ಧಮ್ಕಿಯಿಂದ ಪ್ರಯೋಜನವಾಗಿಲ್ಲ, ಇರಾನ್ ವಿರುದ್ಧ ನೇರ ಸಮರಕ್ಕೆ ಸಿದ್ಧವಾದ ಅಮೆರಿಕ

ಎಚ್ಚರಿಕೆಯ ಮೇಲೆ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್​​ಗೆ ಕಿಮ್ಮತ್ತಿನ ಬೆಲೆಯೂ ಕೊಡದ ಇರಾನ್ ವಿರುದ್ಧ ನೇರ ಸಮರ ಸಾರಲು ಅಮೆರಿಕ ಸಜ್ಜಾಗಿದೆ. ದಾಳಿ ಯೋಜನೆಗೆ ಟ್ರಂಪ್ ಅನುಮೋದನೆ ನೀಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಅಂತಿಮ ಆದೇಶದ ನಂತರ ದಾಳಿ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಮಾತನಾಡಿ, ಒಂದೊಮ್ಮೆ ಅಮೆರಿಕ ಇಸ್ರೇಲ್​ ಹಾಗೂ ನಮ್ಮ ನಡುವಿನ ಯುದ್ಧದಲ್ಲಿ ಮಧ್ಯೆ ಬಂದರೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಧಮ್ಕಿಯಿಂದ ಪ್ರಯೋಜನವಾಗಿಲ್ಲ, ಇರಾನ್ ವಿರುದ್ಧ ನೇರ ಸಮರಕ್ಕೆ ಸಿದ್ಧವಾದ ಅಮೆರಿಕ
ಡೊನಾಲ್ಡ್​ ಟ್ರಂಪ್

Updated on: Jun 19, 2025 | 8:30 AM

ವಾಷಿಂಗ್ಟನ್, ಜೂನ್ 19: ಎಚ್ಚರಿಕೆಯ ಮೇಲೆ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​​(Donald Trump)ಗೆ ಕಿಮ್ಮತ್ತಿನ ಬೆಲೆಯೂ ಕೊಡದ ಇರಾನ್ ವಿರುದ್ಧ ನೇರ ಸಮರ ಸಾರಲು ಅಮೆರಿಕ ಸಜ್ಜಾಗಿದೆ. ದಾಳಿ ಯೋಜನೆಗೆ ಟ್ರಂಪ್ ಅನುಮೋದನೆ ನೀಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಅಂತಿಮ ಆದೇಶದ ನಂತರ ದಾಳಿ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಮಾತನಾಡಿ, ಒಂದೊಮ್ಮೆ ಅಮೆರಿಕ ಇಸ್ರೇಲ್​ ಹಾಗೂ ನಮ್ಮ ನಡುವಿನ ಯುದ್ಧದಲ್ಲಿ ಮಧ್ಯೆ ಬಂದರೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಅಮೆರಿಕದ ಮಿಲಿಟರಿ ಹಸ್ತಕ್ಷೇಪಕ್ಕೆ ಬಲವಾಗಿ ಪ್ರತಿಕ್ರಿಯಿಸಲಾಗುವುದು, ಇದು ಅಮೆರಿಕಕ್ಕೆ ಎಂದೂ ಸರಿಪಡಿಸಲಾಗದ ಹಾನಿ ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ. ಡೊನಾಲ್ಡ್​ ಟ್ರಂಪ್ ಇರಾನ್​ಗೆ ಬೇಷರತ್ತಾದ ಶರಣಾಗತಿಗೆ ಒತ್ತಾಯಿಸಿದ್ದರು. ಅಧ್ಯಕ್ಷ ಟ್ರಂಪ್ ಇರಾನ್ ಮೇಲಿನ ದಾಳಿಗೆ ಅನುಮೋದನೆ ನೀಡಿದ್ದಾರೆ, ಆದರೆ ಅವರು ಅಧ್ಯಕ್ಷರಾಗಲು ಸಹಾಯ ಮಾಡಿದ ಗುಂಪುಗಳು ದೇಶವನ್ನು ಹೊಸ ಯುದ್ಧಕ್ಕೆ ತಳ್ಳುವುದನ್ನು ಇಷ್ಟಪಡುವುದಿಲ್ಲ.

ಟ್ರಂಪ್ ಅವರನ್ನು ಅಧಿಕಾರಕ್ಕೆ ತಂದ ಬೆಂಬಲಿಗರಲ್ಲಿ ಒಡಕುಂಟಾಗಿದೆ. ರಿಪಬ್ಲಿಕನ್ ಬೆಂಬಲಿಗರಲ್ಲಿ ಒಬ್ಬರಾದ ಉನ್ನತ ಲೆಫ್ಟಿನೆಂಟ್ ಸ್ಟೀವ್ ಬ್ಯಾನನ್ ಅವರು ಇರಾನ್ ಮೇಲಿನ ದಾಳಿಯನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್ ಮೇಲೆ ದಾಳಿ; ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪಿಎಂ ನೆತನ್ಯಾಹು
ಇಸ್ರೇಲ್ ಹಠಾತ್ ದಾಳಿಗೆ ಬೆಚ್ಚಿಬಿದ್ದ ಇರಾನ್: ಪರಮಾಣು ನೆಲೆಗಳೇ ಗುರಿ
ರಾತ್ರೋರಾತ್ರಿ ಉಕ್ರೇನ್ ಮೇಲೆ 479 ಡ್ರೋನ್ ದಾಳಿ ನಡೆಸಿದ ರಷ್ಯಾ

ಇರಾನ್ ವಾಯುಪ್ರದೇಶದ ಮೇಲೆ ಅಮೆರಿಕ ಈಗ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ಉತ್ತಮ ಶಸ್ತ್ರಾಸ್ತ್ರಗಳು ಮತ್ತು ಸ್ಕೈ ಟ್ರ್ಯಾಕರ್‌ಗಳನ್ನು ಹೊಂದಿದೆ, ಆದರೆ ಅಮೆರಿಕಕ್ಕಿಂತ ಉತ್ತಮವಾಗಿಲ್ಲ ಎಂದು ಅವರು ಹೇಳಿದರು. ಇಸ್ರೇಲ್-ಇರಾನ್ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಂದಿದ್ದು, ಇದು ಇರಾನ್‌ನಲ್ಲಿ ಮಾತ್ರವಲ್ಲದೆ ಜಾಗತಿಕ ನಾಯಕರಲ್ಲಿಯೂ ಭೀತಿಯನ್ನು ಸೃಷ್ಟಿಸಿದೆ.

ಮತ್ತಷ್ಟು ಓದಿ: ಇಸ್ರೇಲ್ ಎದುರು ಮಂಡಿಯೂರುವಂತೆ ಇರಾನ್​​ಗೆ ಟ್ರಂಪ್ ಒತ್ತಡ, ಟೆಹ್ರಾನ್​ ಮೇಲೆ ತೀವ್ರಗೊಂಡ ಇಸ್ರೇಲ್ ದಾಳಿ

ಶೃಂಗಸಭೆ ಮುಗಿಸಿ ಬೇಗ ಅಮೆರಿಕಕ್ಕೆ ಹೊರ ಟ್ರಂಪ್ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬೇಗನೆ ಅಮೆರಿಕಕ್ಕೆ ವಾಪಸಾಗಿದ್ದಾರೆ. ಟ್ರಂಪ್ ಮಂಗಳವಾರ ತಡರಾತ್ರಿಯವರೆಗೆ ಕೆನಡಾದಲ್ಲಿಯೇ ಇರಲು ಯೋಜಿಸಿದ್ದರು. ಜಿ-7 ನಾಯಕರು ಇಸ್ರೇಲ್ ಅನ್ನು ಬೆಂಬಲಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದರು.ಇದು ಇರಾನ್​​ನ್ನು ಕೆರಳಿಸಿತ್ತು.​​

ಇರಾನ್‌ಗೆ ಟ್ರಂಪ್ ಎಚ್ಚರಿಕೆ ಟ್ರಂಪ್ ಇರಾನ್​​ಗೆ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು. ಟೆಹ್ರಾನ್ ಜನರು ತಕ್ಷಣ ನಗರವನ್ನು ಖಾಲಿ ಮಾಡಬೇಕು ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ನಾನು ಹೇಳಿದ್ದ ಒಪ್ಪಂದಕ್ಕೆ ಇರಾನ್ ಸಹಿ ಹಾಕಲಿಲ್ಲ, ಈಗ ಪರಿಣಾಮವನ್ನು ಎದುರಿಸಲಿ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ನಾವು ಬಿಡುವುದಿಲ್ಲ ಎಂದು ಹೇಳಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:28 am, Thu, 19 June 25