ಶಾಂತಿ ಒಪ್ಪಂದ ರದ್ದುಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ವಿರುದ್ಧ ತಾಲಿಬಾನ್ ಆಕ್ರೋಶ ವ್ಯಕ್ತಪಡಿಸಿದೆ.
ತಾಲಿಬಾನ್ ಜೊತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆಗಳನ್ನ ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ಇದು ಅಮೆರಿಕನ್ನರಿಗೆ ಹೊರತುಪಡಿಸಿ ಬೇರೆ ಯಾರಿಗೂ ಹಾನಿ ಮಾಡುವುದಿಲ್ಲ ಎಂದು ತಾಲಿಬಾನ್ ಪ್ರಕಟಣೆಯಲ್ಲಿ ತಿಳಿಸಿದೆ.
ಮಾತುಕತೆಗಳನ್ನ ರದ್ದುಗೊಳಿಸುವುದರಿಂದ ಅಮೆರಿಕಗೆ ಹೆಚ್ಚಿನ ನಷ್ಟವಾಗಬಹುದು. ಅವರ ಹೇಳಿಕೆ ಶಾಂತಿ ವಿರೋಧಿ ನೀತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದೂ ತಾಲಿಬಾನ್ ಹೇಳಿದೆ.
ಇತ್ತೀಚೆಗೆ ತಾಲಿಬಾನ್ನ ಕಾಬೂಲ್ನಲ್ಲಿ ನಡೆದ ದಾಳಿಯಲ್ಲಿ ನಮ್ಮ ಓರ್ವ ಮಹಾನ್ ಸೈನಿಕರನ್ನು ಕೊಲ್ಲಲಾಗಿದೆ, ಈ ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ ಅಂತ ಟ್ರಂಪ್ ಟ್ವೀಟ್ ಮಾಡಿದ್ದಾರೆ. ತಾನು ತಕ್ಷಣ ಸಭೆ ಮತ್ತು ಶಾಂತಿ ಮಾತುಕತೆಯನ್ನು ಹಿಂಪಡೆದಿದ್ದೇನೆ ಎಂದೂ ಟ್ರಂಪ್ ತಿಳಿಸಿದ್ದರು.