೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲೇ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೊಲ್ಲಲು ಪಿತೂರಿ, ಅಲೀಮಾ ಹೇಳಿದ್ದೇನು?
ಕೊಲೆಗೆ ಶಿಕ್ಷೆ ಅನುಭವಿಸುತ್ತಿರುವ ಮಿಲಿಟರಿ ಅಧಿಕಾರಿಯೊಬ್ಬರು ಜೈಲಿನಲ್ಲಿ ವಿಐಪಿ ಚಿಕಿತ್ಸೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ ಅವರು ಶಿಕ್ಷೆಗೊಳಗಾದ ಭಯೋತ್ಪಾದಕರಿಗಿಂತ ಕೆಟ್ಟದಾಗಿ ತನ್ನನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ನಾನು ನಿರಂತರ ನಿಂದನೆಗೆ ಒಳಗಾಗಿದ್ದೇನೆ. ಆದರೆ ಅವರು ಏನೇ ಮಾಡಿದರೂ, ನಾನು ಎಂದಿಗೂ ದಬ್ಬಾಳಿಕೆಯ ಮುಂದೆ ತಲೆಬಾಗಿಲ್ಲ, ಮುಂದೆಯೂ ತಲೆಬಾಗುವುದಿಲ್ಲ” ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ