AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್ ಎದುರು ಮಂಡಿಯೂರುವಂತೆ ಇರಾನ್​​ಗೆ ಟ್ರಂಪ್ ಒತ್ತಡ, ಟೆಹ್ರಾನ್​ ಮೇಲೆ ತೀವ್ರಗೊಂಡ ಇಸ್ರೇಲ್ ದಾಳಿ

Israel-Iran Conflict: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧವು ತುಂಬಾ ಅಪಾಯಕಾರಿ ಹಂತದಲ್ಲಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲರೂ ತಕ್ಷಣ ರಾಜಧಾನಿ ಟೆಹ್ರಾನ್ ಅನ್ನು ಖಾಲಿ ಮಾಡಬೇಕೆಂದು ಎಚ್ಚರಿಸಿದ್ದಾರೆ. ವಿಶೇಷವೆಂದರೆ ಇಸ್ರೇಲ್ ಈಗಾಗಲೇ ನಾಗರಿಕ ಗುರಿಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ. ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು ಎಂದು ಟ್ರಂಪ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಇಸ್ರೇಲ್ ಎದುರು ಬೇಷರತ್ತಾಗಿ ಶರಣಾಗುವಂತೆ ಟ್ರಂಪ್ ಒತ್ತಡ ಹಾಕಿದ್ದಾರೆ.

ಇಸ್ರೇಲ್ ಎದುರು ಮಂಡಿಯೂರುವಂತೆ ಇರಾನ್​​ಗೆ ಟ್ರಂಪ್ ಒತ್ತಡ, ಟೆಹ್ರಾನ್​ ಮೇಲೆ ತೀವ್ರಗೊಂಡ ಇಸ್ರೇಲ್ ದಾಳಿ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Jun 18, 2025 | 8:06 AM

Share

ವಾಷಿಂಗ್ಟನ್, ಜೂನ್ 18:   ಇರಾನ್(Iran)​ ಹಾಗೂ ಇಸ್ರೇಲ್(Israel) ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ. ಟೆಹ್ರಾನ್(Tehran) ಜನ ತಮ್ಮ ಮನೆಗಳನ್ನು ತೊರೆದು ಹೋಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ನೀಡಿದ್ದ ಎಚ್ಚರಿಕೆ ಬಳಿಕ ಇರಾನ್ ಮೇಲೆ ಇಸ್ರೇಲ್​ ದಾಳಿ ತೀವ್ರಗೊಂಡಿದೆ. ಬುಧವಾರ ಮುಂಜಾನೆ ಇಸ್ರೇಲ್​​ ಇರಾನ್ ರಾಜಧಾನಿ ಮೇಲೆ ವಾಯು ದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಟೆಹ್ರಾನ್ ಜನರಿಗೆ ನಗರವನ್ನು ತೊರೆಯುವಂತೆ ಜತೆಗೆ  ಇಸ್ರೇಲ್ ಎದುರು ಯಾವುದೇ ಷರತ್ತುಗಳಿಲ್ಲದೆ ಶರಣಾಗುವಂತೆ ಒತ್ತಾಯಿಸಿದ್ದರು. ಇದಾದ ಬಳಿಕ ದಾಳಿ ಮತ್ತಷ್ಟು ಹೆಚ್ಚಿದೆ. ಟೆಹ್ರಾನ್ ನಿವಾಸಿಗಳು ಗುಂಪು ಗುಂಪಾಗಿ ಮನೆಗಳನ್ನು ತೊರೆದಿದ್ದಾರೆ.

ಇರಾನ್ ವಾಯು ಪ್ರದೇಶದ ಮೇಲೆ ಅಮೆರಿಕದ ಹಿಡಿತ ಇರಾನ್ ವಾಯುಪ್ರದೇಶದ ಮೇಲೆ ಅಮೆರಿಕ ಈಗ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ಉತ್ತಮ ಶಸ್ತ್ರಾಸ್ತ್ರಗಳು ಮತ್ತು ಸ್ಕೈ ಟ್ರ್ಯಾಕರ್‌ಗಳನ್ನು ಹೊಂದಿದೆ, ಆದರೆ ಅಮೆರಿಕಕ್ಕಿಂತ ಉತ್ತಮವಾಗಿಲ್ಲ ಎಂದು ಅವರು ಹೇಳಿದರು. ಇಸ್ರೇಲ್-ಇರಾನ್ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಂದಿದ್ದು, ಇದು ಇರಾನ್‌ನಲ್ಲಿ ಮಾತ್ರವಲ್ಲದೆ ಜಾಗತಿಕ ನಾಯಕರಲ್ಲಿಯೂ ಭೀತಿಯನ್ನು ಸೃಷ್ಟಿಸಿದೆ.

ಇರಾನ್‌ಗೆ ಟ್ರಂಪ್ ಎಚ್ಚರಿಕೆ ಟ್ರಂಪ್ ಇರಾನ್​​ಗೆ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು. ಟೆಹ್ರಾನ್ ಜನರು ತಕ್ಷಣ ನಗರವನ್ನು ಖಾಲಿ ಮಾಡಬೇಕು ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ನಾನು ಹೇಳಿದ್ದ ಒಪ್ಪಂದಕ್ಕೆ ಇರಾನ್ ಸಹಿ ಹಾಕಲಿಲ್ಲ, ಈಗ ಪರಿಣಾಮವನ್ನು ಎದುರಿಸಲಿ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ನಾವು ಬಿಡುವುದಿಲ್ಲ ಎಂದು ಹೇಳಿದ್ದರು.

ಮತ್ತಷ್ಟು ಓದಿ: ಇರಾನ್ ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ

ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದವೇನು? 2018 ರಲ್ಲಿ, ಅಮೆರಿಕವು ಇರಾನ್ ಜೊತೆಗಿನ ಜಂಟಿ ಸಮಗ್ರ ಕ್ರಿಯಾ ಯೋಜನೆಯಿಂದ (GCPOA) ಹಿಂದೆ ಸರಿದಿತ್ತು. ಒಪ್ಪಂದದ ಅಡಿಯಲ್ಲಿ, ಇರಾನ್ ಮಿಲಿಟರಿ ಉದ್ದೇಶಗಳಿಗಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ನಿರ್ಧರಿಸಲಾಯಿತು.

ಶೃಂಗಸಭೆ ಮುಗಿಸಿ ಬೇಗ ಅಮೆರಿಕಕ್ಕೆ ಹೊರ ಟ್ರಂಪ್ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬೇಗನೆ ಅಮೆರಿಕಕ್ಕೆ ವಾಪಸಾಗಿದ್ದಾರೆ. ಟ್ರಂಪ್ ಮಂಗಳವಾರ ತಡರಾತ್ರಿಯವರೆಗೆ ಕೆನಡಾದಲ್ಲಿಯೇ ಇರಲು ಯೋಜಿಸಿದ್ದರು. ಜಿ-7 ನಾಯಕರು ಇಸ್ರೇಲ್ ಅನ್ನು ಬೆಂಬಲಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದರು.ಇದು ಇರಾನ್​​ನ್ನು ಕೆರಳಿಸಿತ್ತು. ​​

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ