AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದೇ ನಿರ್ದಿಷ್ಟ ಗಡುವಿಲ್ಲ, ಉಕ್ರೇನ್ ಯುದ್ಧ ಕೊನೆಗೊಳಿಸುವತ್ತ ಅಷ್ಟೇ ಗಮನ: ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ಕುರಿತು ನಿರ್ಣಾಯಕ ಮಾತುಕತೆಗಾಗಿ ಉಕ್ರೇನ್‌ನ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಮ್ಮ ಫ್ಲೋರಿಡಾ ಎಸ್ಟೇಟ್‌ಗೆ ಸ್ವಾಗತಿಸಿದರು. ಇಬ್ಬರು ನಾಯಕರು ಮಾರ್-ಎ-ಲಾಗೊ ರೆಸಾರ್ಟ್‌ನ ಹೊರಗೆ ನಿಂತು ವರದಿಗಾರರನ್ನು ಉದ್ದೇಶಿಸಿ ಮಾತನಾಡಿದರು.ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ರಾಜತಾಂತ್ರಿಕ ಪ್ರಯತ್ನಗಳು ಅಂತಿಮ ಹಂತದಲ್ಲಿವೆ ಎಂದರು.

ಯಾವುದೇ ನಿರ್ದಿಷ್ಟ ಗಡುವಿಲ್ಲ, ಉಕ್ರೇನ್ ಯುದ್ಧ ಕೊನೆಗೊಳಿಸುವತ್ತ ಅಷ್ಟೇ ಗಮನ: ಟ್ರಂಪ್
ಡೊನಾಲ್ಡ್​ ಟ್ರಂಪ್, ಝೆಲೆನ್ಸ್ಕಿ
ನಯನಾ ರಾಜೀವ್
|

Updated on: Dec 29, 2025 | 7:23 AM

Share

ವಾಷಿಂಗ್ಟನ್, ಡಿಸೆಂಬರ್ 29: ಉಕ್ರೇನ್(Ukraine) ಯುದ್ಧ ಕೊನೆಗೊಳಿಸುವ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಜತೆ ಭಾನುವಾರ ಮಾತುಕತೆ ನಡೆಸಿದರು. ಈ ಮಾತುಕತೆ ಬಳಿಕ ಡೊನಾಲ್ಡ್​ ಟ್ರಂಪ್ ಮಾತನಾಡಿ, ಯುದ್ಧ ನಿಲ್ಲಿಸಲು ಯಾವುದೇ ನಿರ್ದಿಷ್ಟ ಗಡುವಿಲ್ಲ, ಉಕ್ರೇನ್ ಯುದ್ಧ ಕೊನೆಗೊಳಿಸುವತ್ತ ಗಮನ ಎಂದು ಹೇಳಿದ್ದಾರೆ.

ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ಕುರಿತು ನಿರ್ಣಾಯಕ ಮಾತುಕತೆಗಾಗಿ ಅಮೆರಿಕದ ಡೊನಾಲ್ಡ್ ಟ್ರಂಪ್ ಭಾನುವಾರ ತಮ್ಮ ಫ್ಲೋರಿಡಾ ಎಸ್ಟೇಟ್‌ಗೆ ಉಕ್ರೇನ್‌ನ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಬರಮಾಡಿಕೊಂಡಿದ್ದರು.

ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ರಾಜತಾಂತ್ರಿಕ ಪ್ರಯತ್ನಗಳು ಅಂತಿಮ ಹಂತಗಳಲ್ಲಿವೆ ಎಂದು ಟ್ರಂಪ್ ಹೇಳಿದ್ದಾರೆ. ಇಲ್ಲದಿದ್ದರೆ, ಇದು ದೀರ್ಘಕಾಲದವರೆಗೆ ಮುಂದುವರಿಯುತ್ತದೆ ಎಂದು ಟ್ರಂಪ್ ಹೇಳಿದರು, ಈ ಪ್ರಕ್ರಿಯೆಗೆ ಅವರು ಯಾವುದೇ ಗಡುವನ್ನು ಹೊಂದಿಲ್ಲ ಎಂದರು.

ಮತ್ತಷ್ಟು ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿ ಹುಬ್ಬೇರಿಸಿದ ಡೊನಾಲ್ಡ್ ಟ್ರಂಪ್; ಚೀನಾ ಜೊತೆ ಅಮೆರಿಕ ಸೂಪರ್ ಡೀಲ್

ಝೆಲೆನ್ಸ್ಕಿಯೊಂದಿಗಿನ ಭೇಟಿಗೆ ಕೆಲವೇ ಗಂಟೆಗಳ ಮೊದಲು ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಫಲದಾಯಕ ಮಾತುಕತೆ ನಡೆಸಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಉಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಪೂರ್ವ ಡಾನ್‌ಬಾಸ್ ಪ್ರದೇಶದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ರಷ್ಯಾ ಕೈವ್‌ಗೆ ಒತ್ತಾಯಿಸಿತು.

ಉಕ್ರೇನ್‌ನ ಭದ್ರತೆಯನ್ನು ಖಾತರಿಪಡಿಸಲು ಬಲವಾದ ಒಪ್ಪಂದವಿರುತ್ತದೆ ಮತ್ತು ಇದು ಯುರೋಪಿಯನ್ ದೇಶಗಳನ್ನು ಒಳಗೊಳ್ಳುತ್ತದೆ ಎಂದು ಅವರು ಟ್ರಂಪ್ ಹೇಳಿದರು. 20 ಅಂಶಗಳ ಶಾಂತಿ ಯೋಜನೆಯ ಕುರಿತು ಶೇ. 90 ರಷ್ಟು ಒಪ್ಪಂದವಿದೆ.

ಅಮೆರಿಕ-ಉಕ್ರೇನ್ ಭದ್ರತಾ ಖಾತರಿಗಳ ಕುರಿತು ಶೇ. 100 ರಷ್ಟು ಒಪ್ಪಂದವಿದೆ ಮತ್ತು ಅಮೆರಿಕ-ಯುರೋಪ್-ಉಕ್ರೇನ್ ಭದ್ರತಾ ಖಾತರಿಗಳ ಕುರಿತು ಬಹುತೇಕ ಶೇ. 100 ರಷ್ಟು ಒಪ್ಪಂದವಿದೆ ಎಂದು ಝೆಲೆನ್ಸಕಿ ಹೇಳಿದ್ದಾರೆ.

ಸಮೃದ್ಧಿ ಯೋಜನೆಯನ್ನು ಅಂತಿಮಗೊಳಿಸಲಾಗುತ್ತಿದೆ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಶಾಶ್ವತ ಶಾಂತಿಯನ್ನು ಸಾಧಿಸುವಲ್ಲಿ ಭದ್ರತಾ ಖಾತರಿಗಳು ಮುಖ್ಯವಾಗಿರುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ